ಮೈಸೂರು: ಮೈಸೂರು-ಬೆಂಗಳೂರು ನಡುವೆ ನೂತನವಾಗಿ ನಿರ್ಮಾಣವಾಗಿರುವ ಜೋಡಿ ಹಳಿ ವಿದ್ಯುದೀಕರಣ ಹಾಗೂ ಮೈಸೂರು-ಉದಯಪುರ ನಡುವೆ ಪ್ಯಾಲೆಸ್ ಕ್ವೀನ್ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಮೈಸೂರು ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮದುವಣಗಿತ್ತಿಯಂತೆ ತಯಾರಾಗಿದ್ದ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ನಂ. 1ಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರು-ಬೆಂಗಳೂರು ಜೋಡಿ ರೈಲ್ವೆ ಮಾರ್ಗದ ವಿದ್ಯುತೀಕರಣ ಮತ್ತು ಮೈಸೂರು-ಉದಯ್‌ಪುರ್ ನಡುವೆ ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.


990 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜೋಡಿ ರೈಲ್ವೆ ಮಾರ್ಗ ಹಾಗೂ 208 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯುತೀಕರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿವೆ.


ಮೈಸೂರು-ಉದಯಪುರ ಎಕ್ಸ್ಪ್ರೆಸ್ ರೈಲಿನ ವಿಶೇಷತೆ;


* ಈ ರೈಲು ತನ್ನ ಮಾರ್ಗದಲ್ಲಿ 30 ಲೋಕಸಭಾ ಕ್ಷೇತ್ರಗಳನ್ನು ಸಂಪರ್ಕಿಸುತ್ತದೆ.
* ಪ್ರವಾಸೋದ್ಯಮದಲ್ಲಿ ಹೊಸ ಆಯಾಮಗಳನ್ನು ಕಲ್ಪಿಸುತ್ತದೆ.
* ವಿಶ್ವದರ್ಜೆಯ ವೈಶಿಷ್ಟ್ಯತೆಗಳುಳ್ಳ ಹಾಗೂ ಹವಾನಿಯಂತ್ರಿತ ಬೋಗಿಗಳನ್ನು ಮಾತ್ರ ಹೊಂದಿರುವ ಭರ್ಜರಿ ರೈಲು.
* ಇದು ಪಶ್ಚಿಮ ಭಾರತದ ಐದು ರಾಜ್ಯಗಳಿಗೆ ಸಂಪರ್ಕ ಒದಗಿಸುತ್ತದೆ.