Team India Cricketers: ಪ್ರತಿಯೊಬ್ಬ ಭಾರತೀಯ ಕ್ರಿಕೆಟಿಗನ ಕನಸು ತನ್ನ ದೇಶಕ್ಕಾಗಿ ಮತ್ತು ಟೀಮ್ ಇಂಡಿಯಾ ನಾಯಕನಾಗಿ ಒಮ್ಮೆ ಕ್ರಿಕೆಟ್ ಆಡಬೇಕು ಎಂಬುದು. ಆದರೆ ದುರದೃಷ್ಟಕರ ಎಂಬಂತೆ ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ಈ 5 ಶ್ರೇಷ್ಠ ಕ್ರಿಕೆಟಿಗರಿಗೆ ಟೀಂ ಇಂಡಿಯಾದ ನಾಯಕತ್ವ ಪಡೆಯಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಹುಣಸೆ ರಸವನ್ನು ಈ ರೀತಿ ಬಳಸಿದರೆ ಬಿಳಿಕೂದಲು ಕಡುಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ! ತಲೆಹೊಟ್ಟು ಸಹ ನಿವಾರಣೆಯಾಗುತ್ತದೆ
ಯುವರಾಜ್ ಸಿಂಗ್: ಯುವರಾಜ್ ಸಿಂಗ್ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದರು. ಆದರೆ ಇದರ ಹೊರತಾಗಿಯೂ ಎಂದಿಗೂ ಭಾರತದ ನಾಯಕರಾಗಲು ಸಾಧ್ಯವಾಗಲಿಲ್ಲ. ಯುವರಾಜ್ ಏಕಾಂಗಿಯಾಗಿ ಭಾರತವನ್ನು 2007 T20 ವಿಶ್ವಕಪ್ ಮತ್ತು 2011 ODI ವಿಶ್ವಕಪ್‌ನ ಪ್ರಶಸ್ತಿಗೆ ಕೊಂಡೊಯ್ದರು. ಇನ್ನು ಯುವಿಯನ್ನು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 2007ರ ಟಿ20 ವಿಶ್ವಕಪ್ʼನಲ್ಲಿ ಇಂಗ್ಲೆಂಡ್ ಬೌಲರ್ ಸ್ಟೀವರ್ಡ್ ಬ್ರಾಡ್ ಅವರ ಓವರ್ʼನ 6 ಎಸೆತಗಳಲ್ಲಿ ಯುವರಾಜ್ ಸಿಂಗ್ 6 ಸಿಕ್ಸರ್ ಬಾರಿಸಿದ್ದರು.
ರವಿಚಂದ್ರನ್ ಅಶ್ವಿನ್: ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಐಪಿಎಲ್ʼನಲ್ಲಿ ನಾಯಕತ್ವ ವಹಿಸಿರುವ ಅನುಭವವಿದ್ದರೂ ಟೀಂ ಇಂಡಿಯಾ ನಾಯಕರಾಗಲು ಇನ್ನೂ ಸಾಧ್ಯವಾಗಿಲ್ಲ. ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 744 ವಿಕೆಟ್ ಪಡೆದಿದ್ದಾರೆ.
ಹರ್ಭಜನ್ ಸಿಂಗ್: ಭಾರತದ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾದ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ 711 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ʼನಂತಹ ದೊಡ್ಡ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.
ವಿವಿಎಸ್ ಲಕ್ಷ್ಮಣ್: ಭಾರತದ ಮಾಜಿ ಬ್ಯಾಟ್ಸ್ʼಮನ್ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ವಿವಿಎಸ್ ಲಕ್ಷ್ಮಣ್ ಅಂತಾರಾಷ್ಟ್ರೀಯ ಕ್ರಿಕೆಟ್ʼನಲ್ಲಿ 11,119 ರನ್ ಗಳಿಸಿದ್ದಾರೆ. 16 ವರ್ಷಗಳಲ್ಲಿ ಭಾರತಕ್ಕಾಗಿ 134 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಇದನ್ನೂ ಓದಿ: ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲ ಜಗತ್ತಿನ 7 ಪ್ರಾಣಿಗಳು ಇವು!
ಜಹೀರ್ ಖಾನ್: ಭಾರತದ ದಿಗ್ಗಜ ವೇಗದ ಬೌಲರ್ ಜಹೀರ್ ಖಾನ್ ಟೀಂ ಇಂಡಿಯಾ ನಾಯಕನಾಗಲು ಇದುವರೆಗೆ ಸಾಧ್ಯವಾಗಿಲ್ಲ. ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ 610 ವಿಕೆಟ್ ಪಡೆದಿದ್ದಾರೆ. 15 ಅಕ್ಟೋಬರ್ 2015 ರಂದು ಅಂತರಾಷ್ಟ್ರೀಯ ಕ್ರಿಕೆಟ್ʼನಿಂದ ನಿವೃತ್ತಿ ಪಡೆದರು. ಜಹೀರ್ ಖಾನ್ 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.