ಅಪ್ಪು ಬ್ಯಾನರ್ ಕಿತ್ತೆಸೆದ ಕಿಡಿಗೇಡಿಗಳು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೆಲ ದಿನಗಳ ಹಿಂದೆಯಷ್ಟೇ ಪವರ್ ಸ್ಟಾರ್ ಅಪ್ಪು ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ನಾವು ಈಗಾಗಲೇ ತಿರುಪತಿಯಲ್ಲಿ ನೋಡಿದ್ದೆವು.
ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಪವರ್ ಸ್ಟಾರ್ ಅಪ್ಪು ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ನಾವು ಈಗಾಗಲೇ ತಿರುಪತಿಯಲ್ಲಿ ನೋಡಿದ್ದೆವು.ತಿರುಪತಿಯ ದ್ವಾರದ ಬಳಿ ಸೆಕ್ಯೂರಿಟಿಗಳಿಂದ ಅಪ್ಪು ಚಿತ್ರಕ್ಕೆ ಅಪಮಾನ ಮಾಡಿದ್ದಲ್ಲದೆ ಕಾರ್ ಮೇಲಿದ್ದ ಚಿತ್ರವನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ಮಾಡಿದ್ದರು.ಇದರಿಂದ ರೊಚ್ಚಿಗೆದ್ದ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಈ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಅಪ್ಪು ಇರುವ ಬ್ಯಾನರ್ ಗೆ ಕೆಲ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ.ಚಿಕ್ಕಪೇಟೆಯ ವರಲಕ್ಷ್ಮಿ ಸಿಲ್ಕ್ ಸ್ಯಾರಿಸ್ ಮಳಿಗೆ ಬಳಿ ಹಾಕಲಾಗಿದ್ದ ಅಪ್ಪು ಬ್ಯಾನರ್ ನ್ನ ಕಿತ್ತೆಸೆಯಲಾಗಿದೆ.ನಾಲ್ಕೈದು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು,ಈಗ ಅಪಾರ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಬ್ಯಾನರ್ ಕಿತ್ತೆಸುವುದಲ್ಲದೆ ಕಾಲಲ್ಲಿ ತುಳಿದಿದ್ದು ಇನ್ನಷ್ಟು ಕಿಡಿಗೇಡಿತನ ಮೆರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ ಸಾಧ್ಯತೆ
ಬ್ಯಾನರ್ ಕಿತ್ತೆಸೆಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಸುಮಾರು 15 ಅಡಿ ಎತ್ತರ 10ಅಡಿ ಅಗಲವಿರುವ ಪುನೀತ್ ರಾಜ್ಕುಮಾರ್ ಬ್ಯಾನರ್ ನ್ನು ನಾಲ್ಕೈದು ಕಿಡಿಗೇಡಿಗಳು ಕಿತ್ತೆಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಅಪ್ಪು ಹುಟ್ಟುಹಬ್ಬಕ್ಕಾಗಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ಅಪ್ಪು ನಗುತ್ತಿರುವ ಚಿತ್ರ ಅಪಾರ ಅಭಿಮಾನಿಗಳನ್ನ ಸೆಳೆಯುವಂತಿತ್ತು.ಹೀಗಿದ್ದರು ಲೆಕ್ಕಿಸದ ಕೆಲ ಯುವಕರ ಗ್ಯಾಂಗ್ ಬ್ಯಾನರ್ ನ್ನ ಕಿತ್ತೆಸೆಯುವುದರಲ್ಲಿ ಮಗ್ನರಾಗಿದ್ದಾರೆ. ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು: ಗೃಹ ಇಲಾಖೆ ಜೊತೆ ಸಭೆ ನಡೆಸಿದ ಶಿಕ್ಷಣ ಸಚಿವರು
ಕಿಡಿಗೇಡಿಗಳಿಗೆ ಕಾನೂನು ರೀತಿ ಶಿಕ್ಷೆಗೆ ಆಗ್ರಹ
ಅಪ್ಪುವಿಗೆ ಅಪಮಾನ ಮಾಡಿರುವ ಯುವಕರಿಗೆ ಕೂಡಲೇ ಕಾನೂನು ರೀತಿ ಶಿಕ್ಷೆ ಆಗಲೇಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆ ಆಗ್ರಹಿಸಿದೆ.ಅಲ್ಲದೇ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಪುನೀತ್ ಗೆ ಅಪಮಾನ ಮಾಡಿದವರನ್ನ ಬಂಧಿಸುವಂತೆ ಮನವಿ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ