Heath Streak Passed Away: ಜಿಂಬಾಬ್ವೆ ತಂಡದ ಮಾಜಿ ನಾಯಕ ಮತ್ತು ಅನುಭವಿ ಆಲ್’ರೌಂಡರ್ ಹೀತ್ ಸ್ಟ್ರೀಕ್ ಆಗಸ್ಟ್ 22ರಂದು ನಿಧನರಾಗಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು 49ರ ಹರೆಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಜಿಂಬಾಬ್ವೆ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 65 ಟೆಸ್ಟ್ ಮತ್ತು 189 ODIಗಳನ್ನು ಆಡಿದ್ದ ಸ್ಟ್ರೀಕ್, ಕೊಲೊನ್ ಮತ್ತು ಲಿವರ್ ಕ್ಯಾನ್ಸರ್’ಗೆ ತುತ್ತಾಗಿದ್ದರು. ಇದೇ ಕಾರಣದಿಂದ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: ಭರತನಾಟ್ಯ ಕಲಾವಿದೆ ಈ ಬಾಲಕಿ ಯಾರು ಗೊತ್ತಾ? ಭಾರತ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದೇ ಈಕೆಯಿಂದ
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬೌಲರ್ ಆಲ್’ರೌಂಡರ್ ಆಗಿ ಆಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್’ನಲ್ಲಿ ಒಟ್ಟು 216 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ 16 ಬಾರಿ ಇನ್ನಿಂಗ್ಸ್’ನಲ್ಲಿ 4 ವಿಕೆಟ್ ಹಾಗೂ 7 ಬಾರಿ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಹೀತ್ ಸ್ಟ್ರೀಕ್ 50 ಓವರ್ ಮಾದರಿಯಲ್ಲಿ 29.82 ಸರಾಸರಿಯಲ್ಲಿ 239 ವಿಕೆಟ್ ಪಡೆದಿದ್ದಾರೆ. ODI ವೃತ್ತಿಜೀವನದ ಇನ್ನಿಂಗ್ಸ್‌ನಲ್ಲಿ 4 ಮತ್ತು ಒಮ್ಮೆ 5 ವಿಕೆಟ್’ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್’ನಲ್ಲಿ 1990 ರನ್ ಮತ್ತು ODIಗಳಲ್ಲಿ 2943 ರನ್ ಕೂಡ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 11 ಅರ್ಧ ಶತಕಗಳೂ ಸೇರಿವೆ. ಏಕದಿನದಲ್ಲಿ 13 ಅರ್ಧಶತಕ ಇನ್ನಿಂಗ್ಸ್‌ಗಳನ್ನು ಸ್ಟ್ರೀಕ್ ಆಡಿದ್ದಾರೆ.
ನಾಯಕತ್ವದ ದಾಖಲೆ ಹೀಗಿದೆ…
2000ರಲ್ಲಿ, ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಹೀತ್ ಸ್ಟ್ರೀಕ್ ಅವರನ್ನು ಟೆಸ್ಟ್ ಮತ್ತು ODI ಎರಡೂ ತಂಡಗಳ ನಾಯಕರನ್ನಾಗಿ ನೇಮಿಸಿತು. ಸ್ಟ್ರೀಕ್ ನಾಯಕತ್ವದಲ್ಲಿ, ಜಿಂಬಾಬ್ವೆ 21 ಟೆಸ್ಟ್ ಪಂದ್ಯಗಳಲ್ಲಿ 4 ಗೆದ್ದರೆ, 11 ಬಾರಿ ಸೋಲು ಕಂಡಿದೆ. ಇನ್ನು 6 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ODIನ 68 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದು, ಇದರಲ್ಲಿ 47 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದರೆ, 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ?
ಸ್ಟ್ರೀಕ್ ನಿಧನದ ಸುದ್ದಿ ತಿಳಿದ ಬಳಿಕ, ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಅನೇಕ ಮಾಜಿ ಮತ್ತು ಹಾಲಿ ಆಟಗಾರರು ಟ್ವೀಟ್’ಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
Heath Streak is no more. Sad!! Really sad. #RIP
— Ashwin 🇮🇳 (@ashwinravi99) August 23, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ