ವಿಜಯನಗರ ಜಿಲ್ಲೆ ಕೂಡ್ಲಿಗಿ: ಎಸ್ಡಿ ಎಮ್ಸಿ ಅಧ್ಯಕ್ಷ ಅಂಗಡಿ ಗಣೇಶಪ್ಪ ಹಾಗೂ ಎಸ್ಡಿ ಎಮ್ಸಿ ಸದಸ್ಯ ಹಾಗೂ ಪತ್ರಕರ್ತ ಎಲೆ ನಾಗರಾಜ ನೇತೃತ್ವದಲ್ಲಿ, ವಿದ್ಯಾರ್ಥಿಗಳ ಪೋಷಕರು ಜಿಲ್ಲಾಡಳಿತಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.  


COMMERCIAL BREAK
SCROLL TO CONTINUE READING

ಶಾಲಾ ಅವಧಿ ಪ್ರತಿನಿತ್ಯ ಬೆಳಿಗ್ಗೆ 9ಗಂಟೆಗೆ ಹಾಗೂ 9:30ಕ್ಕೆ, ಮತ್ತು ಸಂಜೆ 4:30 ಹಾಗೂ 5ಗಂಟೆಗೆ ಬಸ್ ಸಂಪರ್ಕ ಒದಗಿಸಬೇಕಿದೆ. ಪ್ರತಿ ಶನಿವಾರದಂದು ಬೆಳಿಗ್ಗೆ ಶಾಲೆ ಪ್ರಾರಂಭವಾಗೋ ಸಮಯಕ್ಕೆ, ಹಾಗೂ  ಮಧ್ಯಾಹ್ನ ಶಾಲೆ ಬಿಡುವ ವೇಳೆ ವಿದ್ಯಾರ್ಥಿಗಳಿಗೆ ಬಸ್ ಸಂಪರ್ಕ ಕಲ್ಪಿಸಬೇಕಿದೆ.


ಪ್ರತಿ ದಿನ ಬಸ್ ಗಾಗಿ ತಾಸುಗಟ್ಟಲೆ ಕಾಯಬೇಕಿದೆ ಬಸ್ ಬರದಿದ್ದಲ್ಲಿ ವಿದ್ಯಾರ್ಥಿಗಳು ಎರೆಡು ಮೂರು ಕಿಲೊ ಮೀಟರ್ ದೂರದ  ಕೂಡ್ಲಿಗಿ ಪಟ್ಟಣಕ್ಕೆ ನಡೆದುಕೊಂಡು ಹೋಗಬೇಕಿದೆ. ಶಾಲೆಯ ಜಾಗದ ಮಾಲೀಕತ್ವದ ವ್ಯಾಜ್ಯ  ಜಿಲ್ಲಾಧಿಕಾರಿಗಳ ಬಳಿ ಇದ್ದು, ಶೀಘ್ರ ವ್ಯಾಜ್ಯಾ ಇತ್ಯರ್ಥಗೊಳಿಸಿ ಶಾಲೆಯ ಹೆಸರಿನಲ್ಲಿ ಮಾಲೀಕತ್ವ ದಾಖಲು ನೀಡುವಂತೆ, ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.


ಶುದ್ಧ ಕುಡಿಯೋ ನೀರಿನ ಘಟಕ ಅಗತ್ಯ ಇದ್ದು, ಸಂಬಂಧಿಸಿದ ಇಲಾಖೆ ಶೀಘ್ರವೇ ಶುದ್ಧ ಕುಡಿಯೋ ನೀರಿನ ಘಟಕ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಖಾಯಂ ಆಂಗ್ಲ ಬಾಷಾ ಶಿಕ್ಷಕರು ಅತ್ಯಗತ್ಯವಿದೆ. ಸಧ್ಯ ಅತಿಥಿ ಶಿಕ್ಷಕರಿದ್ದು ಪ್ರತಿ ವರ್ಷದ ಶಾಲೆಗೆ ಶೈಕಣಿಕ ವರ್ಷದ ಪ್ರಾರಂಭದ ಅವಧಿಯಲ್ಲಿ ಇಲಾಖೆಯಿಂದ ಅತಿಥಿ ಶಿಕ್ಷಕರನ್ನು ತೀರಾ ತಡವಾಗಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ.


ಇದನ್ನೂ ಓದಿ-ಮಂಡ್ಯದಲ್ಲಿ ಅಚ್ಚರಿಯ ಹೇಳಿಕೆ ಕೊಟ್ಟ ಶಿವಯೋಗೇಶ್ವರ ಸ್ವಾಮೀಜಿ


ತರಗತಿಗಳು ನಡೆಸಲು ಅಗತ್ಯ ಸಮಯವಕಾಶ ಇಲ್ಲದಂತಾಗಿ ಶೆೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. 2024ರ ಶೈಕ್ಷಣ ವರ್ಷದೊಳಗೆ ಖಾಯಂ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಬೇಕಿದ್ದು, ಇದು ಮಕ್ಕಳ ಭವಿಷ್ಯ ಹಾಗೂ ಶಾಲೆಯ ಉತ್ತಮ ಫಲಿತಾಂಶಕ್ಕೆ ಪೂರಕವಾಗಲಿದೆ. ಕಾರಣ ಸಂಬಂಧಿಸಿದಂತೆ ಇಲಾಖೆ.


ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಜರುಗಿಸಬೇಕಿದೆ ಎಂದು ಎಸ್ಡಿ ಎಮ್ಸಿ ಪದಾಧಿಕಾರಿಗಳು ಕೋರಿದ್ದಾರೆ. ಶಾಲೆಗೆ ಕಾಂಪೌಂಡ್ ಇಲ್ಲ ಹಾಗೂ ಸಮ ತಟ್ಟಾದ ಮೈದಾನವಿಲ್ಲ, ಅಮರ ದೇವರ ಗುಡ್ಡ ಗ್ರಾಮ ಕೂಡ್ಲಿಗಿ ಮಾರ್ಗದ ಪ್ರಮುಖ ರಸ್ಥೆಗೆ, ತೀರ ಹತ್ತಿರ ದಲ್ಲಿ ಶಾಲೆ ಇದ್ದು.. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ, ಮೊದಲು ಸುಸಜ್ಜಿತ ಕಾಂಪೌಂಡ್ ನಿರ್ಮಿಸಬೇಕಿದೆ. ಜಾಗದ ಸಮಸ್ಯೆ ಜಿಲ್ಲಾಧಿಕಾರಿಗಳ ಬಳಿ ನೆನೆಗುದಿಗೆ ಇದ್ದು, ತುರ್ತಾಗಿ ತಾತ್ಕಾಲಿಕ ಬೇಲಿ ರೂಪದ ಕಾಂಪೌಂಡ್ ಶೀಘ್ರವೇ ನಿರ್ಮಿಸಲು ಅಗತ್ಯ ಕ್ರಮ ಜರುಗಿಸಬೇಕಿದೆ. 


ಶಾಲೆ ಬಿಟ್ಟ ಸಂದರ್ಭದಲ್ಲಿ ಮನೆಗೆ ತೆರಳಲು, ಶಾಲಾ ಮಕ್ಕಳು ಬಸ್ ಗಾಗಿ ರಸ್ಥೆಯ ಬದಿಯಲ್ಲಿ ಕಾದು ಕುಳಿತಿರುತ್ತಾರೆ, ಅದಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕಿದೆ. ಶಾಲೆಯ ಸುತ್ತ ನೈರ್ಮಲ್ಯತೆ ಕಾಣೆಯಾಗಿದ್ದು, ಸಂಬಂಧಿಸಿದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನೈರ್ಮಲ್ಯತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕಿದೆ.  


ಇದನ್ನೂ ಓದಿ-“ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ”


ರಸ್ಥೆಯು ಶಾಲಾ ಅವರಣಕ್ಕೆ ಹೊಂದಿಕೊಂಡಂತೆ ಇದ್ದು, ವೇಗ ವಾಗಿ ಸಂಚರಿಸುವ ವಾಹನಗಳು  ನಿಯಂತ್ರಣ ತಪ್ಪಿದರೆ ಶಾಲಾವರಣವನ್ನು ಪ್ರವೇಶಿಸಲಿವೆ. ಇದು ಅಸುರಕ್ಷತಾ ವಲಯವಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿ, ಕಾರಣ ತುರ್ತಾಗಿ ಶಾಲಾವರಣದ ಅಂಗಳ ಮುಂದಿನ ರಸ್ತೆಯ ಅಂಚಿನಲ್ಲಿ ತಡೆಗೋಡೆ ಅಥವಾ ತಾತ್ಕಾಲಿಕ ಕಾಂಪೌಂಡ್ ನಿರ್ಮಿಸಬೇಕಿದೆ. 


ಶಾಲೆಯ ಕೂಗಳತೆ ದೂರದಲ್ಲಿಯೇ ರಸ್ಥೆಯ ಮಧ್ಯಭಾಗದಲ್ಲಿ, ಎರೆಡೂ ಕಡೆಗಳಲ್ಲಿ, ವಾಹನಗಳ ಅತಿ ವೇಗ ನಿಯಂತ್ರಣಕ್ಕಾಗಿ ಬ್ರೇಕರ್ ಅಥವಾ ರಸ್ತೆ ದಿಬ್ಬಗಳನ್ನು ತುರ್ತಾಗಿ ನಿರ್ಮಿಸಬೇಕಿದೆ. ಶಾಲೆಗೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಶೀಘ್ರವೇ ಒದಗಿಸಬೇಕೆಂದು, ವಿದ್ಯಾರ್ಥಿಗಳ ಪೋಷಕರು ಈ ಮೂಲಕ ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಿಸಿದ ಇಲಾಖೆಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ಡಿ ಎಮ್ಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಮತ್ತು ಶಾಲೆಯ ಕೆಲ ವಿದ್ಯಾರ್ಥಿಗಳ ಪೋಷಕರು ಇದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ