ಬೆಂಗಳೂರು: ಪಿಎಸ್ಐ ನೇಮಕಾತಿ‌ ಅಕ್ರಮ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ‌‌ ಪೊಲೀಸರು‌ ಪರೀಕ್ಷೆ ಬರೆದಿದ್ದ ಆಭ್ಯರ್ಥಿಗಳ ವಿಚಾರಣೆ ತೀವ್ರಗೊಳಿಸಿದೆ. ಜೊತೆಗೆ‌‌ ಪೊಲೀಸ್ ನೇಮಕಾತಿ ವಿಭಾಗ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ‌ ಮೇಲ್ವಿಚಾರಕ ಹಾಗೂ‌ ಸೂಪರ್ ವೈಸರ್ ಗಳನ್ನು ವಿಚಾರಣೆ‌ ನಡೆಸಲು ಸಿದ್ಧತೆ‌‌ ನಡೆಸಿದೆ.


COMMERCIAL BREAK
SCROLL TO CONTINUE READING

ಪಿಎಸ್ಐ ನೇಮಕಾತಿ ಅಕ್ರಮ ಜಾಲ ಬೆಳಕಿಗೆ ಬರುತ್ತಿದ್ದಂತೆ‌ ಕಲಬುರಗಿಯಲ್ಲಿ ಸಿಐಡಿಯ ಒಂದು ತಂಡ ಕೆಲವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ.‌ ಮತ್ತೊಂದೆಡೆ  ಬೆಂಗಳೂರಿನ ಸಿಐಡಿ‌‌ ಪ್ರಧಾನ ಕಚೇರಿಯಲ್ಲಿ ಏ.25 ರಿಂದಲೂ ಪ್ರತಿದಿನ 50 ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆ ನಡೆಸುತ್ತಿದೆ.


ಇದನ್ನೂ ಓದಿ- ಡಿ.ಕೆ.ಶಿವಕುಮಾರ್ ಅವರೇ ಪಿಎಸ್ಐ ನೇಮಕಾತಿ ಹಗರಣದ ಆರೋಪಿ: ಬಿಜೆಪಿ ಆರೋಪ


ಪೊಲೀಸ್ ನೇಮಕಾತಿ ವಿಭಾಗಕ್ಕೂ ಎಂಟ್ರಿ ಕೊಟ್ಟ ಸಿಐಡಿ ಟೀಂ:
ಪಿಎಸ್ಐ  ಆಯ್ಕೆಯಾದ ಅಭ್ಯರ್ಥಿಗಳ ವಿಚಾರಣೆ ಬಳಿಕ ಪೊಲೀಸ್‌ ನೇಮಕಾತಿ ವಿಭಾಗಕ್ಕೂ ಸಂಕಷ್ಟ ಎದುರಾಗಿದೆ‌.‌ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾದ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಸೂಪರ್ ವೈಸರ್ ಗಳು ಹಾಗೂ ಭದ್ರತೆ‌‌ ಉಸ್ತುವಾರಿವಹಿಸಿಕೊಂಡಿದ್ದ ಎಸಿಪಿಗಳಿಗೂ ವಿಚಾರಣೆ ಬಿಸಿ ತಟ್ಟಲಿದೆ. ಇದುವರೆಗೂ 40ಕ್ಕೂ ಪರೀಕ್ಷಾ ಕೇಂದ್ರಗಳನ್ನ ತನಿಖಾ ತಂಡ ಹಿಟ್ ಲಿಸ್ಟ್ ನಲ್ಲಿಟುಕೊಂಡಿದೆ.  ಇದಲ್ಲದೆ,  ಮೇಲ್ವಿಚಾರಕರಾಗಿ ನಿಯೋಜನೆಗೊಂಡು ಕಾರಣಾಂತರಗಳಿಂದ ಬದಲಾವಣೆಯಾದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದೆ. ಪರೀಕ್ಷಾ ಕೇಂದ್ರದ ಆಯಾ ಕಾಲೇಜಿನ ಉಪನ್ಯಾಸಕರೇ ಮೇಲ್ವಿಚಾರಕರಾಗಿದ್ದು, ಒಂದು ಕೇಂದ್ರಕ್ಕೆ ಎಸಿಪಿ ಸೇರಿ 25 ಮಂದಿ ನಿಯೋಜನೆಯಾಗಿದ್ದರು. ಹೀಗಾಗಿ ಅಭ್ಯರ್ಥಿಗಳು ಕೊಡುವ ಹೇಳಿಕೆ ಮೇಲೆ ಹೆಚ್ಚು ಅವ್ಯವಹಾರ ನಡೆದಿರುವ ಕೇಂದ್ರಗಳ ಪಟ್ಟಿ ರೆಡಿಯಾಗಿದೆ  ಎನ್ನಲಾಗಿದೆ. ಮೇ 1ರಿಂದ ನೋಟೀಸ್ ಕೊಟ್ಟು ಸಿಐಡಿ ಕಚೇರಿಯಲ್ಲೇ ವಿಚಾರಣೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ‌ ಎಂದು ತಿಳಿದುಬಂದಿದೆ.


ಇದನ್ನೂ ಓದಿ- ಸಿಐಡಿ ನೋಟಿಸ್ ಕೊಟ್ರು ಪ್ರಿಯಾಂಕ್ ಖರ್ಗೆ ಡೋಂಟ್ ಕೇರ್: ವಿಚಾರಣೆಗೆ ಗೈರಾದ ಮಾಜಿ ಸಚಿವ


ಅವ್ಯವಹಾರ ಪರೀಕ್ಷಾ ಕೇಂದ್ರಗಳಲ್ಲಿ ಸೂಪರ್ ವೈಸರ್ ಹಾಗೂ ಮೇಲ್ವಿಚಾರಕರಿಗೆ ಆಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಕೊಟ್ಟು ಉತ್ತರ ಪತ್ರಿಕೆ ತೆಗೆದುಕೊಂಡು ಹೋಗುವವರೆಗೂ ಜವಾಬ್ದಾರಿ ಇರಲಿದೆ. ಪರೀಕ್ಷೆ ಮುಗಿದ ಬಳಿಕ ಎಲ್ಲಾ ಕೊಠಡಿಗಳ ಸಿಸಿಟಿವಿ ಕಡ್ಡಾಯ ಪರಿಶೀಲನೆ ಆಗಬೇಕಿದೆ. ಈ ವೇಳೆ‌‌ ಏನೇ ಅಡೆತಡೆಗಳಿದ್ದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಭದ್ರತೆ‌‌ ಉಸ್ತುವಾರಿ ವಹಿಸಿಕೊಳ್ಳುವ ಎಸಿಪಿಗೂ ಇದರ ಜವಾಬ್ದಾರಿ ಇರಲಿದೆ. ಇದೇ ಕೆಲ ಸೂಪರ್ ವೈಸರ್ ಗಳಿಗೂ ಮುಳುವಾಗುವ ಸಾಧ್ಯತೆಯಿದ್ದು,ಸಿಐಡಿ ಇನ್ನೂ ಯಾರಿಗೆಲ್ಲ ಖೆಡ್ಡಾ ತೋಡಿದೆ ಎಂಬುದನ್ನು ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.