COVID-19 in Karnataka : ಕೊರೋನಾ ವಿಚಾರದಲ್ಲಿ ರಾಜ್ಯದ ಪಾಲಿಗೆ ಗುಡ್ ನ್ಯೂಸ್..! 

ರಾಜ್ಯದಲ್ಲಿ ಪ್ರತಿ ನಿತ್ಯ  ಸಾವಿರಾರು ಕೊರೋನಾ ಕೇಸ್ ಪತ್ತೆಯಾದರೂ ಆಸ್ಪತ್ರೆಗೆ ದಾಖಲಾತಿ ತುಂಬಾ ವಿರಳವಾಗಿದೆ. ಎರಡು ವಾರದ ಆಸ್ಪತ್ರೆ ದಾಖಲಾತಿ ನೋಡಿದ್ರೆ ಈ ಬಾರಿ ಆತಂಕ ದೂರವಾಗುತ್ತದೆ. 

Written by - Channabasava A Kashinakunti | Last Updated : Jan 16, 2022, 10:57 AM IST
  • ಕೊರೋನಾ ವಿಚಾರದಲ್ಲಿ ರಾಜ್ಯ ಸೇಫ್ ಜೋನ್
  • ರಾಜ್ಯದಲ್ಲಿ ಪ್ರತಿ ನಿತ್ಯ ಸಾವಿರಾರು ಕೊರೋನಾ ಕೇಸ್ ಪತ್ತೆ
  • ಆದ್ರೆ ಆಸ್ಪತ್ರೆಗೆ ದಾಖಲಾತಿ ತುಂಬಾ ವಿರಳ
COVID-19 in Karnataka : ಕೊರೋನಾ ವಿಚಾರದಲ್ಲಿ ರಾಜ್ಯದ ಪಾಲಿಗೆ ಗುಡ್ ನ್ಯೂಸ್..!  title=

ಬೆಂಗಳೂರು : ಕೊರೋನಾ ವಿಚಾರದಲ್ಲಿ ರಾಜ್ಯ ಸೇಫ್ ಜೋನ್ ನಲ್ಲಿದೆಯಾ? ಎಂಬ ಪ್ರಶ್ನೆ ಉದ್ಬವಾಗಿದೆ. ಯಾಕಂದ್ರೆ, ರಾಜ್ಯದಲ್ಲಿ ಪ್ರತಿ ನಿತ್ಯ  ಸಾವಿರಾರು ಕೊರೋನಾ ಕೇಸ್ ಪತ್ತೆಯಾದರೂ ಆಸ್ಪತ್ರೆಗೆ ದಾಖಲಾತಿ ತುಂಬಾ ವಿರಳವಾಗಿದೆ. ಎರಡು ವಾರದ ಆಸ್ಪತ್ರೆ ದಾಖಲಾತಿ ನೋಡಿದ್ರೆ ಈ ಬಾರಿ ಆತಂಕ ದೂರವಾಗುತ್ತದೆ. 

ಆದ್ರೆ, ಇದನ್ನ ರಾಜ್ಯ ಸರ್ಕಾರ(Karnataka Govt) ಇನ್ನೆರಡು ವಾರ ಕಾದು ನೋಡಲಿದೆ. ಸದ್ಯದ ಆಸ್ಪತ್ರೆ ದಾಖಲಾತಿ ನೋಡಿದ್ರೆ ರಾಜ್ಯಕ್ಕೆ ಮೂರನೇ ಅಲೆ ತೀವ್ರತೆಯ ಯಾವುದೇ ಆತಂಕ ಇಲ್ಲ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Republic Day: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ‘ಕರ್ನಾಟಕ ಕರಕುಶಲ ಕಲಾ ವೈಭವ’ದ ದರ್ಶನ

ಆಸ್ಪತ್ರೆಯ ಆಕ್ಸಿಜನ್ ಬೆಡ್, ಐಸಿಯು ಬೆಡ್ ನಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ. ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ನ ಅನಿವಾರ್ಯತೆ ಇಲ್ಲ ಅನಿಸುತ್ತಿದೆ. ಆದ್ರೆ ಜನರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಿ ಕೊರೋನಾ(Corona) ಟೆನ್ಶನ್ ಬಿಡಿ ಎಚ್ಚರಿಕೆಯಿಂದ ಇರುವುದೇ ಮೂರನೇ ಅಲೆ ಗೆಲ್ಲುವ ಸುಲಭ ದಾರಿ ಎಂದು ಹೇಳಲಾಗುತ್ತಿದೆ. 

ಹೀಗಿದೆ ಎರಡು ವಾರದ ಆಸ್ಪತ್ರೆಯ ದಾಖಲಾತಿ

- ರಾಜ್ಯದ ಒಟ್ಟಾರೆ ಸಕ್ರಿಯ ಪ್ರಕರಣ 1,41,337
- ಈ ಪೈಕಿ ಆಸ್ಪತ್ರೆಗೆ ದಾಖಲಾದವರು ಕೇವಲ 2,195
- ಆಕ್ಸಿಜನ್/HDU ಬೆಡ್ ಗೆ ದಾಖಲಾದವರು 538
- ICU ಗೆ ದಾಖಲಾದವರ ಸಂಖ್ಯೆ 105 
- ICU-V ನಲ್ಲಿ ದಾಖಲಾದವರ ಸಂಖ್ಯೆ 35 
- ಜನರಲ್ ಬೆಡ್ ಗೆ ದಾಖಲಾದವರ ಸಂಖ್ಯೆ 1157
- ಶೇ. 52.71 ರಷ್ಟು ಸೋಂಕಿತರು ಜನರಲ್ ಬೆಡ್ ನಲ್ಲೇ ದಾಖಲಾಗ್ತಿದ್ದಾರೆ.
- ಶೇ. 0.38 ಜನ ಮಾತ್ರ ಆಕ್ಸಿಜನ್/HDU ಬೆಡ್ ಗೆ ದಾಖಲಾಗ್ತಿದಾರೆ.
- ಶೇ. 0.07 ಜನ ಮಾತ್ರ ICU ಗೆ ದಾಖಲಾಗ್ತಿದ್ದಾರೆ.
- ಶೇ. 0.02 ಜನ ಮಾತ್ರ ವೆಂಟಿಲೇಟರ್ ಗೆ ಹೋಗ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News