ರಾಮನಗರ: ಸಿದ್ದಗಂಗಾ ಶಾಖಾ ಮಠವಾಗಿರೋ ರಾಮನಗರ ತಾಲೂಕಿನ ಬಂಡೆಮಠದ ಬಸವಲಿಂಗಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಹುಟ್ಟಿಕೊಂಡಿವೆ. ಬಸವಲಿಂಗ ಶ್ರೀಗಳು ಬೆಟ್ಟದಮೇಲಿನ ಅತಿಥಿಗೃಹದಲ್ಲಿ ನೇಣಿಗೆ ಶರಣಾಗಿದ್ದು ಸಾವಿಗೆ ಒಂದೊಂದೆ ಕಾರಣಗಳು ತೆರೆದುಕೊಳ್ಳುತ್ತಿವೆ. 


COMMERCIAL BREAK
SCROLL TO CONTINUE READING

ಸಾವಿಗೂ ಮುನ್ನ ಶ್ರೀಗಳು ಬರೆದಿಟ್ಟ ಡೆತ್ ನೋಟ್ ಕೂದೂರು ಪೊಲೀಸರ  ಕೈ ಸೇರಿದೆ. ಡೆತ್ ನೋಟ್ ನಲ್ಲಿ ಶ್ರೀಗಳು 'ನನ್ನ ತೇಜೋವಧೆಗಾಗಿ ಕೆಲವರು ಯತ್ನಿಸುತ್ತಿದ್ದಾರೆ' ಇದರಿಂದ ಮನಸ್ಸಿಗೆ ತೀವ್ರ ನೋವಾಗಿದ್ದು, ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಶ್ರೀಗಳು ಬರೆದಿದ್ದಾರೆ.  


ಇದನ್ನೂ ಓದಿ- Shine Your City ಅಭಿಯಾನಕ್ಕೆ ಪರಿಸರವಾದಿ ಸುರೇಶ್ ಹೆಬ್ಳೀಕರ್ ಚಾಲನೆ


ಮಹಿಳೆಯೊರ್ವಳಿಂದ ಶ್ರೀಗಳಿಗಳ ತೇಜೊವಧೆ ಮಾಡಲು ಯತ್ನಿಸಲಾಗಿತ್ತು ಎನ್ನಲಾಗಿದೆ. ಸ್ವಾಮೀಜಿಯವರ ಖಾಸಗಿ ಸಿಡಿ ಇಟ್ಟುಕೊಂಡು  ಶ್ರೀಗಳನ್ನ ಬ್ಲಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಶ್ರೀಗಳು ಸಾಕಷ್ಟು ಖಿನ್ನತೆಗೊಳಗಾಗಿದ್ದರು. ಅಷ್ಟೇ ಅಲ್ಲದೆ ಕಳೆದ ನಾಲ್ಕು ದಿನದ ಹಿಂದೆ ಕೂಡ ಈ ವಿಚಾರವಾಗಿ ಮಾತುಕತೆ ನಡೆದು ಆ ಮಹಿಳೆ ಸಿಡಿಯನ್ನ ಸಿದ್ದಗಂಗಾ ಶ್ರೀಗಳಿಗೆ ತಲುಪಿಸುವ ಧಮ್ಕಿ ಹಾಕಿದ್ದಾಗಿ ತಿಳಿದು ಬಂದಿದೆ.  


ಇದನ್ನೂ ಓದಿ- "ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸುಗ್ರಿವಾಜ್ಞೆ ರಾಜ್ಯಪಾಲರ ಅಂಕಿತ ಸಂತಸದ ಸಂಗತಿ"


ಇನ್ನೂ ಡೆತ್ ನೋಟ್ ಹಿಂದೆ ಬಿದ್ದಿರುವ ಪೊಲೀಸರು ಶ್ರೀಗಳಿಗೆ ಯಾರೆಲ್ಲಾ, ಯಾವ ಕಾರಣಕ್ಕೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ತನಿಖೆ ಮುಂದುವರೆಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.