“ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ”

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ದಿಸೆಯಿಂದ ನನ್ನ ರಾಜಕೀಯ ಪ್ರಾರಂಭವಾಗಿ ಸುಮಾರು 48 ವರ್ಷಗಳನ್ನ ಪೂರೈಸಿದ್ದೇನೆ. ನಾ ಸು ಹರ್ಡಿಕರ್ ಅವರ ಆದರ್ಶಗಳನ್ನು ಪಾಲಿಸುತ್ತಾ, ಗಾಂಧಿ ಟೋಪಿಯನ್ನ ಧರಿಸುವ ಮೂಲಕ ನನ್ನ ರಾಜಕೀಯ ಜೀವನ ಪ್ರಾರಂಭವಾಯಿತು.

Written by - Zee Kannada News Desk | Last Updated : Jan 20, 2023, 07:15 PM IST
  • ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ, ಯೂತ್ ಕಾಂಗ್ರೆಸ್ ಘಟಕಗಳ ರಾಷ್ಟ್ರೀಯ ಮುಂಚೂಣಿ ನಾಯಕತ್ವವಹಿಸಿಕೊಂಡು ಪಕ್ಷ ಸಂಘಟನೆ ಮಾಡಿದೆ.
  • ನಾನೆಂದು ಸರ್ಕಾರದ ಅಧಿಕಾರವನ್ನ ಪಡೆದಿಲ್ಲ. ಒಮ್ಮೆ ಮಾತ್ರ ಬೋರ್ಡ್ ಅಧ್ಯಕ್ಷನಾಗಿದ್ದೆ.
  • ಈಗ ಪರಿಷತ್ ನ ವಿಪಕ್ಷ ನಾಯಕನಾಗಿ ನನ್ನ ಸಕ್ರಿಯ ರಾಜಕೀಯ ಮುಂದುವರೆದಿದೆ.
 “ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ” title=
file photo

ಬೆಂಗಳೂರು: ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯದ ಚುನಾವಣೆ ಬರಲಿದೆ. ಪ್ರತಿಪಕ್ಷಗಳ ಮೇಲೆ ಜವಾಬ್ದಾರಿ ಇದೆ. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳನ್ನ ತೆರದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಬಂದ್ರೆ ಅಭಿವೃದ್ಧಿ ರಾಜ್ಯವಾಗುತ್ತೆ , ಅನುದಾನ ಹೆಚ್ಚು ಸಿಗುತ್ತೆ ಎಂದು ಬಿಜೆಪಿ ಭರವಸೆ ನೀಡಿ ಓಟು ಹಾಕಿಸಿಕೊಂಡಿದೆ. ಆದ್ರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ರಾಜ್ಯ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ದಿಸೆಯಿಂದ ನನ್ನ ರಾಜಕೀಯ ಪ್ರಾರಂಭವಾಗಿ ಸುಮಾರು 48 ವರ್ಷಗಳನ್ನ ಪೂರೈಸಿದ್ದೇನೆ. ನಾ ಸು ಹರ್ಡಿಕರ್ ಅವರ ಆದರ್ಶಗಳನ್ನು ಪಾಲಿಸುತ್ತಾ, ಗಾಂಧಿ ಟೋಪಿಯನ್ನ ಧರಿಸುವ ಮೂಲಕ ನನ್ನ ರಾಜಕೀಯ ಜೀವನ ಪ್ರಾರಂಭವಾಯಿತು.

ದೇಶ ಸುತ್ತಾಡಿ ಪಕ್ಷದ 19 ರಾಜ್ಯದ ಉಸ್ತುವಾರಿಯಾಗಿ ಸಾಕಷ್ಟು ಅನುಭವಗಳ ಪಡೆದಿದ್ದೇನೆ. ಇಪ್ಪತ್ತೈದು ವರ್ಷಗಳ ಕಾಲ ದೆಹಲಿಯಲ್ಲಿ ರಾಜಕಾರಣ ಮಾಡಿರುವ ಅನುಭವ ಎಂದೂ ಮರೆಯಲು ಸಾಧ್ಯವಿಲ್ಲ. ದೆಹಲಿಯ ಕೇಂದ್ರವಾಗಿಟ್ಟುಕೊಂಡು ಎಲ್ಲಾ ರಾಜ್ಯಗಳ ರಾಜಕೀಯ ವಿದ್ಯಮಾನವನ್ನ ಗ್ರಹಿಸುವ ಅನುಭವವೇ ಅದ್ಭುತ. ಅದೊಂದು ಸಾಗರವಿದ್ದಂತೆ. ಸೇವಾದಳದ ರಾಷ್ಟ್ರೀಯ ಅಧ್ಯಕ್ಷನಾಗಿ ಮೊದಲ ಬಾರಿಗೆ ದೇಶವನ್ನ ಸುತ್ತಾಡುವುದು, ರಾಜಕೀಯವನ್ನ ನೋಡುವಂತಹ ಅವಕಾಶ ದೊರೆಯಿತು.

ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ, ಯೂತ್ ಕಾಂಗ್ರೆಸ್ ಘಟಕಗಳ ರಾಷ್ಟ್ರೀಯ ಮುಂಚೂಣಿ ನಾಯಕತ್ವವಹಿಸಿಕೊಂಡು ಪಕ್ಷ ಸಂಘಟನೆ ಮಾಡಿದೆ. ನಾನೆಂದು ಸರ್ಕಾರದ ಅಧಿಕಾರವನ್ನ ಪಡೆದಿಲ್ಲ. ಒಮ್ಮೆ ಮಾತ್ರ ಬೋರ್ಡ್ ಅಧ್ಯಕ್ಷನಾಗಿದ್ದೆ. ಈಗ ಪರಿಷತ್ ನ ವಿಪಕ್ಷ ನಾಯಕನಾಗಿ ನನ್ನ ಸಕ್ರಿಯ ರಾಜಕೀಯ ಮುಂದುವರೆದಿದೆ.

ದೇಶವನ್ನ ಸುತ್ತಾಡಿದ ಅನುಭವದಿಂದ ಹೇಳುವುದಾದರೆ ನಾವೆಲ್ಲ ಸ್ವರ್ಗದಲ್ಲಿದ್ದೇವೆ. ನಮಗೆ ಯಾವ ಮಾದರಿಗಳು ಬೇಕಿಲ್ಲ. ಗುಜರಾತ್ ಮಾಡೆಲ್, ಯುಪಿ ಮಾಡೆಲ್ಲ ಎಲ್ಲವೂ ಸುಳ್ಳು. ಕರ್ನಾಟಕದ ಮಾದರಿಯನ್ನೇ ಬೇರೆ ರಾಜ್ಯಗಳು ಅನುಸರಿಸಬೇಕು. ಕೆಲವು ರಾಜ್ಯಗಳು ಹಸಿವಿನಿಂದ, ರೋಗಗ್ರಸ್ಥವಾಗಿದೆ. ಆದರೆ ಕರ್ನಾಟಕದ ಸಾರ್ವಜನಿಕ ವಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವು ಮುಂದಿದ್ದೇವೆ. ಆದರೆ ಇಂತಹ ಮಾದರಿಗಳಿಗೆ ಬಿಜೆಪಿ ಸರ್ಕಾರ ಮಸಿ ಬಳಿದಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರ ಒಂದು ಕಳಂಕವಾಗಿದೆ ಎಂದು ಬಿ.ಕೆಹರಿಪ್ರಸಾದ್ ಅವರು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News