ಶಿವಮೊಗ್ಗಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸಕ್ಕೆ ಬಂಜಾರ ಸಮುದಾಯದ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಯತ್ನ ನಡೆಸಿದ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ ಮೀಸಲಾತಿ ಮತ್ತು ಒಳಮೀಸಲಾತಿ ಪರಿಷ್ಕರಣೆಗೆ ಬಂಜಾರ ಸಮುದಾಯದ ತೀವ್ರ ಆಕ್ರೋಶ ಎದುರಾಗಿದೆ. ಇವತ್ತು ಇದೇ ವಿಚಾರಕ್ಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ ಬಂಜಾರ (ಲಂಬಾಣಿ) ಸಮುದಾಯದ ಜನರು, ಇಲ್ಲಿನ ಪ್ರಮುಖ ಸರ್ಕಲ್​ನಲ್ಲಿ ಧರಣಿ ನಡೆಸಿದರು.


ಇದನ್ನೂ ಓದಿ: Yadgiri: ಬಟ್ಟೆ ಅಂಗಡಿಗೆ ಬೆಂಕಿ, ದಂಪತಿ ಸಜೀವ ದಹನ!


 ಈ ಪ್ರತಿಭಟನೆ ಕೆಲವೇ ಹೊತ್ತಿನಲ್ಲಿ ಪ್ರಕ್ಷ್ಯಬ್ರವಾಗಿದ್ದು, ಪ್ರತಿಭಟನಾಕಾರರು ಏಕಾಏಕಿ  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸದತ್ತ ತೆರಳಿದರು. ಅಲ್ಲಿ ಅವರ  ಪ್ರತಿಭಟನೆಗೆ ಸ್ವಂದಿಸದ ಕಾರಣ ಬಂಜಾರ  ಸಮುದಾಯದ ಜನರು  ಮುತ್ತಿಗೆ ಹಾಕಲು ಮುಂದಾದರು.


ಇದನ್ನೂ ಓದಿ: Anekal: ವಿಲೇಜ್ ಅಕೌಂಟೆಂಟ್ ನೇಣಿಗೆ ಶರಣು, ಯುವತಿ ಸಾವಿನ ಸುತ್ತ ಅನುಮಾನ!


ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು, ಇದರಿಂದ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು, ಯಡಿಯೂರಪ್ಪನವರ ಮನೆಯ ಸಿಸಿಟಿವಿ ಧ್ವಂಸಗೊಳಿಸಿದರು. ಅಲ್ಲದೆ ಗಾಜುಗಳನ್ನ ಪುಡಿಮಾಡಿದ್ದಾರೆ. ಇನ್ನೂ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್​ ಕೂಡ ನಡೆಸಿದ್ರು. ಈ ವೇಳೆ ಕೆಲ ಪೊಲೀಸರಿಗೂ ಸಹ ಗಾಯಗಳಾಗಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.