ಬೆಂಗಳೂರು :  ಹೊಸ ವರ್ಷ ಕಾಲಿಡುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆ ಪರ್ವ ಕೂಡಾ ಶುರುವಾಗಿದೆ. ರಾಜ್ಯದ ಜನತೆಗೆ ಇದೀಗ ವಿದ್ಯುತ್ ಕಂಪೆನಿಗಳು ಬೆಲೆ ಏರಿಕೆ ಶಾಕ್ ನೀಡಲಿವೆ. ವಿದ್ಯುತ್ ದರ  ಏರಿಕೆಗೆ ಅವಕಾಶ ಕಲ್ಪಿಸಿ ರಾಜ್ಯ ವಿದ್ಯುತ್ ಆಯೋಗ – ಕೆಇಆರ್ ಸಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ವಿದ್ಯುತ್ ಕಂಪನಿಗಳ ನಷ್ಟ ಸರಿದೂಗಿಸಲು ಗ್ರಾಹಕರ ಮೇಲೆ ಬೆಲೆ ಏರಿಕೆ (Rate Hike) ಬರೆ ಎಳೆಯಲಾಗುತ್ತಿದೆ. ವಿದ್ಯುತ್ ಕಂಪನಿಗಳ ನಷ್ಟದ ಪ್ರಮಾಣ ತಪ್ಪಿಸಲು ಕೆ ಇ ಆರ್ ಸಿ (KERC)ಈ ಆದೇಶ ಹೊರಡಿಸಿದೆ. ಜನವರಿ 1 ರಿಂದ ಮಾರ್ಚ್ 31ರವರೆಗೆ ಸೀಮಿತವಾಗಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ (Electricity Bill) 4 ರಿಂದ 8 ಪೈಸೆವರೆಗೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ವಿದ್ಯುತ್ ಆಯೋಗ ಆದೇಶ ನೀಡಿದೆ. ಹಾಗಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟುವುದು ಖಚಿತವಾಗಿದೆ. ನವೆಂಬರ್ ನಿಂದ ಇದುವರೆಗೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಸಲ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿತ್ತು. 


ಇದನ್ನೂಓದಿ : ಸೆಪ್ಟೆಂಬರ್ 1ರಿಂದ ದೇಶಾದ್ಯಂತ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆಯೇ? ಇಲ್ಲಿದೆ ಸತ್ಯಾಸತ್ಯತೆ


ವಿದ್ಯುತ್ ಬಿಲ್ ಎಷ್ಟು ಏರಿಕೆಯಾಗುತ್ತೆ..?
ಎಸ್ಕಾಂಗಳ ನಷ್ಟದ ಹೊರೆ ತಪ್ಪಿಸಲು ಬೆಲೆ ಏರಿಕೆಗೆ ಆದೇಶ ನೀಡಲಾಗಿದೆ ಎಂದು ಕೆಇಆರ್ ಸಿ ತನ್ನ ಆದೇಶವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಜನವರಿ 1 ಕ್ಕೆ ಪೂರ್ವಾನ್ವಯವಾಗಿ ಮಾರ್ಚ್ 31ರಅವಧಿಯ ತನಕ  ವಿದ್ಯುತ್ ಬಿಲ್ ಜಾಸ್ತಿ ಆಗಲಿದೆ. ಬೆಸ್ಕಾಂ  ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 8 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ.  ಮೆಸ್ಕಾಂ( MESCOM), ಸೆಸ್ಕ್ ಮತ್ತು ಚೆಸ್ಕಾಂ (CHESCOM)ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 5 ಪೈಸೆ ಏರಿಕೆಯಾಗಬಹುದು. ಹೆಸ್ಕಾಂ (HESCOM) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 4 ಪೈಸೆ ಏರಿಸಲು ಕೆಇಆರ್ ಸಿ ಅವಕಾಶ ಕಲ್ಪಿಸಿಕೊಟ್ಟಿದೆ. ಮಾರ್ಚ್ 31ರ ತನಕ ಮಾತ್ರ ಪರಿಷ್ಕೃತ ದರ ಸಂಗ್ರಹಿಸಬಹುದಾಗಿದೆ. 


ಕರೋನಾ (Coronavirus) ಮಹಾಮಾರಿಯ ನಡುವೆಯೂ ನ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಮೇಲೆ ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು.. ಇಂಧನ ವೆಚ್ಚ, ಹೊಂದಾಣಿಕೆ ಶುಲ್ಕ ಹೆಚ್ಚಳ ಸರಿತೂಗಿಸಲು ಈಗ ಮತ್ತೆ ದರ  ಏರಿಕೆಗೆ ಅವಕಾಶ ನೀಡಿ ಆದೇಶ ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.