`ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಿದ್ರೆ, ಇವತ್ತು ಕರ್ನಾಟಕ - ತಮಿಳುನಾಡು ನಡುವೆ ನೀರಿನ ಗಲಾಟೆ ಇರುತ್ತಿರಲಿಲ್ಲ`
ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದನಾ? ಟಿಪ್ಪು ಡ್ಯಾಂ ಕಟ್ಟಿಸಿದ್ರೆ ಕರ್ನಾಟಕ - ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಗೆ ಆಗ್ತಿರಲಿಲ್ವಂತೆ ಎಂದು ಪ್ರೊ. ಭಗವಾನ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಂಡ್ಯ : ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದನಾ? ಟಿಪ್ಪು ಡ್ಯಾಂ ಕಟ್ಟಿಸಿದ್ರೆ ಕರ್ನಾಟಕ - ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಗೆ ಆಗ್ತಿರಲಿಲ್ವಂತೆ ಎಂದು ಪ್ರೊ. ಭಗವಾನ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರೊ. ಭಗವಾನ್, ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟೆ ಕಟ್ಟಬೇಕು ಎಂದು ಮನಸ್ಸು ಮಾಡಿದ್ದ. ಅಷ್ಟೊತ್ತಿಗೆ 4ನೇ ಆಂಗ್ಲೋ-ಮೈಸೂರು ಯುದ್ದ ನಡೆದು ಅದು ನಿಂತೋಯ್ತು. ಒಂದು ಪಕ್ಷ ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಿ ಮುಗಿಸಿದ್ರೆ ಇವತ್ತಿನ ರೀತಿ ನೀರಿಗಾಗಿ ಗಲಾಟೆಯೆ ನಡೆಯುತ್ತಿರಲಿಲ್ಲ. ಯಾಕಂದ್ರೆ ತಮಿಳುನಾಡು ಪ್ರದೇಶ ಸಂಪೂರ್ಣ ಟಿಪ್ಪು ಆಡಳಿತದ ವಶದಲ್ಲಿತ್ತು. ಆದ್ದರಿಂದ, ಟಿಪ್ಪು ಯಾರ ಅನುಮತಿಯನ್ನ ಕೇಳಬೇಕಿರಲಿಲ್ಲ. ಟಿಪ್ಪು ಡ್ಯಾಂ ಕಟ್ಟಿದ್ರೆ ಕರ್ನಾಟಕ ಹಾಗೂ ತಮಿಳುನಾಡು ಜನರು ನೆಮ್ಮದಿಯಿಂದ ಇರುತ್ತಿದ್ದರು. ಆದ್ರೆ, ಅಂತ ಅವಕಾಶ ನಮಗೆ ತಪ್ಪಿ ಹೋಯಿತು.
ಇದನ್ನೂ ಓದಿ : “ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ”
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.