ಚಾಮರಾಜನಗರದಲ್ಲಿ‌ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದ ಕಿಡಿಗೇಡಿಗಳು!

ಸಂತೇಮರಹಳ್ಳಿ ವೃತ್ತದ ಸಮೀಪ ಸ್ಥಾಪಿಸಲಾಗಿದ್ದ ಗಣಪತಿಯನ್ನು ವಿಸರ್ಜನೆ ಮಾಡುವ ವೇಳೆ ರಾತ್ರಿ 11 ಗಂಟೆ ಆದರೂ ಜೋರಾಗಿ ಡಿಜೆ ಹಾಕಿ ನೃತ್ಯ ಮಾಡಲಾಗುತ್ತಿತ್ತು. ಈ ವೇಳೆ ಸಮಯ ರಾತ್ರಿ 11 ಗಂಟೆ ಆಗಿದೆ, ಜೋರಾಗಿ ಡಿಜೆ ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹಾಗಾಗಿ ಡಿಜೆ ಆಫ್ ಮಾಡಿ ಎಂದು ಪೊಲೀಸರು ಬುದ್ದಿಮಾತು ಹೇಳಿದ್ದಾರೆ. 

Written by - Yashaswini V | Last Updated : Sep 19, 2022, 09:15 AM IST
  • ಗಣಪತಿ ನಿಮಜ್ಜನ ವೇಳೆ ಡಿಜೆ ಆಫ್ ಮಾಡಿ ಎಂದಿದ್ದಕ್ಕೇ ಪೊಲೀಸರ ಮೇಲೆ ಕಲ್ಲೆಸೆತ
  • ಸಂತೇಮರಹಳ್ಳಿ ವೃತ್ತದ ಸಮೀಪ ಸ್ಥಾಪಿಸಲಾಗಿದ್ದ ಗಣಪತಿಯನ್ನು ವಿಸರ್ಜನೆ ಮಾಡುವ ವೇಳೆ ನದೆದಿರುವ ಘಟನೆ
  • ರಾತ್ರಿ 11 ಗಂಟೆ ಆದರೂ ಡಿಜೆ ಆಫ್ ಮಾಡದೇ ಕುಣಿಯುತ್ತಿದ್ದರಿಂದ ಪೊಲೀಸರು ಡಿಜೆ ಆಫ್ ಮಾಡಿ ಎಂದಿದ್ದಾರೆ.
ಚಾಮರಾಜನಗರದಲ್ಲಿ‌ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದ ಕಿಡಿಗೇಡಿಗಳು! title=
Stone pelting on Police

ಚಾಮರಾಜನಗರ: ಗಣಪತಿ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದು ಹೇಳಿದ್ದಕ್ಕೆ  ಪೊಲೀಸರ ಮೇಲೆ ಕಲ್ಲೆಸೆದಿರುವ ಘಟನೆ ಭಾನುವಾರ (ಸೆಪ್ಟೆಂಬರ್ 18) ತಡರಾತ್ರಿ ಚಾಮರಾಜನಗರ ಜಿಲ್ಲೆ, ಸಂತೇಮರಹಳ್ಳಿ ವೃತ್ತದ ಬಳಿ ನಡೆದಿದೆ. ಘಟನೆಯಲ್ಲಿ ಪಿಎಸ್ಐ ಮಹಾದೇವ್ ಎಂಬವವರ ತಲೆಗೆ ತೀವ್ರ ಪೆಟ್ಟಾಗಿದೆ.

ಸಂತೇಮರಹಳ್ಳಿ ವೃತ್ತದ ಸಮೀಪ ಸ್ಥಾಪಿಸಲಾಗಿದ್ದ ಗಣಪತಿಯನ್ನು ವಿಸರ್ಜನೆ ಮಾಡುವ ವೇಳೆ ರಾತ್ರಿ 11 ಗಂಟೆ ಆದರೂ ಜೋರಾಗಿ ಡಿಜೆ ಹಾಕಿ ನೃತ್ಯ ಮಾಡಲಾಗುತ್ತಿತ್ತು. ಈ ವೇಳೆ ಸಮಯ ರಾತ್ರಿ 11 ಗಂಟೆ ಆಗಿದೆ, ಜೋರಾಗಿ ಡಿಜೆ ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹಾಗಾಗಿ ಡಿಜೆ ಆಫ್ ಮಾಡಿ ಎಂದು ಪೊಲೀಸರು ಬುದ್ದಿಮಾತು ಹೇಳಿದ್ದಾರೆ. 

ಇದನ್ನೂ ಓದಿ- ಶಾಸಕ ಜಮೀರ್ ಅಹ್ಮದ್ ಖಾನ್ ಸಿಎಂ ಆಗಲಿ ಎಂದು ಆಶೀರ್ವದಿಸಿದ ಸಂತ ಪೀಟರ್ ಪೌಲ್ ಚರ್ಚ್ ಫಾದರ್

ಪೊಲೀಸರ ಮಾತಿಗೆ ಕುಪಿತಗೊಂಡ ಕೆಲ ಕಿಡಿಗೇಡಿಗಳು ಅವರ ಮೇಲೆ ಕಲ್ಲು ತೂರಿ ದುಷ್ಕೃತ್ಯ ಮೆರೆದಿದ್ದಾರೆ. ಮಹೇಂದ್ರ, ನಾಗೇಶ, ಮಹೇಶ್, ಮುರುಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. 
 
ಇದನ್ನೂ ಓದಿ- ವಿಮ್ಸ್ ದುರಂತ : ನೈತಿಕಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಲಿ

ಘಟನೆಯಲ್ಲಿ ಪಿಎಸ್ಐ  ಮಹಾದೇವ್ ಎಂಬುವವರಿಗೆ ತಲೆಯ ಭಾಗದಲ್ಲಿ ತೀವ್ರತರ ಗಾಯಗಳಾಗಿದ್ದರೇ ಎಎಸ್ಐ ಶಿವಶಂಕರ್, ಚಾಲಕ ಬಸವರಾಜು ಎಂಬವವರ ಕೈ-ಕಾಲುಗಳಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಎಎಸ್ಐ ಶಿವಶಂಕರ್ ದೂರು ಕೊಟ್ಟಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News