Principal Kama Purana Audio Viral: ನಮ್ಮಲ್ಲಿ ವಿದ್ಯೆ ಕಲಿಸುವ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆದರೆ, ಇಲ್ಲೊಬ್ಬ ಶಿಕ್ಷಕ ಪರೀಕ್ಷೆಯನ್ನೆ ಅಸ್ತ್ರವಾಗಿ ಬಳಸಿಕೊಂಡು ವಿದ್ಯಾರ್ಥಿನಿಯನ್ನು ಮನೆಗೆ ಬಾ ಕ್ಲಾಸ್ ಹೇಳುತ್ತೇನೆ ಎಂದು ಫೋನ್ ಕಾಲ್ ಮೂಲಕ ಲೈಂಗಿಕ ಕಿರುಕುಳ ನೀಡಿರುವ ವಿಚಾರದ ಆಡಿಯೋ ವೈರಲ್ ಆಗಿದೆ. ವಿಷಯ ತಿಳಿದ ಸ್ಥಳೀಯರು ಆ ಕಾಮುಕ ಶಿಕ್ಷಕನಿಗೆ ಧರ್ಮದೇಟು ಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಬಿಸಿಲುನಾಡು ರಾಯಚೂರಿನಲ್ಲೊಬ್ಬ ಕಾಮುಕ ಪ್ರಿನ್ಸಿಪಲ್ ಇಡೀ ಶಿಕ್ಷಕ ಧರ್ಮಕ್ಕೆ ಕಳಂಕ ತಂಡಿಟ್ಟಿದ್ದಾನೆ.. ನೋಡೊಕೇ ಅಮಾಯಕನಂತೆ ಕಾಣೋ ಈ ರಾಕ್ಷಸ ಮಾಡಿದ್ದು ಮಾತ್ರ ಅಂತಿಂಥದ್ದಲ್ಲ. ರಾಯಚೂರು ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 


ಕಾಮಪಿಶಾಚಿ ಹೆಸರು ವಿಜಯಕುಮಾರ್ ಅಂಗಡಿ. ಈತ ಇದೇ ಖಾಸಗಿ ಶಾಲೆಯ ಪ್ರಿನ್ಸಿಪಲ್. ಈತನಿಗೆ ಬರೀ ಅಪ್ರಾಪ್ತ ಬಾಲಕಿಯರೇ ಟಾರ್ಗೆಟ್. ಆದ್ರೆ ಈತನ ವಕ್ರದೃಷ್ಟಿ ಬೀರಿದ್ದು ಆ ಅಮಾಯಕ ಬಾಲಕಿ ಮೇಲೆ. ಆಕೆ ಫೋನ್ ನಂಬರ್ ಪಡೆದಿದ್ದ ಕಾಮುಕ ಪ್ರಿನ್ಸಿಪಲ್ ವಿಜಯಕುಮಾರ್ ಆ 10 ನೇ ತರಗತಿ ಅಪ್ರಾಪ್ತೆಗೆ ನಿತ್ಯ ಟಾರ್ಚರ್ ಕೊಡಲು ಶುರು ಮಾಡಿದ್ದ. ನಿತ್ಯ ವಾಟ್ಸ್ ಆಪ್ ಮಾಡಿ ಲೈಂಗಿಕ ಕಿರುಕುಳ ನೀಡಿ ಪ್ರಚೋದನೆ ನೀಡುತ್ತಿದ್ದ. ಆಕೆ ಒಲ್ಲೆ ಎಂದ್ರು ಬಿಡದ ಪಾಪಿ ಆಕೆಯ ಪರೀಕ್ಷೆಯನ್ನೇ ಬಂಡವಾಳ ಮಾಡಿಕೊಂಡಿದ್ದ. ನಿನಗೆ ಪರೀಕ್ಷೆಯಲ್ಲಿ ಒಳ್ಳೆ ರೀತಿ ನೋಡಿಕೊಳ್ಳುತ್ತೇನೆ ಅಂತೆಲ್ಲಾ ಹೇಳಿ ಕಾಮ ಕೇಳಿ ಟಾರ್ಚರ್ ಕೊಟ್ಟಿದ್ದ. ವಿಷಯ ತಿಳಿದ ಸ್ಥಳೀಯರು ಕೊನೆಗೆ ನಿನ್ನೆ ಆತನಿಗೆ ಧರ್ಮದೇಟು ನೀಡಿದ್ದಾರೆ. 


ಇದನ್ನೂ ಓದಿ- ಸೀರೆಯಲ್ಲಿ ಜಿಮ್‌ ಮಾಡಿ ಬಿಲ್ಡರ್ಸ್‌ ಚಮಕ್‌ ಕೊಟ್ಟ ಸುಂದರಿ..! ವಿಡಿಯೋ ನೊಡಿ


ಹೌದು, ನಿನ್ನೆ ಮದ್ಯಾಹ್ನ ಏಕಾಏಕಿ ಶಕ್ತಿ ನಗರದ ಸುತ್ತಲಿನ ನೂರಾರು ಜನ ಸ್ಥಳೀಯರು ಆ ಶಾಲೆಗೆ ನುಗ್ಗಿದ್ರು. ಮಕ್ಕಳ ಜೊತೆ ಚಕ್ಕಂದವಾಡಲು ಹಪಹಪಿಸುತ್ತಿದ್ದವನಿಗೆ ಜೈಲಿಗೆ ದಾರಿ ತೋರಿಸಿದ್ದಾರೆ. ಸ್ಥಳೀಯರು ಆತನನ್ನ ಹಿಡಿದು ಧರ್ಮದೇಟು ನೀಡಲು ಮುಂದಾಗಿದ್ರು. ಆದ್ರೆ ಅಷ್ಟರಲ್ಲಿ ಮಾಹಿತಿ ತಿಳಿದು ಶಕ್ತಿನಗರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿ ಪ್ರಿನ್ಸಿಪಲ್ ವಿಜಯಕುಮಾರ್ ಅಂಗಡಿಯನ್ನ ವಶಕ್ಕೆ ಪಡೆದಿದ್ದಾರೆ. ಆಗ ಕೆಲ ಸ್ಥಳೀಯರು ಆರೋಪಿ ಪ್ರಿನ್ಸಿಪಲ್ಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತ್ರ ನೇರವಾಗಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯ್ತು. ಜೊತೆಗೆ ಸಂತ್ರಸ್ತ ಬಾಲಕಿಯನ್ನ ಕರೆಸಿ ವಿಚಾರಣೆ ನಡೆಸಲಾಗಿದೆ. 


ಆತ ಚಾಟಿಂಗ್ ಹಾಗೂ ಫೋನ್ ಮಾಡಿ ಕಾಮದಾಟದ ಕುರಿದು ಪ್ರೇರೆಪಿಸುತ್ತಿದ್ದ. ಜೊತೆಗೆ ವಿಡಿಯೋ ಕಾಲ್ ಮಾಡಲೂ ಹಲವು ಬಾರೀ ಹಿಂಸಿಸಿದ್ದ. ಕಾಮ ಪಾಠದ ಮೊದಲ ಪಾಠ, ಎರಡನೇ ಪಾಠ ಏನು ಅಂತ ಅತೀ ಕೀಳುಮಟ್ಟದಲ್ಲಿ ಹೇಳುತ್ತಿದ್ದ. ಕೆಲವೊಮ್ಮೆ ಶಾಲಾ ಅವಧಿಯಲ್ಲಿ ಕೋಣೆಗೆ ಕರೆಸಿ ಮೈ ಕೈ ಮುಟ್ಟಿಯೂ ಮಾತನಾಡಿಸಿ ಲೈಂಕಿಕ ಕಿರುಕುಳ ನೀಡಿದ್ದನಂತೆ.. ಸರ್ ಎನ್ನಬೇಡ..ಬಾಯ್ ಫ್ರೆಂಡ್ ಅಂತ ಹೇಳು.. ಹೀಗೆ ವಿವಿಧ ರೀತಿ ಬಾಲಕಿಗೆ ಟಾರ್ಚರ್ ನೀಡಿದ್ದ.. ಇದಷ್ಟೇ ಅಲ್ಲ ಇದಕ್ಕೂ ಮುನ್ನ ಓರ್ವ ಶಿಕ್ಷಕಿ ಜೊತೆಗೂ ಅನುಚಿತವಾಗಿ ವರ್ತಿಸಿದ್ದನಂತೆ.. ಆದ್ರೆ ಆಗ ಆ ವಿಚಾರ ಬೆಳಕಿಗೆ ಬಂದಿರ್ಲಿಲ್ಲ.


ಏಡಿ ಜೊತೆ ಚಲ್ಲಾಟ ಆಡೋಕೆ ಹೋದ ತಾತನ ಫಜೀತಿ ನೋಡ್ರಪ್ಪಾ...! ಪಾಪ.. ಅಜ್ಜ


ಸದ್ಯ ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೆರೆಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ಪ್ರಿನ್ಸಿಪಲ್ ವಿರುದ್ಧ ಲೈಂಗಿಕ ಕಿರುಕುಳ, ಪೋಕ್ಸೋ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆತನನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.