ಚಾಮರಾಜನಗರ: ಕಳೆದ ವರ್ಷದ ಡಿಸೆಂಬರ್‌ ನಲ್ಲಿ ವಿಷ ಪ್ರಸಾದ ದುರಂತಕ್ಕೆ ಸಾಕ್ಷಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಭಕ್ತಾದಿಗಳ ಪ್ರಾಣಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಹಾಗೂ ದೇವಾಲಯದ ಆಡಳಿತವನ್ನು ದೇವಾಲಯ ಸೇವಾ ಟ್ರಸ್ಟ್ ನವರು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲಾಗದ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಾ ದತ್ತಿಗಳ ಅಧಿನಿಯಮ 1997ರ ಕಾಯಿದೆಯಾ ಸೆಕ್ಷನ್ 42ರ ಅನ್ವಯ ಘೋಷಿತ ಸಂಸ್ಥೆ ಎಂದು ಮುಜರಾಯಿ ಇಲಾಖೆ ಅಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಏಪ್ರಿಲ್ 4ರ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. 


2018ರ ಡಿಸೆಂಬರ್‌ 14ರಂದು ದೇವಾಲಯದಲ್ಲಿ ನಡೆದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿತರಿಸಲಾಗಿದ್ದ ವಿಷ ಬೆರೆಸಿದ ಪ್ರಸಾದ ಸೇವಿಸಿ ಸುಮಾರು 17 ಮಂದಿ ಮೃತಪಟ್ಟು, 110ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.