ಬೆಂಗಳೂರು : ಈ ಭಾರಿ ಎಂಭತ್ತು ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ. ಪ್ರಥಮ ಬಾರಿಗೆ 9,17,241 ಮಂದಿ (18+) ಮತದಾನ ಮಾಡಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಆಯುಕ್ತ ರಾಜೀವ್ ಕುಮಾರ್, 17 ವರ್ಷ ಮೇಲ್ಪಟ್ಟ 1,25,406 ಮಂದಿಯಿಂದ ಹೊಸದಾಗಿ ಅರ್ಜಿಗಳು ಬಂದಿವೆ. 58,282 ಸಾವಿರ ಮತಗಟ್ಟೆ ಕೇಂದ್ರಗಳು, 883 ಮತದಾರರಿರುವ ಕಡೆ ಒಂದು ಮತಗಟ್ಟೆ ಮಾಡಲಾಗುತ್ತದೆ. ನಗರ ಪ್ರದೇಶಗಳಲ್ಲಿ 24063 , ಗ್ರಾಮೀಣ ಪ್ರದೇಶಗಳಲ್ಲಿ 34219 ಮತಗಟ್ಟೆಗಳ ಸ್ಥಾಪನೆ ಮಾಡಲಾಗುವುದು.


ಇದನ್ನೂ ಓದಿ : ಮಾನಸಿಕ ಒತ್ತಡ ಧ್ರುವನಾರಾಯಣರನ್ನು ಬಲಿ ಪಡೆಯಿತು: ಶಾಸಕ ಎನ್.ಮಹೇಶ್


ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5,21,73,599 ಇದ್ದಾರೆ. ಈ ಪೈಕಿ 2,62,42,561 ಪುರುಷ ಮತದಾರರಿದ್ದು. ಮತ್ತೆ, 2,59,26,319 ಮಹಿಳಾ ಮತದಾರರಿದ್ದಾರೆ. 47,779 ಸರ್ಕಾರಿ ನೌಕರ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 


ಮತಗಟ್ಟೆಗಳ ವಿವರ


ಒಟ್ಟು ಮತಗಟ್ಟೆಗಳು - 58,282 


ನಗರ ಪ್ರದೇಶದಲ್ಲಿ  - 24,063 


ಮಹಿಳೆಯರಿಂದ ನಿರ್ವಹಣೆ ಮಾಡುವ ಮತಗಟ್ಟೆಗಳು - 1320 


ಗ್ರಾಮೀಣ ಭಾಗದಲ್ಲಿ ಇರುವ ಮತಗಟ್ಟೆಗಳು - 34,219 


ಮಾದರಿ ಮತಗಟ್ಟೆಗಳ ಸಂಖ್ಯೆ - 240


ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಸಂಖ್ಯೆ - 42,312 


224 ಕ್ಷೇತ್ರಗಳ ಪೈಕಿ 


ಎಸ್.ಸಿ ಮೀಸಲು - 36 


ಎಸ್.ಟಿ ಮೀಸಲು - 15 


ಸಾಮಾನ್ಯ ಕ್ಷೇತ್ರಗಳು - 173


ಇನ್ನು ಮುಂದುವರೆದು ಮಾತನಾಡಿದ ಅವರು, ಚುನಾವಣೆ ಮೇಲೆ ಆಯೋಗ ಹದ್ದಿನ ಕಣ್ಣು ಇಡಲಿದೆ. ಚುನಾವಣಾ ಅಕ್ರಮ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಹಣ, ಗಿಫ್ಟ್‌ಗಳು,  ಸಾಗಾಟ ತಡೆಯಲು ವಿಶೇಷ ತಂಡ ರಚನೆಯಾಗಿದೆ. ಹೆಲಿಕ್ಯಾಪ್ಟರ್, ವಿಮಾನಗಳ ಮೇಲೂ ನಿಗಾವಹಿಸಲಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ನಗರದ ಮೇಲೆ ಪೊಲೀಸ್ ಹದ್ದಿನ ಕಣ್ಣು: ಸೇಫ್ ಸಿಟಿ‌ ಯೋಜನೆಯ ಡಿಟೇಲ್ಸ್ ಇಲ್ಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.