ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಪಿಎಸ್‍ಐ ಅಕ್ರಮ ನೇಮಕಾತಿ ಹಗರಣದ ಆರೋಪಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪಿಎಸ್‌ಐ ನೇಮಕ ಹಗರಣದ ಶಂಕಿತರ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಈ ಹಗರಣದ ಆರೋಪಿ, ಶಂಕಿತರು ಹಾಗೂ ಫಲಾನುಭವಿಗಳೆಲ್ಲರೂ ಕಾಂಗ್ರೆಸಿಗರು. ಹೀಗಾಗಿ ಕಾಂಗ್ರೆಸ್ ಸಾಥ್ ನೀಡಲೇಬೇಕಲ್ಲವೇ?’ ಎಂದು ವ್ಯಂಗ್ಯವಾಡಿದೆ.
ಪಿಎಸ್ಐ ನೇಮಕ ಹಗರಣದ ಶಂಕಿತರ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಭ್ರಷ್ಟಾಧ್ಯಕ್ಷ @DKShivakumar ಅವರೇ ಈ ಹಗರಣದ ಆರೋಪಿ, ಶಂಕಿತರು ಹಾಗೂ ಫಲಾನುಭವಿಗಳೆಲ್ಲರೂ ಕಾಂಗ್ರೆಸಿಗರು. ಹೀಗಾಗಿ ಕಾಂಗ್ರೆಸ್ ಸಾಥ್ ನೀಡಲೇಬೇಕಲ್ಲವೇ?#CONgressPSIToolkit
— BJP Karnataka (@BJP4Karnataka) April 25, 2022
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ
ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ನಾವು ತಲೆತಗ್ಗಿಸುವಂತಾಗಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಇದಕ್ಕಾಗಿಯೇ ಕಾಂಗ್ರೆಸ್ಸಿಗರನ್ನು ತಾನು ಕಳ್ಳ ಪರರ ನಂಬ ಶ್ರೇಣಿಗೆ ಸೇರಿಸಿರುವುದು. ಪರಮ ಭ್ರಷ್ಟಾಚಾರಿಯೊಬ್ಬ ಶುದ್ಧಾಚಾರದ ಮಾತಾಡುವುದು ಚೋದ್ಯವಲ್ಲದೆ ಮತ್ತೇನು?’ ಎಂದು ಕುಟುಕಿದೆ.
ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ.
ಇದಕ್ಕಾಗಿಯೇ ಕಾಂಗ್ರೆಸ್ಸಿಗರನ್ನು ತಾನು ಕಳ್ಳ ಪರರ ನಂಬ ಶ್ರೇಣಿಗೆ ಸೇರಿಸಿರುವುದು.
ಪರಮ ಭ್ರಷ್ಟಾಚಾರಿಯೊಬ್ಬ ಶುದ್ಧಾಚಾರದ ಮಾತಾಡುವುದು ಚೋದ್ಯವಲ್ಲದೆ ಮತ್ತೇನು?#CONgressPSIToolkit pic.twitter.com/H87MJcWIXO
— BJP Karnataka (@BJP4Karnataka) April 25, 2022
ಇದನ್ನೂ ಓದಿ: "ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ"
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ಪೊಲೀಸರು ನೋಟಿಸ್ ನೀಡಿರುವುದನ್ನು ಪ್ರಶ್ನಿಸಿದ್ದ ಡಿಕೆಶಿ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಡಿಕೆಶಿಯವರೇ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನೀಡುವ ನೋಟಿಸ್‌ಗೆ ಹಲವು ಆಯಾಮಗಳಿರುತ್ತವೆ. ಎಲ್ಲವನ್ನೂ ನಿಮ್ಮ ನೆಲೆಯಲ್ಲಿ ಸ್ವೀಕರಿಸಿ ಭೀತಿಗೆ ಒಳಗಾಗಬೇಡಿ. ಹಗರಣಕ್ಕೆ ಸಂಬಂಧಪಟ್ಟಂತೆ ಇರುವ ಮಾಹಿತಿ ನೀಡಿ ಎಂದು ನೋಟಿಸ್ ನೀಡುವುದು ದಂಡಪ್ರಕ್ರಿಯಾ ಸಂಹಿತೆಯ ಭಾಗ ಅಷ್ಟೇ’ ಎಂದು ಟ್ವೀಟ್ ಮಾಡಿದೆ.
ಮಾನ್ಯ @DKShivakumar ಅವರೇ,
ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನೀಡುವ ನೋಟಿಸ್‌ಗೆ ಹಲವು ಆಯಾಮಗಳಿರುತ್ತವೆ.
ಎಲ್ಲವನ್ನೂ ನಿಮ್ಮ ನೆಲೆಯಲ್ಲಿ ಸ್ವೀಕರಿಸಿ ಭೀತಿಗೆ ಒಳಗಾಗಬೇಡಿ.
ಹಗರಣಕ್ಕೆ ಸಂಬಂಧಪಟ್ಟಂತೆ ಇರುವ ಮಾಹಿತಿ ನೀಡಿ ಎಂದು ನೋಟಿಸ್ ನೀಡುವುದು ದಂಡಪ್ರಕ್ರಿಯಾ ಸಂಹಿತೆಯ ಭಾಗ ಅಷ್ಟೇ.#CONgressPSIToolkit pic.twitter.com/F4secOLmkc
— BJP Karnataka (@BJP4Karnataka) April 25, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.