Yadgiri: ಬಟ್ಟೆ ಅಂಗಡಿಗೆ ಬೆಂಕಿ, ದಂಪತಿ ಸಜೀವ ದಹನ!

Cloth shop caught fire: 4 ಗಂಟೆಯಿಂದ ಹರಸಾಹಸ ಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಮನೆಯ ಮೇಲಿನ ಮಹಡಿಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ.

Written by - Puttaraj K Alur | Last Updated : Mar 27, 2023, 12:44 PM IST
  • ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ
  • ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವ ದಹನ
  • ಸುಮಾರು 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮ
Yadgiri: ಬಟ್ಟೆ ಅಂಗಡಿಗೆ ಬೆಂಕಿ, ದಂಪತಿ ಸಜೀವ ದಹನ! title=
ದಂಪತಿ ಸಜೀವ ದಹನ!

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವ ದಹನವಾಗಿರುವ ಘಟನೆ  ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ನಡೆದಿದೆ. ಸೈದಾಪುರ ಪಟ್ಟಣದ ಖ್ಯಾತ ಬಟ್ಟೆ ಉದ್ಯಮಿ ರಾಘವೇಂದ್ರ(39) ಮತ್ತು ಅವರ ಪತ್ನಿ ಶಿಲ್ಪಾ(35) ಎಂದು ಗುರುತಿಸಲಾಗಿದೆ.

ಸೈದಾಪುರದಲ್ಲಿರುವ 3 ಮಹಡಿಯ ಮನೆಯ ಕೆಳಮಹಡಿಯಲ್ಲಿ ಮೃತ ದಂಪತಿ ವಾಸಿಸುತ್ತಿದ್ದರು. ಮೇಲಿನ 2 ಮಹಡಿಗಳಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಸುಮಾರು 3 ಕೋಟಿ ರೂ. ಮೌಲ್ಯದ ಬಟ್ಟೆಗಳು ಇದ್ದವು. ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ದಂಪತಿ ಮೇಲಿನ ಮಹಡಿಯಲ್ಲಿಯೇ ಮಲಗಿದ್ದರಂತೆ. ಮಕ್ಕಳು ಮತ್ತು ವೃದ್ಧ ತಂದೆ-ತಾಯಿ ಕೆಳಮಹಡಿಯ ಮನೆಯಲ್ಲಿ ಮಲಗಿದ್ದರು.

ಇದನ್ನೂ ಓದಿ: ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ

ಸೋಮವಾರ ನಸುಕಿನ ಜಾವ ಕೆಳಮಹಡಿಯ ಬಟ್ಟೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿದೆ. ಕ್ಷಣಮಾತ್ರದಲ್ಲಿಯೇ ಮನೆಯಿಡೀ ವ್ಯಾಪಿಸಿದ ಬೆಂಕಿ ಹೊತ್ತಿ ಉರಿದಿದೆ. ಮೇಲಿನ ಮಹಡಿಯಲ್ಲಿದ್ದ ದಂಪತಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂನಲ್ಲಿ ಹೋಗಿ ಅಡಗಿ ಕುಳಿತಿದ್ದರು. ಆದರೆ ದಟ್ಟ ಹೊಗೆಯಿಂದ ಉಸಿರುಗಟ್ಟಿ ದಂಪತಿ ಮೃತಪಟ್ಟಿದ್ದಾರೆ.

ಬಾತ್ ರೂಂನ ಗೋಡೆಯನ್ನು ಒಡೆಯಲಾಯಿತಾದರೂ ಅಷ್ಟೊತ್ತಿಗೆ ದಂಪತಿ ಪ್ರಾಣಬಿಟ್ಟಿದ್ದರು. ಮೃತ ದಂಪತಿಯ ದೇಹಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು ಪ್ರಯೋಜನವಾಗಿಲ್ಲ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಸತತ 4 ಗಂಟೆಗಳ ಕಾಲ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಡಬೇಕಾಯಿತು.   

ಇದನ್ನೂ ಓದಿ: Anekal: ವಿಲೇಜ್ ಅಕೌಂಟೆಂಟ್ ನೇಣಿಗೆ ಶರಣು, ಯುವತಿ ಸಾವಿನ ಸುತ್ತ ಅನುಮಾನ! 

4 ಗಂಟೆಯಿಂದ ಹರಸಾಹಸ ಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಮನೆಯ ಮೇಲಿನ ಮಹಡಿಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News