ಹವಾನಿಯಂತ್ರಿತ ಟೆಂಟ್ ಒಳಗೆ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ
ಹಿಂದೆಂದಿಗಿಂತಲೂ ಅದ್ಧೂರಿಯಾಗಿ, 20 ಕೋಟಿ ರೂ ವೆಚ್ಚದಲ್ಲಿ ಸಿಎಂ ತವರೂರು ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬೆಂಗಳೂರು: ಹಿಂದೆಂದಿಗಿಂತಲೂ ಅದ್ಧೂರಿಯಾಗಿ, 20 ಕೋಟಿ ರೂ ವೆಚ್ಚದಲ್ಲಿ ಸಿಎಂ ತವರೂರು ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸೆಪ್ಟೆಂಬರ್ 23, 24, 25 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜರ್ಮನ್ ತಾಂತ್ರಿಕತೆಯುಳ್ಳ ಆಧುನಿಕ ಟೆಂಟ್ ಅಳವಡಿಸಿ ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇರಲಿದೆ. ಗೋಷ್ಠಿಗಳು ವಿವಿಧ ವೇದಿಕೆಗಳಲ್ಲಿ ನಡೆಯುವ ಬದಲಿಗೆ ಈ ಬಾರಿ ಮುಖ್ಯ ವೇದಿಕೆಯೊಂದರಲ್ಲೇ ಎಲ್ಲಾ ಗೋಷ್ಠಿಗಳು ನಡೆಯಲಿವೆ. ಕನ್ನಡ ಶಾಲೆಗಳ ಉಳಿವಿನ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದರು.
ಇದನ್ನೂ ಓದಿ:"ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ"
ಸಮ್ಮೇಳನವು ಹಾವೇರಿಯ ಜಿ.ಎಚ್.ಕಾಲೇಜು ಸಮೀಪ ಸುವರ್ಣ ಪತ್ತಿನ ಸಹಕಾರಿ ಸಂಘದಲ್ಲಿ ನಡೆಯಲಿರುವ ಸಮ್ಮೇಳನ ನಡೆಯಲಿದೆ. 86 ಕೃತಿಗಳ ಲೋಕಾರ್ಪಣೆಗೊಳ್ಳಲಿದೆ. ನಿರ್ಣಯಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ಪ್ರತಿ ಬಾರಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮಾಡುವ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಸರ್ಕಾರದ ಹಂತದಲ್ಲಿ ಜಾರಿಯಾಗುವುದದೇ ಇಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಪ್ರತ್ಯೇಕ ಸಮಿತಿ ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ಯಾವ ಹಂತದಲ್ಲಿ ಇದೆ ಎಂಬ ಫಾಲೋಅಪ್ ಮಾಡುವ ಕೆಲಸ ಮಾಡುತ್ತೇನೆ ಎಂದರು.
ಸಾಹಿತ್ಯ ಸಮ್ಮೇಳನದಲ್ಲಿ ದುಂದುವೆಚ್ಚ ಮಾಡುವುದಿಲ್ಲ, 2 ವರ್ಷ ಆಗದ ಕಾರಣ ನಮ್ಮ ಮೇಲೆ ವಿಶ್ವಾಸ ಇಟ್ಟು ಅನುದಾನ ಕೊಟ್ಟಿದ್ದಾರೆ. ಸಾಹಿತ್ಯ ಸಮ್ಮೇಳನ ಅಂದ್ರೆ ಊಟ, ಅಡುಗೆ ಮುಖ್ಯ ಆಗೋದಿಲ್ಲ . ಖಂಡಿತವಾಗಿ ಗುಣಮಟ್ಟದ ಚರ್ಚೆ ಆಗಬೇಕು. ಕನ್ನಡಿಗನ ಜೀವನಮಟ್ಟದಲ್ಲಿ ಬದಲಾವಣೆ ಆಗಲಿದೆ. ಯಕ್ಷಗಾನ ಸಾಹಿತ್ಯದ ಗೋಷ್ಠಿ, ವೈದ್ಯಕೀಯ ಸಾಹಿತ್ಯದ ಗೋಷ್ಠಿ, ಚಲನಚಿತ್ರ ಸಾಹಿತ್ಯ , ವಿಜ್ಞಾನ ಸಾಹಿತ್ಯದ ಗೋಷ್ಠಿಯ ಮೊದಲಾದ ಕುತೂಹಲಕಾರಿ ಆಸಕ್ತಿಕರ ಗೋಷ್ಟಿಗಳನ್ನು ಏರ್ಪಡಿಸಲಾಗುವುದು ಎಂದರು.
ಸರ್ವ ಸದಸ್ಯರ ಸಭೆ ಹಾವೇರಿಯಲ್ಲಿ:
ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಮೇ 1 ರಂದು ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸರ್ವಸದಸ್ಯರ ವಿಶೇಷ ಸಭೆ ನಡೆಯಲಿದೆ. ನಿಬಂಧನೆಗಳ ತಿದ್ದುಪಡಿ ಕುರಿತು ಚರ್ಚೆಯಾಗಲಿದೆ ಎಂದರು. ಎಲ್ಲರಿಗೂ ಸುಲಭ, ಸರಳವಾಗಿ ಸದಸ್ಯತ್ವ ಸಿಗಬೇಕು . ಪುಸ್ತಕಗಳು ಮನೆಯಲ್ಲೇ ಕುಳಿತು ಸಿಗಬೇಕು. ಈ ಬಗ್ಗೆ 11 ಜನರ ಸಮಿತಿ ನ್ಯಾ.ಅರಳಿ ನಾಗರಾಜರ ನೇತೃತ್ವದಲ್ಲಿ 3 ತಿಂಗಳು ಅಧ್ಯಯನ ಮಾಡಿ, ವರದಿ ಕೊಟ್ಟಿದ್ದಾರೆ. ಕನ್ನಡ ಶಾಲೆಗಳ ಪುನಶ್ಚೇತನವನ್ನೂ ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಸರಳೀಕರಣಕ್ಕೆ ಆಪ್ ಮಾಡಲಾಗಿದೆ. ವಿದೇಶಗಳಲ್ಲೂ ಕ.ಸಾ.ಪ ಘಟಕಗಳನ್ನು ತೆರೆಯುವ ಹಾದಿಯಲ್ಲಿದೇವೆ ಎಂದರು.
ವಿದೇಶಗಳಿಂದಲೇ ಸದಸ್ಯರಾಗಬಹುದು. ಭಾರತದ ಸೇನೆಯಿಂದ ನಿವೃತ್ತರಾಗಿರುವವರು ಹಾಗೂ ಕನ್ನಡದ ಸೈನಿಕರಿಗೆ ಶುಲ್ಕವಿಲ್ಲದೆ ಸದಸ್ಯರನ್ನಾಗಿ ಮಾಡಲಾಗುತ್ತದೆ. ದಿವ್ಯಾಂಗ ಚೇತನರಿಗೂ ಶುಲ್ಕ ಇಲ್ಲದೆ ಸದಸ್ಯತ್ವ ಇರಲಿದೆ. 5 ವರ್ಷದ ಅವಧಿಯಲ್ಲಿ 1 ಕೋಟಿ ಸದಸ್ಯರನ್ನು ಮಾಡುವ ಗುರಿ ಇದೆ ಎಂದರು. ಈ ಹಿಂದೆ ಕನ್ನಡ ಓದು-ಬರಹ ಬರುವವರಿಗೆ ಸದಸ್ಯತ್ವ ನೀಡಲಾಗ್ತಿತ್ತು, ಆದರೆ ಯಾರೂ ಪರೀಕ್ಷಿಸದೆ ಹಲವರು ಕನ್ನಡ ವಾರದವರೂ ಸೇರಿಕೊಂಡಿದ್ದರು ಎಂದರು.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ
ಆಪ್ ಮುಖಾಂತರವೇ ಇವರಿಗೆ ಸರಳ ಕನ್ನಡ ಕಲಿಸಲಾಗುವುದು. ಈಗ 18 ವರ್ಷ ಮೇಲ್ಪಟ್ಟವರು, ಪ್ರಾಥಮಿಕ ಶಿಕ್ಷಣ ಇರುವವರು ಸದಸ್ಯರಾಗಬಹುದು. ಸಾಹಿತ್ಯ, ಸಂಗೀತ, ಕಲೆಯಲ್ಲಿ ಸಾಧನೆ ಮಾಡಿದವರಿಗೆ ವಿನಾಯಿತಿ ಅಪರಾಧ ಹಿನ್ನಲೆಯವರಿಗೆ, ವಿಚಾರಣೆ ಬಾಕಿ ಇರುವವರಿಗೆ ಸದಸ್ಯತ್ವ ಇಲ್ಲ ಎಂದು ತೀರ್ಮಾನಿಸಲಾಗಿದೆ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.