ನಗರದ ಮೇಲೆ ಪೊಲೀಸ್ ಹದ್ದಿನ ಕಣ್ಣು: ಸೇಫ್ ಸಿಟಿ‌ ಯೋಜನೆಯ ಡಿಟೇಲ್ಸ್ ಇಲ್ಲಿದೆ..

Bangalore Police : ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ನಿರ್ಮಾಣವಾಗಿರುವ ಬೆಂಗಳೂರು ಸೇಫ್ ಸಿಟಿ ಯೋಜನೆಯ ನಿಯಂತ್ರಣ ಕೋಣೆಯ ವಿಶೇಷತೆಗಳ ಕುರಿತು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಮಾತನಾಡಿದ್ದಾರೆ.   

Written by - VISHWANATH HARIHARA | Last Updated : Mar 11, 2023, 03:11 PM IST
  • ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆ
  • ಬೆಂಗಳೂರು ಸೇಫ್ ಸಿಟಿ ಯೋಜನೆಯ ನಿಯಂತ್ರಣ ಕೋಣೆ
  • ಸೇಫ್ ಸಿಟಿ‌ ಯೋಜನೆಯ ಡಿಟೇಲ್ಸ್ ಇಲ್ಲಿದೆ..
ನಗರದ ಮೇಲೆ ಪೊಲೀಸ್ ಹದ್ದಿನ ಕಣ್ಣು: ಸೇಫ್ ಸಿಟಿ‌ ಯೋಜನೆಯ ಡಿಟೇಲ್ಸ್ ಇಲ್ಲಿದೆ.. title=
Bangalore Police

ಬೆಂಗಳೂರು : ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ನಿರ್ಮಾಣವಾಗಿರುವ ಬೆಂಗಳೂರು ಸೇಫ್ ಸಿಟಿ ಯೋಜನೆಯ ನಿಯಂತ್ರಣ ಕೋಣೆಯ ವಿಶೇಷತೆಗಳ ಕುರಿತು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಮಾತನಾಡಿದ್ದಾರೆ. ನಿರ್ಭಯಾ ಪ್ರಕರಣದ ಬಳಿಕ ದೇಶದ ಮಹಾನಗರಗಳಲ್ಲಿ ನಿರ್ಮಾಣವಾಗುತ್ತಿರುವ ಸೇಫ್ ಸಿಟಿ ಯೋಜನೆಯ ಮೊದಲ ಹಂತದ ಸಿದ್ಧತೆ ಬೆಂಗಳೂರು ನಗರದಲ್ಲಿ ಪೂರ್ಣಗೊಂಡಿದ್ದು, ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದರು‌. 

ಯೋಜನೆಯಲ್ಲಿ ನಗರದಲ್ಲಿ 4100  ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇನ್ನೂ 3 ಸಾವಿರ ಕ್ಯಾಮೆರಾ ಅಳವಡಿಸುವ ಕಾರ್ಯ ಬಾಕಿಯಿದೆ. ಎಚ್.ಡಿ ಕ್ಯಾಮೆರಾ, 360 ಡಿಗ್ರಿ, ಡ್ರೋಣ್, ಬಾಡಿವೋರ್ನ್ ಕ್ಯಾಮರಾಗಳನ್ನು ಈ ವ್ಯವಸ್ಥೆಯು ಹೊಂದಿದ್ದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪ್ರತಿ ಕ್ಯಾಮರಾದ ಲೈವ್, ಹಿಂದಿನ ದೃಶ್ಯಗಳನ್ನ ವೀಕ್ಷಿಸಬಹುದಾಗಿದೆ. ಪ್ರತಿ ಠಾಣೆಗಳಲ್ಲಿ ಆಯಾ ಠಾಣೆಗಳ ವ್ಯಾಪ್ತಿಯ ಕ್ಯಾಮರಾ ದೃಶ್ಯಗಳನ್ನ ವೀಕ್ಷಿಸಲು ಇಲ್ಲಿ ಅನುಕೂಲವಾಗಲಿದೆ‌.  

ಇದನ್ನೂ ಓದಿ: H3N2 ಹೇಗೆ ಗುರುತಿಸುವುದು? ರೋಗಲಕ್ಷಣ, ತಡೆಗಟ್ಟುವ ವಿಧಾನ ಇಲ್ಲಿದೆ

ಇದಲ್ಲದೇ ನಗರದ 30 ಭಾಗಗಳಲ್ಲಿ ಸೇಫ್ಟಿ ಐಲ್ಯಾಂಡ್ ವಿತ್ ಅಲರ್ಟ್ ಬಟನ್ ನಿರ್ಮಿಸಲಾಗಿದೆ.ಯಾವುದೇ ಅಪರಾಧ ನಡೆದಾಗ ಸೇಫ್ಟಿ ಐಲ್ಯಾಂಡ್ ಬಳಿ‌ ಬಂದು ಬಟನ್ ಪ್ರೆಸ್ ಮಾಡಿದರೆ ತಕ್ಷಣ ಸೈರನ್ ನಿಯಂತ್ರಣ ಕೊಠಡಿಗೆ ವರ್ಗಾವಣೆಯಾಗಲಿದೆ. ಜೊತೆಗೆ ಪಕ್ಕದಲ್ಲಿರುವ ಕ್ಯಾಮರಾ ಸೇಫ್ಟಿ ಐಲ್ಯಾಂಡ್ ಸಮೀಪದಲ್ಲಿರುವ ಲೈವ್ ದೃಶ್ಯಗಳನ್ನ ನಿಯಂತ್ರಣ ಕೊಠಡಿಗೆ ರವಾನಿಸಲಿದೆ. ವಿಶೇಷವೆಂದರೆ ಸೇಪ್ಟಿ ಐಲ್ಯಾಂಡಿನಿಂದ ಫೋನ್ ಇಲ್ಲದೆಯೇ ನೇರವಾಗಿ ನಿಯಂತ್ರಣ ಕೊಠಡಿಯನ್ನ ಸಂಪರ್ಕಿಸಬಹುದು.

ಯೋಜನೆಯ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ '2019ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಸೇಫ್ ಸಿಟಿ ಯೋಜನೆ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನಿಲ್ ಕುಮಾರ್ ಅವಧಿಯಲ್ಲಿ ಆರಂಭವಾಗಿದ್ದು 667 ಕೋಟಿ‌ ಮೌಲ್ಯದ್ದಾಗಿದೆ. ಸದ್ಯ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು ಸಾಕಷ್ಟು ವಿಶೇಷತೆಗಳನ್ನ ಹೊಂದಿದೆ. 

ಇದನ್ನೂ ಓದಿ: ಹೃದಯಾಘಾತ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ನಿಧನ

ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನಿಲ್ ಕುಮಾರ್, ಅಲೋಕ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್, ಐಪಿಎಸ್ ಅಧಿಕಾರಿಗಳಾದ ಸೌಮೇಂದು‌ ಮುಖರ್ಜಿ, ಸುಬ್ರಹ್ಮಣ್ಯೇಶ್ವರ್ ರಾವ್, ಸಂತೋಷ್ ಬಾಬು, ಚಂದ್ರಶೇಖರ್ ರಾವ್, ನಿಶಾ ಜೇಮ್ಸ್, ಲಕ್ಷ್ಮೀ ಪ್ರಸಾದ್ ಸೇರಿದಂತೆ ಯೋಜನೆಯ ಭಾಗವಾಗಿರುವ ಪ್ರತಿಯೊಬ್ಬ ಅಧಿಕಾರಿಯ ಕೆಲಸ ಶ್ಲಾಘನೀಯ ಎಂದರು.

ಮುಂದಿನ ಆರು ತಿಂಗಳಿನಲ್ಲಿ‌ ಯೋಜನೆಯ ಎರಡನೇ ಹಂತ ಪೂರ್ಣಗೊಳಲ್ಲಿದ್ದು ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ ತರಲಿದೆ ಎಂದು ನಗರ ಪೊಲೀಸ್ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News