ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ನೂತನ ಪೊಲೀಸ್ ಗಸ್ತು ವಾಹನಕ್ಕೆ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಪೊಲೀಸ್‌ ಸಿಬ್ಬಂದಿಗೆ 911 ದ್ವಿಚಕ್ರ ಗಸ್ತು ವಾಹನವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಇಂದು ವಿಧಾನಸೌಧ ಮುಂಭಾಗ ಸಾರ್ವಜನಿಕ ಸೇವೆಗೆ ಅರ್ಪಿಸಿದರು. 



ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್, ಬೆಂಗಳೂರು ಪೊಲೀಸ್‌ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇಲಾಖೆಗೆ ಇನ್ನಷ್ಟು ಬಲ ತುಂಬಲು 911 ದ್ವಿಚಕ್ರ ವಾಹನಗಳನ್ನು ಗುಸ್ತು ತಿರುಗಲು ನೀಡಲಾಗಿದೆ. 


ಈಗಾಗಲೇ 300 ಹೊಯ್ಸಳ ಕಾರುಗಳು ಗಸ್ತು ತಿರುಗುತ್ತಿವೆ. ಆದರೆ ಕೆಲ ಬೀದಿಗಳಿಗೆ ಕಾರುಗಳು ಹೋಗಲು ಸಾಧ್ಯವಿಲ್ಲ.‌ ಹೀಗಾಗಿ ನಗರದೆಲ್ಲೆಡೆ ಗಸ್ತು ತಿರುಗಲು ಬೈಕ್‌ ನೀಡಲಾಗಿದ್ದು, ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.


ಹೊಸ ವರ್ಷ ಸಮೀಪಿಸುತ್ತಿದ್ದು, ಈ ಆಚರಣೆ ನಗರದೆಲ್ಲೆಡೆ ನಡೆಯಲಿದೆ.‌ ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಂದೇ 911 ದ್ವಿಚಕ್ರ ಗಸ್ತು ವಾಹನ ನೀಡಲಾಗಿದೆ ಎಂದರು.