ಹುಬ್ಬಳ್ಳಿ: ನಟ ದರ್ಶನ್ ವಿಚಾರವಾಗಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್​ ಪ್ರಕರಣದಲ್ಲಿ ರಾಜ್ಯ ಸರ್ಕಾರ ಫೇಲ್ಯೂರ್ ಆಗಿದೆ ಎಂದು ಆರೋಪಿಸಿದರು.


ಇದನ್ನೂ ಓದಿ: ಅರ್ಹತೆ ಎರಡೂ ಇದ್ದರೂ ನಾಯಕತ್ವ ಪಡೆಯುವಲ್ಲಿ ವಂಚಿತರಾದ ಭಾರತದ 5 ಶ್ರೇಷ್ಠ ಕ್ರಿಕೆಟಿಗರಿವರು


ಜೈಲಿನಲ್ಲಿ ಇರುವ ಕೊಲೆ ಆರೋಪಿ ದರ್ಶನ್​​ಗೆ ರಾಜಾತಿಥ್ಯ ನೀಡುತ್ತಿರವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲವೆಂದು ಕಿಡಿ ಕಾರಿದರು.


ದರ್ಶನ್ʼಗೆ ಜೈಲಲ್ಲಿ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಈಗ ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇಷ್ಟು ದಿನ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಎಂದು ಪ್ರಶ್ನಿಸಿದ ಜೋಶಿ, ಇದರಲ್ಲಿ ಕೆಲವು ರಾಜಕಾರಣಿಗಳ ಹಸ್ತಕ್ಷೇಪವೂ ಇದೆ ಎಂದು ಆರೋಪಿಸಿದರು.


ಇದನ್ನೂ ಓದಿ:  "ಕೋಟಿಗಟ್ಟಲೆ ಹಣ ಕೊಡ್ತೀನಿ ಅಂದ್ರು ಬಿಗ್‌ ಬಾಸ್‌ʼಗೆ ಹೋಗಲ್ಲ"- ಬರಲ್ಲ ಬರಲ್ಲ ಅಂತಾ ಭಾರೀ ಡಿಮ್ಯಾಂಡ್‌ ಮಾಡ್ತಿರೋ ಆ ಸೆಲೆಬ್ರಿಟಿ ಯಾರು?


ದರ್ಶನ್ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಲು  ಪ್ಲ್ಯಾನ್ ಮಾಡಿದಂತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರವೇ ದರ್ಶನ್ ರಕ್ಷಣೆಗೆ ನಿಂತಂತಿದೆ. ಅನಿಸುತ್ತದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಶಂಕೆ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.