ಹುಬ್ಬಳ್ಳಿ: ಭಾರತವನ್ನು 58 ವರ್ಷಗಳ ಸುದೀರ್ಘ ಕಾಲ ಗಾಂಧಿ ಕುಟುಂಬವೇ ಆಳಿದ್ದು, ನಕಲಿ ಗಾಂಧಿ ಕಂಪನಿಯದ್ದೇ ಕಾರುಬಾರಿತ್ತು. ಹಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಗಾಂಧಿ ಕುಟುಂಬದಲ್ಲಿ ಅಂದಿಗೂ-ಇಂದಿಗೂ ಬಹಳ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ:
ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ.ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಧೈರ್ಯವೂ ಕಾಂಗ್ರೆಸ್ಸಿಗಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ವೋಟು ಕೂಡಾ ಬರುವುದಿಲ್ಲ ಎಂಬ ಭಯ ಕಾಂಗ್ರೆಸಿಗಿದೆ ಎಂದು ಜೋಶಿ ಲೇವಡಿ ಮಾಡಿದರು.


ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣದಿಂದ ನುಣುಚಿಕೊಳ್ಳಲು ಶಿವಕುಮಾರ್ ವಿರುದ್ಧ ಅನಗತ್ಯ ಆರೋಪ ಮಾಡ್ತಿದ್ದಾರೆ: ಡಿ.ಕೆ. ಸುರೇಶ್


ಒಂದು ಸುರಕ್ಷಿತ,ಸುಭದ್ರ ದೇಶಕ್ಕೆ ರಕ್ಷಣಾ ನೀತಿ,ಬಲಿಷ್ಠ ಆರ್ಥಿಕ ನೀತಿ ಇರಬೇಕು.  ಆದರೆ, ಕಾಂಗ್ರೆಸ್ ಗೆ ದೇಶದ ರಕ್ಷಣೆ ಬೇಕಿಲ್ಲ.ಬರೀ ಅಧಿಕಾರ, ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣಕ್ಕೇ ಮಹತ್ವ ಕೊಡುತ್ತದೆ ಎಂದು ಆರೋಪಿಸಿದರು.


ಮೋದಿ ನೇತೃತ್ವದ ಭಾರತ ಬಲಿಷ್ಠ:
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ಬಲಿಷ್ಠವಾಗುತ್ತಿದೆ. ಜಾಗತಿಕವಾಗಿ ತನ್ನ ತಾಕತ್ತನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿದರು.


ಹಿಂತಿರುಗಿ ನೋಡದ ಭಾರತ: ಆರ್ಥಿಕವಾಗಿ ಭಾರತ ಹಿಂತಿರುಗಿ ನೋಡದಂತೆ ಸಶಕ್ತವಾಗಿದೆ.ಅಭಿವೃದ್ಧಿಯಲ್ಲೂ ಮುಂದಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು "ಮೋದಿ ಇಂಡಿಯಾ" ಎಂದು ಗುರುತಿಸುವಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದು ಹೇಳಿದರು.


ಇದನ್ನೂ ಓದಿ : Hassan PenDrive Case: ಮೇ 3ರಂದು ಜರ್ಮನಿಯಿಂದ ಬೆಂಗಳೂರಿಗೆ ಪ್ರಜ್ವಲ್​ ರೇವಣ್ಣ ವಾಪಸ್!‌


ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ 60000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು. ಆದರೆ ವಾಜಪೇಯಿ ಅವರು ಐದೇ ವರ್ಷದಲ್ಲಿ 30000 ಕಿ.ಮೀ.ಹೆದ್ದಾರಿ ನಿರ್ಮಿಸಿದರು. ಇನ್ನು ಪ್ರಧಾನಿ ಮೋದಿ ಹತ್ತೇ ವರ್ಷದಲ್ಲಿ 4 ಲೈನ್, 6 ಲೈನ್, 8 ಲೈನ್, 10 ಲೈನ್ ಎಲ್ಲಾ ಸೇರಿ ಒಟ್ಟು 60000 ಕೈ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದಾರೆ ಎಂದು ಸಚಿವ ಜೋಶಿ ವಿವರಿಸಿದರು.


ಭಯೋತ್ಪಾದನೆಗೆ ಬೀಗ: 
ಹಿಂದೆ ದೇಶಾದ್ಯಂತ ಬಾಂಬ್ ಗಳು ಹಾರುತ್ತಿದ್ದವು.ಸೈನಿಕರನ್ನು,ಅಮಾಯಕ ಜನರನ್ನು ಕಳೆದುಕೊಂಡು ಮೇಣದ ಬತ್ತಿ ಹಚ್ಚಿ ಸುಮ್ಮನಾಗುವ ಕಾಲವಿತ್ತು. ಇದೀಗ ಈ ದಿನಗಳಿಲ್ಲ.ಭಯೋತ್ಪಾದಕರು ತಯಾರಾಗುವ ತಾಣದಲ್ಲೇ ಹೊಡೆದುರುಳಿಸುವಷ್ಟು ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.