ಚುನಾವಣೆ ಸಮಯದಲ್ಲಿ ಗನ್ ಜಮೆಗೆ ಹಲವರಿಗೆ ರಿಯಾಯತಿ ನೀಡಿದ ಇಲಾಖೆ
Karnataka Lok Sabha Election 2024: ಲೋಕಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಏಪ್ರಿಲ್ 19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಗನ್ ಜಮೆ ಕುರಿತು ಪೊಲೀಸ್ ಇಲಾಖೆ ಮಹತ್ವ ನಿರ್ಧಾರ ಪ್ರಕಟಿಸಿದೆ.
ಬೆಂಗಳೂರು: ಯಾವೂದೇ ಚುನಾವಣಾ ಸಂದರ್ಭದಲ್ಲಿ ನಾಗರೀಕರು, ರಾಜಕಾರಣಿಗಳು, ಪ್ರಭಾವಿಗಳು ಹಾಗೂ ರೌಡಿ ಶೀಟರ್ ಗಳು ತಮ್ಮ ಬಳಿ ಇರೋ ಗನ್, ರೈಫಲ್ ಮತ್ತು ಪಿಸ್ತೂಲ್ ಮಾದರಿಯ ಶಸ್ತ್ರಾಸ್ತ್ರಗಳನ್ನ ತಮ್ಮ ಮನೆ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೋ ಆ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಬೇಕಿತ್ತು.
ಗನ್ ಜಮೆ ಮಾಡಿ ಚುನಾವಣಾ ಚಟುವಟಿಕೆ ಮುಗಿದ ನಂತರ ಈ ಗನ್ ಗಳನ್ನ ಬಿಡಿಸಿಕೊಳ್ಳುವುದು ನಿಯಮ. ಆದ್ರೆ ನಗರ ಪೊಲೀಸ್ ಇಲಾಖೆ ಈ ನಿಯಮದಲ್ಲಿ ಕೆಲ ಬದಲಾವಣೆ ತಂದಿದೆ. ನಾಲ್ಕು ವರ್ಗಗಳನ್ನ ಮಾಡಿರೊ ಇಲಾಖೆ ಈ ನಾಲ್ಕು ವರ್ಗಗಳಿಗೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗತ್ಯವಿಲ್ಲ ಎಂದು ಸೂಚನೆ ಹೊರಡಿಸಿದೆ.
ಇದನ್ನೂ ಓದಿ:ಕನ್ನಡ ಕಂದ ದಿವಂಗತ ಪುನೀತ್ ರಾಜ್‌ಕುಮಾರ್ 49ನೇ ವರ್ಷದ ಹುಟ್ಟುಹಬ್ಬ
ನಾಲ್ಕು ವರ್ಗಗಳು ಯಾವೂವು ಎಂದು ನೋಡೋದಾದ್ರೆ
1.ಜಾಮೀನಿನ ಮೇಲೆಹೊರಗಿರುವ ವ್ಯಕ್ತಿಗಳು
2.ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು.(ರೌಡಿ ಶೀಟರ್ಸ್)
3.ಈ ಹಿಂದೆ ಯಾವೂದೇ ಸಂದರ್ಭದಲ್ಲಿ ಗಲಭೆಯಲ್ಲಿ ಭಾಗಿಯಾಗಿರೋರು ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ
4.ಯಾವೂದೇ ರೀತಿಯ ಚುನಾವಣಾ ಸಂಭಂಧಿತ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಪರವಾನಗಿ
ಈ ಮೇಲ್ಕಂಡ ವರ್ಗದಲ್ಲಿರೋ ವ್ಯಕ್ತಿಗಳು ಖಡ್ಡಾಯವಾಗಿ ಗನ್ ಜಮೆ ಮಾಡಬೇಕು. ಈ ವರ್ಗಕ್ಕೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗ್ಯವಿಲ್ಲ ಎಂದು ಇಲಾಖೆ ಆದೇಶ ಹೊರಡಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.