ಬಿಬಿಎಂಪಿ ಕಸದ ವಾಹನಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರು!
ಟ್ರಾಫಿಕ್ ಪೊಲೀಸರು ಬಿಬಿಎಂಪಿ ಕಸದ ವಾಹನಗಳ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದು, ವಾಹನಗಳನ್ನು ಓವರ್ ಸ್ಪೀಡ್‌ನಲ್ಲಿ ಓಡಿಸಬಾರದು. ಜೊತೆಗೆ ಸಮವಸ್ತ್ರದಲ್ಲಿಯೇ ಇರಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಇತ್ತೀಚೆಗೆಯಷ್ಟೇ ಸಾವನ್ನಪ್ಪಿದ್ದರು. ಈ ಪ್ರಕರಣ ನಡೆದ ಬಳಿಕ ಎಚ್ಚೆತ್ತ ಬೆಂಗಳೂರು ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನು ಓದಿ: ಸ್ಕೂಟರ್ ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ, ಸ್ಥಳದಲ್ಲೇ ಮಹಿಳೆ ಸಾವು
ನಗರದ ಎಲ್ಲಾ ಟ್ರಾಫಿಕ್ ಪೊಲೀಸರು ಬಿಬಿಎಂಪಿ ಕಸದ ವಾಹನಗಳ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದು, ವಾಹನಗಳನ್ನು ಓವರ್ ಸ್ಪೀಡ್‌ನಲ್ಲಿ ಓಡಿಸಬಾರದು. ಜೊತೆಗೆ ಸಮವಸ್ತ್ರದಲ್ಲಿಯೇ ಇರಬೇಕು ಎಂದು ಸೂಚಿಸಿದ್ದಾರೆ.
"ವಾಹನ ಚಾಲನೆ ಮಾಡುವಾಗ ಮದ್ಯಪಾನ ಮಾಡಬಾರದು. ಬಿಬಿಎಂಪಿ ನಿಯಮಗಳನ್ನ ತಪ್ಪದೇ ಪಾಲಿಸತಕ್ಕದ್ದು ಎಂದು ಬಿಬಿಎಂಪಿ ವಾಹನ ಚಾಲಕರು, ಸಿಬ್ಬಂದಿ ಹಾಗೂ ಏಜೆಂಟ್‌ಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಮದರಸದಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಬೇಡಿಕೆ.. ಆಧಾರವಿಲ್ಲದ ಟಿಪ್ಪು ಸಂಗತಿಗಳಿಗೆ ಕೊಕ್!
ನಗರದ ಪಶ್ಚಿಮ ವಿಭಾಗ ಸಂಚಾರಿ ವ್ಯಾಪ್ತಿಯಲ್ಲಿ 252 ವಾಹನಗಳ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 82 ಬಿಬಿಎಂಪಿ ವಾಹನಗಳಿಂದ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ಸಮವಸ್ತ್ರ ಧರಿಸದಿರುವುದು, ಸಿಗ್ನಲ್ ಜಂಪ್, ಸರಿಯಾದ ನಂಬರ್ ಪ್ಲೇಟ್ ಹೊಂದಿರದೆ ಇರುವುದು, ಎಫ್‌ಸಿ ಹಾಗೂ ಇನ್ಶ್ಯುರೆನ್ಸ್ ಇದ್ದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದೆ ಪರಿಣಾಮವಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ದುರ್ಘಟನೆ ನಾಯಂಡಹಳ್ಳಿಯಲ್ಲಿ ನಡೆದಿತ್ತು. ಮೃತಪಟ್ಟಿರುವ ಮಹಿಳೆಯನ್ನು ಪದ್ಮಿನಿ ಎಂದು ಗುರುತಿಸಲಾಗಿದ್ದು, ಲಾರಿ ಡಿಕ್ಕಿ ಹೊಡೆದಿದ್ದರಿಂದಾಗಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆಗೆ ಸ್ಕೂಟರ್‌ಗೆ ಬಿಬಿಎಂಪಿ ಲಾರಿಯು ಡಿಕ್ಕಿ ಹೊಡೆಯುತ್ತಿದ್ದಂತೆ ಲಾರಿ ಚಾಲಕನು ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.