Trending News: ಇಬ್ಬರಿಗೆ ಒಬ್ಬನೇ ಗಂಡ, ಶಿಫ್ಟ್’ನಲ್ಲಿ ಸಂಸಾರ; 3 ದಿನ ಅವಳಿಗೆ, 3 ದಿನ ಇವಳಿಗೆ… ಭಾನುವಾರ ಮಾತ್ರ…!

Trending News: ಜೋಡಿ ತಮ್ಮ ನಡುವೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು, ಇಬ್ಬರೂ ಪರಸ್ಪರ ನಿಷ್ಠರಾಗಿರಲು ಮತ್ತು ಬದ್ಧರಾಗಿರಲು ಗುರು ಹಿರಿಯರಿದ್ದು ಅವರಿಗೆ ಆಶೀರ್ವಾದ ಮಾಡುತ್ತಾರೆ. ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದಾದ ಸಂದರ್ಭಗಳಿವೆ. ಆದರೆ ಅವುಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು,

Written by - Bhavishya Shetty | Last Updated : Mar 17, 2023, 01:51 PM IST
    • ಇದೀಗ ಅಂತಹ ಒಂದು ಪ್ರಕರಣವು ಹರಿಯಾಣದ ಗುರುಗ್ರಾಮ್‌’ನಲ್ಲಿ ವರದಿಯಾಗಿದೆ
    • ಅಲ್ಲಿ ಒಬ್ಬ ಪುರುಷನು ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ.
    • ಅಷ್ಟೇ ಅಲ್ಲ ಇಬ್ಬರೂ ಸಹ ಒಂದೊಂದು ಮಗುವಿಗೆ ಜನ್ಮ ನೀಡಿದ್ದಾರೆ.
Trending News: ಇಬ್ಬರಿಗೆ ಒಬ್ಬನೇ ಗಂಡ, ಶಿಫ್ಟ್’ನಲ್ಲಿ ಸಂಸಾರ; 3 ದಿನ ಅವಳಿಗೆ, 3 ದಿನ ಇವಳಿಗೆ… ಭಾನುವಾರ ಮಾತ್ರ…! title=
Gurugram

marriage viral story: ಮದುವೆಯೆಂದರೆ ಎರಡು ಜೀವಗಳ ಮಿಲನ. ವಧು-ವರ, ಅವರ ಕುಟುಂಬಗಳು ಒಗ್ಗೂಡಿ ಈ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ಮುಖ್ಯವಾಗಿ ಹಿಂದೂ ಸಂಪ್ರದಾಯಗಳ ಬಗ್ಗೆ ಮಾತನಾಡುವುದಾದರೆ, ಅನೇಕ ಧಾರ್ಮಿಕ ಕಾರ್ಯಗಳು, ಪದ್ಧತಿ, ಪೂಜೆ ಪುನಸ್ಕಾರಗಳನ್ನು ಮದುವೆಯ ಸಂದರ್ಭದಲ್ಲಿ ನಡೆಸಲಾಗುತ್ತದೆ. ಈ ಮೂಲಕ ನವಜೋಡಿಗಳ ದಾಂಪತ್ಯ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸಲಾಗುತ್ತದೆ.

ಇದನ್ನೂ ಓದಿ: ಚೆನ್ನೈನಲ್ಲಿ ಚಾಲಕ ರಹಿತ ಮೆಟ್ರೋ ಸೇವೆ: ಡಿಜಿಟಲ್ ಸಿಗ್ನಲ್ ಸಿಸ್ಟಮ್ ಅಳವಡಿಸಲಿದೆ ಕರುನಾಡಿನ ಹಿಟಾಚಿ ರೈಲ್

ಜೋಡಿ ತಮ್ಮ ನಡುವೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು, ಇಬ್ಬರೂ ಪರಸ್ಪರ ನಿಷ್ಠರಾಗಿರಲು ಮತ್ತು ಬದ್ಧರಾಗಿರಲು ಗುರು ಹಿರಿಯರಿದ್ದು ಅವರಿಗೆ ಆಶೀರ್ವಾದ ಮಾಡುತ್ತಾರೆ. ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದಾದ ಸಂದರ್ಭಗಳಿವೆ. ಆದರೆ ಅವುಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು,

ಆದರೆ ದಾಂಪತ್ಯದಲ್ಲಿ ಹೆಚ್ಚಾಗಿ ಸಮಸ್ಯೆ ಕಾಣಿಸಿಕೊಳ್ಳುವುದು ಪತಿ ಅಥವಾ ಪತ್ನಿ, ಯಾರಾದರೊಬ್ಬರು ಅನ್ಯರೊಂದಿಗೆ ಸಂಬಂಧ ಹೊಂದಿ ಮೋಸ ಮಾಡಿದಾಗ. ಇದೀಗ ಅಂತಹ ಒಂದು ಪ್ರಕರಣವು ಹರಿಯಾಣದ ಗುರುಗ್ರಾಮ್‌’ನಲ್ಲಿ ವರದಿಯಾಗಿದೆ, ಅಲ್ಲಿ ಒಬ್ಬ ಪುರುಷನು ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲ ಇಬ್ಬರೂ ಸಹ ಒಂದೊಂದು ಮಗುವಿಗೆ ಜನ್ಮ ನೀಡಿದ್ದಾರೆ.  

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗುರುಗ್ರಾಮ್ ಮೂಲದ ವ್ಯಕ್ತಿಯೊಬ್ಬರು 2018 ರಲ್ಲಿ 28 ವರ್ಷದ ಮಹಿಳೆಯನ್ನು ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ. ಎರಡು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದನು. ಆದರೆ 2020ರಲ್ಲಿ ಕೊರೊನಾ ಪ್ರೇರಿತ ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಆತ ತನ್ನ ಪತ್ನಿಯನ್ನು ತವರು ಮನೆಯಲ್ಲಿ ಬಿಡಲು ನಿರ್ಧರಿಸಿದ. ಲಾಕ್ ಡೌನ್ ಮುಂದುವರೆದ ಕಾರಣ ಅಲ್ಲಿಯೇ ವಾಸವಾಗಿದ್ದಳು.

ಆದರೆ ಲಾಕ್‌ಡೌನ್ ಸಮಯದಲ್ಲಿ ಆಕೆಯ ಪತಿ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಲು ಪ್ರಾರಂಭಿಸಿದ. ಅಷ್ಟೇ ಅಲ್ಲದೆ, ಇಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಆ ನಂತರ ಇಬ್ಬರು ಮದುವೆಯಾಗಿದ್ದು, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಘಟನೆಯ ಬಗ್ಗೆ ತಿಳಿದ ಮೊದಲ ಹೆಂಡತಿ ಕೋಪಗೊಂಡು ಗಂಡನನ್ನು ನೋಡಲು ಅಪಾರ್ಟ್ಮೆಂಟ್’ಗೆ ಹೋಗಿದ್ದಾಳೆ. ಈ ವಿವಾದ ತಾರಕಕ್ಕೇರಿ, ಕಡೆಗೆ ತನ್ನ ಮಗನಿಗೆ ಹಣಕಾಸಿನ ನೆರವು ಕೋರಿ ಗಂಡನ ವಿರುದ್ಧ ಮೊಕದ್ದಮೆ ಹೂಡಿದಳು.

ಇದನ್ನೂ ಓದಿ: Viral Video: ನಿಂಗಿದು ಬೇಕಿತ್ತಾ…! ಬೆಟ್ ಕಟ್ಟಿ ಮೊಸಳೆ ಟಚ್ ಮಾಡಲು ಹೋದ ತಾತನಿಗೆ… ವಿಡಿಯೋ ನೋಡಿ

ನಂತರ ಇಬ್ಬರು ಸಮಾಲೋಚಕರನ್ನು ಭೇಟಿ ಮಾಡಲು ನಿರ್ಧರಿಸಿದರು, ಅದರ ನಂತರ ಪತಿ ತನ್ನ ವಾರವನ್ನು ಇಬ್ಬರು ಹೆಂಡತಿಯರು ಮತ್ತು ಅವರ ಮಕ್ಕಳ ನಡುವೆ ಸಮಾನವಾಗಿ ವಿಭಜಿಸಬೇಕು ಎಂದು ಅವರು ಸಲಹೆ ನೀಡಿದರೆ. ಆ ಬಳಿಕ ಮಹಿಳೆಯರು ಮತ್ತು ಮಕ್ಕಳಿಗೆ ತಲಾ ಮೂರು ದಿನಗಳು ಮತ್ತು ಒಂದು ದಿನ ತನಗಾಗಿ ಮಾತ್ರ ಎಂದು ನಿರ್ಧರಿಸಲಾಯಿತು. ಇದೀಗ ಮೂರು ದಿನ ಅವಳಿಗೆ ಮೂರು ದಿನ ಇವಳಿಗೆ ಭಾನುವಾರ ಮಾತ್ರ ತನಗೆ ಎಂದು ಜೀವನ ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News