ಮಂಡ್ಯ : ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವರು ಮಹಾತ್ಮ ಗಾಂಧಿ. ಆದ್ರೆ, ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದ್ರೆ ಈ ಮಾತಿಗೆ ಯಾವುದೇ‌ ಆಧಾರವಿಲ್ಲ ಎಂದು ಪ್ರೊ.ಭಗವಾನ್ ಮತ್ತೆ ರಾಮನ ವಿರುದ್ಧ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರೊ. ಭಗವಾನ್, ರಾಮ 14 ವರ್ಷ‌ ಕಾಡಿನಲ್ಲಿ ವನವಾಸವಿದ್ದ. ವನವಾಸ ಮುಗಿಸಿ ವಾಪಸ್ಸು ಬಂದು‌ 11 ವರ್ಷ ರಾಜ್ಯಭಾರ ಮಾಡಿದ. ಆದ್ರೆ, ಆಡಳಿತ ನಡೆಸದೆ ಕೆಲ ಪುರೋಹಿತರ ಜೊತೆ ಆ ಕಥೆ ಈ ಕಥೆ ಹೇಳಿಕೊಂಡು‌ ರಾಮ ಕಾಲ ಕಳೆಯುತ್ತಿದ್ದ. ಮಧ್ಯಾಹ್ನದ ಬಳಿಕ ರಾಮ ಸೀತೆಗೆ ಹೆಂಡವನ್ನ ಕುಡಿಸಿ,‌ ಆತನು ಕುಡಿತಿದ್ದ. ಅದಕ್ಕೆಲ್ಲ ದಾಖಲೆಗಳಿವೆ. ಇವೆಲ್ಲ ನನ್ನ ಮಾತುಗಳಲ್ಲ, ವಾಲ್ಮೀಕಿ ರಾಮಾಯಾಣ, ಉತ್ತರಖಾಂಡದಲ್ಲಿ ಇರುವ ಮಾತುಗಳು. ರಾಮನ 11 ವರ್ಷದ ಆಡಳಿತದಲ್ಲಿ ಮೂರು ಘಟನೆಗಳು ನಡೆದಿವೆ. ಯಾರೋ ಸೀತೆ ಮೇಲೆ ಅಪವಾದ ಹೇಳಿದ ಅಂತಾ ಗರ್ಭಿಣಿ ಸೀತೆಯನ್ನ ಕಾಡಿಗೆ ಓಡಿಸಿಬಿಟ್ಟ. ಸೀತೆ ಸಮರ್ಥಿಸಿಕೊಳ್ಳಲು ಅವಕಾಶವನ್ನು‌ ಕೊಡಲಿಲ್ಲ. ಕೊಲೆ ಮಾಡಿದ್ರು ಅವಕಾಶ ಕೊಡ್ತಾರೆ. ಕಾಡಿನಲ್ಲಿ ವಾಲ್ಮಿಕಿ ಸಿಗದಿದ್ದರೇ ಗರ್ಭಿಣಿ ಸೀತೆ ಕಥೆ ಏನಾಗುತ್ತಿದ್ದಳು? 16-17 ವರ್ಷ ಸೀತೆ ಏನಾದ್ಲು ಅನ್ನೋದನ್ನೆ ರಾಮ ಕೇಳಲಿಲ್ಲ. ಊಟ ಹಾಕಿದ ದುರ್ವಾಸ ಮುನಿಯನ್ನ ಸಭೆ ವೇಳೆ ಬಿಟ್ಟಿದ್ದಕ್ಕೆ ಲಕ್ಷ್ಮಣನನ್ನೇ ರಾಮ ಗಡಿಪಾರು ಮಾಡಿದ. ಕೊನೆಗೆ ಲಕ್ಷ್ಮಣ, ನದಿ ದಡದ ಮೇಲೆ ಅತ್ಕೊಂಡು ಸತ್ತೋದಾ. ತಪಸ್ಸು ಮಾಡ್ತಿದ್ದ ಶೂದ್ರ ಶಂಭುಕನನ್ನ ರಾಮ ಕತ್ತಿಯಲ್ಲೆ ಕಡಿದು ಹಾಕಿದ. ಇವೆಲ್ಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ನೀವು ಹೇಗೆ ರಾಮನನ್ನ ಆದರ್ಶ ವ್ಯಕ್ತಿ ಅಂತ ಕರೆಯುತ್ತೀರೀ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ : 'ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಿದ್ರೆ, ಇವತ್ತು ಕರ್ನಾಟಕ - ತಮಿಳುನಾಡು ನಡುವೆ ನೀರಿನ ಗಲಾಟೆ ಇರುತ್ತಿರಲಿಲ್ಲ'


ಇನ್ನೂ ಮುಂದುವರೆದು ಮಾತನಾಡಿದ ಅವರು, ನಿಮಗೆ ರಾಮನ ಬಗ್ಗೆ ಗೊತ್ತಿಲ್ಲದೆ ಮಕ್ಕಳಿಗೆಲ್ಲ ರಾಮ ಅಂತ ಹೆಸರಿಟ್ಟಿದ್ದೀರಿ. ಜಯರಾಮ, ಅಭಿರಾಮ ಅಂತೆಲ್ಲ ಹೆಸರಿಟ್ಟಿದ್ದೀರಾ. ಹೆಂಗಸರು ಅಯ್ಯೋ ರಾಮರಾಮ ಅಂತೆಲ್ಲ ಬೈಯುತ್ತಾರೆ. ರಾಮ‌ 20 ವರ್ಷ‌ ಹೆಂಡತಿ ಬಿಟ್ಬಿಟ್ಟಿದ್ದ. ಎಂಥಹ ಪರಿಸ್ಥಿತಿಯಲ್ಲಿದ್ದಾರೆ ನೋಡಿ ಜನ ಎಂದು ರಾಮನ ವಿರುದ್ದ ಮತ್ತೆ ಕಿಡಿಕಾರಿದ್ದಾರೆ.


ಇದನ್ನೂ ಓದಿ : “ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ”


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.