Bangalore Crime : ಶೋಕಿಗಾಗಿ ಬೈಕ್‌ ಕಳ್ಳತನ, ಇಬ್ಬರನ್ನು ಬಂಧಿಸಿದ ಪೊಲೀಸರು

Bangalore Crime : ಬೈಕ್‌ಗಳನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಖತರ್ನಾಕ್‌ ಕಳ್ಳರನ್ನು ಕೇಂದ್ರ ವಿಭಾಗದ ವಿಲ್ಸನ್‌ ಗಾರ್ಡನ್‌ ಪೊಲೀಸರು ಬಂಧಿಸಿದ್ದಾರೆ. 

Written by - VISHWANATH HARIHARA | Edited by - Chetana Devarmani | Last Updated : Oct 23, 2022, 02:01 PM IST
  • ಬೈಕ್‌ಗಳನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಖತರ್ನಾಕ್‌ ಕಳ್ಳರು
  • ಶೋಕಿಗಾಗಿ ಬೈಕ್‌ ಕಳ್ಳತನ, ಇಬ್ಬರನ್ನು ಬಂಧಿಸಿದ ಪೊಲೀಸರು
  • ಕಳ್ಳರನ್ನು ಬಂಧಿಸಿದ ವಿಲ್ಸನ್‌ ಗಾರ್ಡನ್‌ ಪೊಲೀಸರು
Bangalore Crime : ಶೋಕಿಗಾಗಿ ಬೈಕ್‌ ಕಳ್ಳತನ, ಇಬ್ಬರನ್ನು ಬಂಧಿಸಿದ ಪೊಲೀಸರು  title=
ಬಂಧನ

ಬೆಂಗಳೂರು: ಬೈಕ್‌ಗಳನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಖತರ್ನಾಕ್‌ ಕಳ್ಳರನ್ನು ಕೇಂದ್ರ ವಿಭಾಗದ ವಿಲ್ಸನ್‌ ಗಾರ್ಡನ್‌ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಮೆಹರಾಜ್ ಅಲಿಯಾಸ್ ಪ್ರೇಮ್, ಶೇಖ್ ಅರ್ಜಾನ್ ಬಂಧಿತರು ಆರೋಪಿಗಳು. 

ಇದನ್ನೂ ಓದಿ : BJP Minister slaps woman : ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್: ತನಗೆ ಹೊಡೆದಿಲ್ಲ ಎಂದ ಮಹಿಳೆ!!

ಇಬ್ಬರು ಶೋಕಿ ಜೀವನ ನಡೆಸಬೇಕು ಎಂದು ನಿರ್ಧರಿಸಿ ಕಳ್ಳತನದ ಹಾದಿ ಹಿಡಿದಿದ್ದರು. ಹೀಗಾಗಿ ಸಿಕ್ಕ ಸಿಕ್ಕ ಬೈಕ್‌ಗಳನ್ನು ಕ್ಷಣ ಮಾತ್ರದಲ್ಲಿ ಎಗರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರು. ಸದ್ಯ ಬೈಕ್‌ ಕಳೆದುಕೊಂಡವರಿಂದ ಬಂದ ದೂರುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕದ್ದ ಬೈಕ್ ಮಾರಾಟ ಮಾಡುವ ವೇಳೆ ಇಬ್ಬರನ್ನು ಬಂಧಿಸಿದ್ದಾರೆ. 

ಇದನ್ನೂ ಓದಿ : ಗೃಹಿಣಿಯ ಅನುಮಾನಾಸ್ಪದ ಸಾವು; ಚೆನ್ನಾಗಿ ನೋಡ್ಕೋತ್ತೀನಿ ಎಂದಿದ್ದ ಗಂಡ..!

ಆರೋಪಿಗಳಿಂದ 5.50ಲಕ್ಷ ಮೌಲ್ಯದ ಹತ್ತು ಬೈಕ್ ಗಳನ್ನು ಸೀಜ್‌ ಮಾಡಿದ್ದಾರೆ. ಅದೆನೇ ಇರ್ಲಿ ದುಡಿದು ತಿನ್ನುವ ವಯಸ್ಸಲ್ಲಿ ಶೋಕಿ ಮಾಡೋಕೆ ಹೋಗಿ ಈ ರೀತಿ ಕಳ್ಳತನ ಹಾದಿ ಹಿಡಿದವರು ಈಗ ಪೊಲೀಸರ ಅತಿಥಿಗಳಾಗಿ ಕಂಬಿ ಹಿಂದೆ ಸೇರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News