ಮದುವೆ ಸೀರೆ ನೋಡುವ ನೆಪ: ಲಕ್ಷ ಲಕ್ಷ ಮೌಲ್ಯದ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅಂದರ್
Crime news: ಹೆಣ್ಣಿಗೆ ರಿಸಪ್ಷನ್ ಗ್ರ್ಯಾಂಡ್ ಸೀರೆ ಬೇಕು, ಅತ್ತೆಗೆ ರೇಷ್ಮೆ ಸೀರೆ, ಅಮ್ಮನಿಗೆ ಕಾಂಜಿವರಂ ಸೀರೆ ಎಂದು ಮಾತಿಗೆ ಇಳಿಯುತ್ತಿದ್ದರು. ಸಣ್ಣ ಪುಟ್ಟ ಸೀರೆ ಮುಟ್ತಿರ್ಲಿಲ್ಲ, ಅದೇ ಲಕ್ಷ ರೂಪಾಯಿ ಸೀರೆ ಕಂಡರೇ ಬಿಡುತ್ತಿರಲಿಲ್ಲ.
ಬೆಂಗಳೂರು: ಸಿನಿಮಾ ಸ್ಟೈಲ್’ನಲ್ಲಿ ಸೀರೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ. ದೊಡ್ಡ ದೊಡ್ಡ ಸೀರೆ ಅಂಗಡಿಗೆ ಎಂಟ್ರಿ ಕೊಡುತ್ತಿದ್ದ ಈ ಗ್ಯಾಂಗ್, ನಮ್ಮ ಮನೆಯಲ್ಲಿ ಮದುವೆ ಇದೆ ಎಂದು ಕಥೆ ಕಟ್ಟಿ ಫುಲ್ ಬಿಲ್ಡಪ್ ಕೊಡುತ್ತಿದ್ದರು.
ಇದನ್ನೂ ಓದಿ: 49ರ ಹರೆಯದಲ್ಲೇ ಕೊನೆಯುಸಿರೆಳೆದ ಮಾಜಿ ನಾಯಕ-ದಿಗ್ಗಜ ಆಲ್’ರೌಂಡರ್ ಹೀತ್ ಸ್ಟ್ರೀಕ್
ಹೆಣ್ಣಿಗೆ ರಿಸಪ್ಷನ್ ಗ್ರ್ಯಾಂಡ್ ಸೀರೆ ಬೇಕು, ಅತ್ತೆಗೆ ರೇಷ್ಮೆ ಸೀರೆ, ಅಮ್ಮನಿಗೆ ಕಾಂಜಿವರಂ ಸೀರೆ ಎಂದು ಮಾತಿಗೆ ಇಳಿಯುತ್ತಿದ್ದರು. ಸಣ್ಣ ಪುಟ್ಟ ಸೀರೆ ಮುಟ್ತಿರ್ಲಿಲ್ಲ, ಅದೇ ಲಕ್ಷ ರೂಪಾಯಿ ಸೀರೆ ಕಂಡರೇ ಬಿಡುತ್ತಿರಲಿಲ್ಲ.
ದೊಡ್ಡ ದೊಡ್ಡ ಅಂಗಡಿಗೆ ಎಂಟ್ರಿ ಕೊಡುತ್ತಿದ್ದ ಈ ಗ್ಯಾಂಗ್ 50-60 ಸೀರೆ ತೆಗೆಸಿ ಗುಡ್ಡೆ ಹಾಕಿಸುತ್ತಿದ್ದರು. ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಅಂತ ಮಾತನಾಡುತ್ತಲೇ ಒಂದೆರಡು ಸೀರೆಯನ್ನ ತಮ್ಮ ಒಳ ಉಡುಪಿನಲ್ಲಿ ಸೇರಿಸಿ ಬೀಡುತ್ತಿದ್ದರು. ತಮ್ಮ ಕೆಲಸ ಆದ ಮೇಲೆ ಸೀರೆ ಚೆನ್ನಾಗಿಲ್ಲ ರೇಟ್ ಗಿಟ್ಟಿಲ್ಲ ಎಂದು ಅಲ್ಲಿಂದ ಹೊರಡುತ್ತಿದ್ದರು. ಸದ್ಯ ಈ ಖತರ್ನಾಕ್ ಗ್ಯಾಂಗ್’ನ ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದು, ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಅಂದರ್ ಆಗಿದ್ದಾರೆ.
ಆಂಧ್ರಪ್ರದೇಶದಿಂದ ಬಂದು ಕಳ್ಳತನಕ್ಕೆ ಇಳಿದಿದ್ದ ಇವರು, ಒಟ್ಟೊಟ್ಟಿಗೆ ಹತ್ತಕ್ಕೂ ಹೆಚ್ಚು ಜನ ಹೋಗಿ ಗುಂಪು ಗುಂಪಾಗಿ ಸೀರೆ ಸ್ಯಾಂಪಲ್ ಗಳನ್ನ ಹಾಕಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಚಂದ್ರನಿಗೆ ಮತ್ತಷ್ಟು ಸನಿಹದಲ್ಲಿ ಚಂದ್ರಯಾನ 3 ! ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೋ
ಸೀರೆ ಅಂಗಡಿ ಸಿಬ್ಬಂದಿ ಸಾಕು ಸಾಕು ಎನ್ನುವವರೆಗೂ ಸೀರೆ ತೆಗೆಸಿ ಆ ಗ್ಯಾಪ್ ನಲ್ಲಿ ಬೆಲೆ ಬಾಳೋ ಸೀರೆಯನ್ನೆ ಕದಿಯುತ್ತಿದ್ದರು. ಹೀಗೆ ಅಶೋಕ ನಗರ, ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖತರ್ನಾಕ್ ಗಳ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರು ಜನರನ್ನ ಲಾಕ್ ಮಾಡಿದ್ದಾರೆ. ಈ ಗ್ಯಾಂಗ್’ನ ಇನ್ನೂ ಮೂರಕ್ಕೂ ಹೆಚ್ಚು ಜನ ಆರೋಪಿಗಳು ಎಸ್ಕೇಪ್ ಆಗಿದ್ದು ಪೊಲೀಸರು ಬಲೆ ಬೀಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ