ಬೆಂಗಳೂರು: ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಚರ್ಚೆ ನಡೆಸಿದರು. ಎಲ್ಲಾ ಸರ್ಕಾರಗಳಿಗೆ ಕೋವಿಡ್-19 (COVID-19) ಮೂರನೇ ಅಲೆಯ ತಡೆಗೆ ಆರ್ಥಿಕವಾಗಿ ಯಾರಿಗೂ ತೊಂದರೆ ಆಗದಂತೆ ಕ್ರಮಗಳನ್ನ ಕೈಗೊಳ್ಳಿ ಎಂದು ಕಿವಿ ಮಾಟು ಹೇಳಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ 'Lockdown' ಪದ ಬಳಕೆಯಿಂದ ಹಿಂದೆ ಸರಿದಿದೆ.


COMMERCIAL BREAK
SCROLL TO CONTINUE READING

ಮೊದಲ ಅಲೆ ಮತ್ತು ಎರಡನೆಯ ಅಲೆ ತಡೆಗೆ ಕೈಗೊಂಡ ಕ್ರಮಗಳು ಜೀವ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದವು. ಒಮಿಕ್ರಾನ್ (OMICRON) ಪ್ರಭೇದದ ಮೂರನೇ ಅಲೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಮೊದಲ ಅಲೆಯಲ್ಲಿ ಕೋವಿಡ್ (corona virus) ಸೋಂಕಿನ ಬಗ್ಗೆ ವಿಶ್ವ ವಿಜ್ಞಾನ ಸಮುದಾಯಕ್ಕೆ ಸವಾಲಾಗಿತ್ತು. ಹೀಗಾಗಿ ಲಾಕ್ ಡೌನ್ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. 


ಇದನ್ನೂ ಓದಿ: ಐಷಾರಾಮಿ ಕಾರುಗಳೇ ಟಾರ್ಗೆಟ್.. 9 ವರ್ಷಗಳ ಬಳಿಕ ಈ "ಕಾರ್ ಕಿಂಗ್" ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ


ಇನ್ನು ಎರಡನೇ ಅಲೆಯ ಸಂದರ್ಭದಲ್ಲಿ ಬಹುತೇಕರಿಗೆ ಪೂರ್ಣಪ್ರಮಾಣದ ಲಸಿಕೆ (Corona Vaccine) ನೀಡಿರಲಿಲ್ಲ. Delta ಪ್ರಭೇದಗಳು ನೇರವಾಗಿ ಸೋಂಕಿತರ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತವೆ. ಉಸಿರಾಟದ ಸಮಸ್ಯೆ, ನಿಮೋನಿಯಾ ಕಾಣಿಸುತ್ತಿತ್ತು. ಈ ಜಿನ್ನೆಲೆ ಡೆಲ್ಟಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಹಾಗೂ ಇನ್ನಿತರೆ ಔಷಧಿಗಳ ಬೇಡಿಕೆಯು ಹೆಚ್ಚಿತ್ತು. ಆರೋಗ್ಯ ವಲಯದ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಲಾಕ್ ಡೌನ್ ನ್ನು ಅಗತ್ಯಕ್ಕೆ ತಕ್ಕಂತೆ ಘೋಷಣೆ ಮಾಡಿತ್ತು. 


ವಿಶ್ವದಾದ್ಯಂತ ಮೂರನೇ ಅಲೆ (Covid third wave) ಮಿತಿಮೀರಿ ಹರಡುತ್ತಿದೆ. ಭಾರತದಲ್ಲಿ ಲಸಿಕಾಕರಣ ಯಶಸ್ವಿಯಾಗಿ ಸಾಗುತ್ತಿದ್ದು ಬಹುತೇಕ ನಗರಗಳಲ್ಲಿ ಅನೇಕರು ಪೂರ್ಣಪ್ರಮಾಣದ ಲಸಿಕೆಯನ್ನು ಪಡೆದಿದ್ದಾರೆ. 


ಕೋವಿಡ್ ಭೀಕರತೆ ತಡೆಯಲು ಲಸಿಕೆ ಪರಿಹಾರ ಎಂದು ಹೇಳಿದೆ. ಇದಲ್ಲದೆ ಕೇಂದ್ರ ಸರ್ಕಾರ 15-18 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಲು ಪ್ರಾರಂಭಿಸಿದೆ. ಇದಲ್ಲದೆ ಬೂಸ್ಟರ್ ಡೋಸ್ (Booster Dose) ಕೂಡ ಪ್ರಾಥಮಿಕ ಹಂತದಲ್ಲಿ ಜನರಿಗೆ ನೀಡಲಾಗುತ್ತಿದೆ. 


ಸರಣಿ ಲಾಕ್ ಡೌನ್ ನಿಂದ ಆರ್ಥಿಕವಾಗಿ ಎಲ್ಲಾ ವರ್ಗದ ಜನರು ನಲುಗಿದ್ದಾರೆ. ಈಗ ಸರ್ಕಾರಗಳು ಒಟ್ಟಾಗಿ ಆರ್ಥಿಕತೆ ಕಡೆ ಗಮನ ಹರಿಸಬೇಕು. ಇದರಿಂದ ಜೀವ-ಜೀವನ ರಕ್ಷಣೆ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಪಿಎಂ ಮೋದಿ ಕಿವಿಮಾತನ್ನ ಹೇಳಿದ್ದಾರೆ.


ಈ ಕಿವಿಮಾತನ್ನ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಇನ್ನು ಮುಂದೆ ಲಾಕ್ ಡೌನ್ (Lockdown) ಎಂಬ ಪದವನ್ನ ಬಳಕೆ ಮಾಡುವುದನ್ನ ನಿಲ್ಲಿಸಿದೆ. ಆರ್ಥಿಕತೆಗೆ ಹಾಗೂ ಜನರ ಜೀವನಕ್ಕೆ ತೊಂದರೆ ಆಗದ ಕ್ರಮಗಳನ್ನ ಸರ್ಕಾರಗಳು ಕೈಗೊಳ್ಳಲಿದೆ ಎಂದು ತೆಲುಗು ಮುಖ್ಯಮಂತ್ರಿ ಸೇರಿದಂತೆ ಇತರರು ಹೇಳಿದ್ದಾರೆ.


ಮುಂದಿನ ವಾರ ತಾಂತ್ರಿಕ ಸಲಹಾ ಸಮಿತಿ ಸಭೆ (TAC) : 


ಪ್ರತಿನಿತ್ಯ ಏರಿಕೆ ಆಗುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಹಾಗೂ ಆರೋಗ್ಯ ಇಲಾಖೆಯ ಸಾಮರ್ಥ್ಯ ವಿವರ ಪಡೆಯುವ ಹಿನ್ನಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆಯನ್ನು ಈ ವಾರದಲ್ಲಿ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.


ಇದನ್ನೂ ಓದಿ: COVID-19 in Karnataka : ಕೊರೋನಾ ವಿಚಾರದಲ್ಲಿ ರಾಜ್ಯದ ಪಾಲಿಗೆ ಗುಡ್ ನ್ಯೂಸ್..! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.