ನವದೆಹಲಿ: ವಿದ್ಯುತ್ ಬಿಲ್ ಮನ್ನಾ ಬಗ್ಗೆ ನೀವು ಯಾವುದೇ ಸುದ್ದಿಯನ್ನು ಓದಿದ್ದೀರಾ? ಸೆಪ್ಟೆಂಬರ್ 1 ರಿಂದ ನಿಮ್ಮ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂಬ ಸುದ್ದಿ ಹಲವೆಡೆ ಕೇಳಿಬರುತ್ತಿದೆ. ಆದರೆ ಇದು ನಿಜ ಎಂದು ನೀವು ಭಾವಿಸಿದ್ದರೆ ಅದಕ್ಕೂ ಮೊದಲೂ ಈ ಸುದ್ದಿಯನ್ನು ಓದಿ ಸತ್ಯಾಸತ್ಯತೆ ಬಗ್ಗೆ ತಿಳಿಯಿರಿ. ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂಬ ಸುದ್ದಿ ನಕಲಿ ಸುದ್ದಿಯಾಗಿದ್ದು ಇಂತಹ ಯಾವುದೇ ಸುದ್ದಿಯನ್ನೂ ನಂಬಬೇಡಿ.
ಜನರ ಹೊರೆ ಕಡಿಮೆ ಮಾಡಲು ಮುಂದಾದ ಸರ್ಕಾರ, 86 ಲಕ್ಷ ಗ್ರಾಹಕರಿಗೆ ಲಾಭ
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಯೂಟ್ಯೂಬ್ (ಯೂಟ್ಯೂಬ್ ವಿಡಿಯೋ ಫೇಕ್) ನಲ್ಲಿ ವೀಡಿಯೊ ವೈರಲ್ ಆಗುತ್ತಿದೆ. ವಿದ್ಯುತ್ ಬಿಲ್ (Electricity Bill) ಮನ್ನಾ ಯೋಜನೆ 2020 ಅನ್ನು ಸರ್ಕಾರ ತರುತ್ತಿದೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಈ ಯೋಜನೆಯಡಿ ಎಲ್ಲ ಜನರ ಮನೆಗಳ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
एक #Youtube वीडियो में यह दावा किया जा रहा है कि बिजली बिल माफी योजना 2020 के तहत 1 सितंबर से पूरे देश मे सबका बिजली बिल माफ होगा। #PIBFactCheck: यह दावा फर्जी है। सरकार द्वारा ऐसी किसी योजना की घोषणा नहीं की गई है pic.twitter.com/sKt7yljiJr
— PIB Fact Check (@PIBFactCheck) August 28, 2020
ಪಿಐಬಿ ಫ್ಯಾಕ್ಟ್ ಚೆಕ್:
ಆದರೆ ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿರುವ ಪಿಐಬಿ ಇದೊಂದು ನಕಲಿ ಸುದ್ದಿ ಎಂದು ಹೇಳಿದ್ದು ಸರ್ಕಾರ ಇಂತಹ ಯಾವುದೇ ಯೋಜನೆಯನ್ನೂ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೊರೋನಾ ಭೀತಿ ನಡುವೆ ಜನತೆಗೆ ಕೇಂದ್ರ ಸರ್ಕಾರದ ಮತ್ತೊಂದು ಉಡುಗೊರೆ
ಈ ಹಕ್ಕು ಸಂಪೂರ್ಣವಾಗಿ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಹೇಳಿದೆ. ಸರ್ಕಾರ ಪ್ರಸ್ತುತ ಅಂತಹ ಯಾವುದೇ ಯೋಜನೆಯನ್ನು ತರುತ್ತಿಲ್ಲ. ಇದಲ್ಲದೆ ಯಾವುದೇ ಬಳಕೆದಾರರು ಅಂತಹ ಸುದ್ದಿಗಳನ್ನು ನಂಬಬಾರದು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ.
ನೀವು ಸಂದೇಶವನ್ನು ಪರಿಶೀಲಿಸಬಹುದು:
ನೀವು ಸಹ ಅಂತಹ ಸಂದೇಶವನ್ನು ಸ್ವೀಕರಿಸಿದರೆ ನೀವು ಅದನ್ನು https://factcheck.pib.gov.in/ ಅಥವಾ ವಾಟ್ಸಾಪ್ ಸಂಖ್ಯೆ +918799711259 ಅಥವಾ ಇಮೇಲ್: pibfactcheck@gmail.com ನಲ್ಲಿ ಫ್ಯಾಕ್ಟ್ ಚೆಕ್ಗಾಗಿ ಪಿಐಬಿಗೆ ಕಳುಹಿಸಬಹುದು. ಈ ಮಾಹಿತಿಯು ಪಿಐಬಿ ವೆಬ್‌ಸೈಟ್ https://pib.gov.in ನಲ್ಲಿಯೂ ಲಭ್ಯವಿದೆ.