ಬೆಂಗಳೂರು : 100ಕ್ಕೆ ನೂರು ಪ್ರಶ್ನೆಗಳಿಗೆ ಉತ್ತರಿಸಿದೆ ಅಂತ ಟಿಕ್ ಮಾಡಿದ್ದಾರೆ. ಅವರು ಬರೆದ ಉತ್ತರ ಪತ್ರಿಕೆ ಪ್ರತಿ ಫೋಟೋ ಕಳಿಸಿದ್ದಾರೆ. ಹೊರಗಡೆ ಬಂದ ಬಳಿಕ ದಿವ್ಯ ಹಾಗರಗಿ ಪ್ರಶ್ನೆ ಪತ್ರಿಕೆ ತುಂಬುವುದು. ಇದಕ್ಕೆ ಸಹಕಾರ ಕೊಟ್ಟ ಇನ್ವಿಜಿಲೇಟರ್ ಗೆ 4000 ರೂ. ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರೇ ಹೇಳ್ತಾರೆ..? ರಾಜಕಾರಣಿ, ಅಧಿಕಾರಿಗಳ ಸಪೋರ್ಟ್ ಇಲ್ಲದೇ ಇದು ಸಾಧ್ಯವೇ..? ಸಂಬಂಧಿಕರಿಗೆ ರಿಯಾಯಿತಿ ಕೊಟ್ಟಿದ್ದಾರೆ. ಬೇರೆ ಅಭ್ಯರ್ಥಿ ಕಳಿಸಿಕೊಟ್ರೆ ಹೆಚ್ಚು ಹಣ ಪಡೆದಿದ್ದಾರೆ. ಒಂದೇ ಸೆಂಟರ್ ನಲ್ಲಿ ಮೂರು ಕೋಟಿ ವ್ಯವಹಾರ ನಡೆದಿದೆ. ಬೇರೆ ಕೇಂದ್ರಗಳ ಮಾಹಿತಿ ಯಾಕೆ ಕೊಡ್ತಿಲ್ಲ ಎಂದರು. 


ಇದನ್ನೂ ಓದಿ : Lakshmi Hebbalkar : ಬಿಎಸ್​ವೈ ಭೇಟಿಯಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!


ಹೀಗೆ ಮುಂದುವರೆದು ಮಾತನಾಡಿದ ಅವರು, ವಿಧಾನ ಸೌಧ ವ್ಯಾಪಾರ ಸೌಧ ಆಗಿದೆ. ಗೊತ್ತಾಗುತ್ತೆ ಅಂತ ಇಲ್ಲಿಯವರೆಗೆ ತನಿಖೆಗೆ ಬಿಟ್ಟಿಲ್ಲ.  ಕಲಬುರ್ಗಿಯಲ್ಲೆ ಕೇಸ್ ಮುಗಿಸೋ ಕೆಲಸ ಆಗ್ತಿದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ