ಚಾಮರಾಜನಗರ: ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಅಕ್ಟೋಬರ್ 15 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದರು.


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಭಾಷೆ ಕಲಿಯುವುದೇ ಬೇರೆ- ಬಲವಂತವಾಗಿ ಹೇರುವುದೇ ಬೇರೆ.  ಅ.15 ರಂದು ರಾಜ್ಯಾದ್ಯಂತ ಹಿಂದಿ ನಾಮಫಲಕಗಳಿಗೆ ಮಸಿ ಬಳಿದು, ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.


ಇದನ್ನೂ ಓದಿ- ಭಾರತ್ ಜೋಡೋ ಯಾತ್ರೆ: ಡಿಕೆಶಿ-ಸಿದ್ದರಾಮಯ್ಯ ಆಂತರಿಕ ಕಲಹ ಮುಗಿಲು ಮುಟ್ಟಿದೆ ಎಂದ ಬಿಜೆಪಿ


ರಾಜ್ಯದಲ್ಲಿ ತಮಿಳರು, ತೆಲುಗರು, ಮಲಯಾಳಿ, ಗುಜರಾತಿಗಳು, ಮಾರ್ವಾಡಿಗಳು, ಹಿಂದಿಗರು ಸೇರಿದಂತೆ ಅನ್ಯಭಾಷಿಕರೇ ತುಂಬಿದ್ದಾರೆ. ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ.  ಬೆಂಗಳೂರು ಪರಭಾಷಿಗರ ಕೈಗೆ ಹೋಗಿದೆ.  ಇಡೀ ಬೆಂಗಳೂರು ಕನ್ನಡ ವಿರೋಧಿಯಾಗಿದೆ. ಇಡೀ ರಾಜ್ಯಕ್ಕೆ ಪರರಾಜ್ಯದ ಜನರು ಬಂದು ಸೇರುತ್ತಿದ್ದಾರೆ. ಕನ್ನಡವನ್ನು ಕೇಳುವವರೇ ಇಲ್ಲದಂತಾಗಿದ್ದು ಪ್ರಾದೇಶಿಕ ಭಾಷೆಗಳನ್ನು ತುಳಿಯುವುದು ಪ್ರಧಾನಿ ನರೇಂದ್ರಮೋದಿ,  ಅಮಿಶಷಾ ಅವರ ಗುರಿಯಾಗಿದೆ ಎಂದು ಆರೋಪಿಸಿದರು.


ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿಷ್ ಶಾ ಅವರು ಹಿಂದಿ ಹೇರಲು ಹೊರಟಿದ್ದಾರೆ. ಬಿಜೆಪಿ, ಆರ್ ಎಸ್ಎಸ್ ಅವರಿಗೆ ಹಿಂದಿ ಬೇಕಾಗಿದೆ. ಕನ್ನಡ ಬೇಕಾಗಿಲ್ಲ, ಮಾತೃಭಾಷ ಬೇಕಾಗಿಲ್ಲ  ಇವೆಲ್ಲದರ ವಿರುದ್ದವಾಗಿ ರಾಜ್ಯದಲ್ಲಿ ಕನ್ನಡ ಕಹಳೆ ಮೊಳಗಿಸುತ್ತೇವೆ ಎಂದರು.


ಇದನ್ನೂ ಓದಿ- ಚಾಮರಾಜನಗರದಲ್ಲಿ‌ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದ ಕಿಡಿಗೇಡಿಗಳು!


ಚುನಾವಣೆಗೆ ತಯಾರಿ: ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದು ಪ್ರತಿ ಭಾನುವಾರ 10 ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡುತ್ತಿದ್ದೇನೆ, ಈ ಬಾರಿ ಜಾತಿ- ಹಣ ಮುಖ್ಯವಲ್ಲ ಕೆಲಸ ಮಾಡುವವರು ಮುಖ್ಯ ಎಂದು ಜನರು ತೀರ್ಮಾನಿಸಿದ್ದು ನಾನೇ ಗೆಲ್ಲುತ್ತೇನೆ ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.