ಬೆಂಗಳೂರು : ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಾಗೂ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಈ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿಸಿ ನಾಗೇಶ್(BC Nagesh), ಗಣಿತ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 21 ಸಾವಿರ ಗಣಿತ ಶಿಕ್ಷಕರ ಹುದ್ದೆಗಳು ಕೊರತೆ ಇದೆ. ಹಾಗೆ, 1 ರಿಂದ 8ನೇ ತರಗತಿ  ಶಾಲೆಗಳಲ್ಲಿ ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇದೆ. ಇದರಲ್ಲಿ 15,000 ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತಿದೆ. ಇದರಲ್ಲಿ ಹೈದರಾಬಾದ್ ಕರ್ನಾಟಕ ಭಾಗ ಒಂದಕ್ಕೆ 5 ಸಾವಿರ ಶಿಕ್ಷಕರ ನೇಮಕವಿದೆ. ಉಳಿದ ಕಡೆಯಿಂದ 10 ಸಾವಿರ ಶಿಕ್ಷಣಕರ ನೇಮಕ ಮಾಡಲಾಗುತ್ತಿದೆ ಎಂದರು.


 ಇದನ್ನೂ ಓದಿ : ‘ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕೆ ಈ ಸದಾರಮೆ ನಾಟಕವೇ?’


ಮಾರ್ಚ 23 ರಿಂದ ಆನ್ ಲೈನ್ ಅರ್ಜಿ(Online Application) ಹಾಕಲು ಆರಂಭವಾಗಲಿದೆ, ಅರ್ಜಿ ಹಾಕಲು ಎಪ್ರಿಲ್ 22 ಕೊನೆಯ ದಿನವಾಗಿರುತ್ತದೆ. ಮೇ 21, 22, ರಂದು ಶಿಕ್ಷಕರ ಹುದ್ಧೆಗೆ ಪರೀಕ್ಷೆ ನಿಗದಿ ಮಾಡಲಾಗಿದೆ.
ಎರಡು ದಿನಗಳ ಕಾಲ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಒಟ್ಟು 400 ಅಂಕಗಳಿವೆ. ಮೊದಲ ಪತ್ರಿಕೆ ಜನರಲ್ ಪೇಪರ್ 150 ಅಂಕಗಳಿಗಿರುತ್ತದೆ. 2 ನೇ ಪತ್ರಿಕೆ ವಿಷಯವಾರು ಇದು ಕೂಡ 150 ಮಾರ್ಕ್ ಇರುತ್ತೆ. ಪಾಸ್ ಆಗಲು 45 ಮಾರ್ಕ್ ಕಡ್ಡಾಯವಾಗಿರುತ್ತದೆ. 3 ನೇ ಪತ್ರಿಕೆ ಭಾಷಾವಾರು ಪರೀಕ್ಷೆ 100 ಅಂಕಗಳಿಗಿರುತ್ತದೆ. ಇದು ಪಾಸ್ ಆಗಲು 50 ಮಾರ್ಕ್ಸ್ ಕಡ್ಡಾಯ ಮಾಡಲಾಗಿದೆ. ಇಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಕೂಡ ಈ ಬಾರಿ ಗಣಿತ ಶಿಕ್ಷಕರಿಗೆ ಪರೀಕ್ಷೆ ಬರೆಯಬಹುದು ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.