ಕನ್ನಡ ಚಲನಚಿತ್ರವನ್ನು ಮತ್ತೊಂದು ಲೆವಲ್‌ಗೆ ತೆಗೆದುಕೊಂಡ ಹೋದ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಈಗಾಗಲೇ ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ರಿಲೀಸ್ ಆದ ಆರು ದಿನಕ್ಕೆ 600 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಬರಿ ಅಭಿಮಾನಿಗಳವರೆಗೆ ಮಾತ್ರ ಸೀಮಿತವಾಗಿರದೆ, ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಚಿತ್ರರಂಗದ ನಟ, ನಟಿಯರು ರಾಕಿ ಭಾಯ್ ಬಗ್ಗೆ ಕೊಂಡಾಡುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಈ ಚಿತ್ರ ಕಮಾಲ್ ಮಾಡುತ್ತಿದೆ. ಇದೀಗ ಪ್ರಶಾಂತ್ ನೀಲ್ ಅವರ ವಿಚಾರ ಸಖತ್ ವೈರಲ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಒಂದು ಸಿನಿಮಾ ಮಾಡಬೇಕಿತ್ತು. ಇದನ್ನು ಪ್ರಶಾಂತ್ ನೀಲ್ ಸಹ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಬಿದ್ದು ಎದ್ದು ಗೆದ್ದ ಕಿರೀಟಿ! ಬಳ್ಳಾರಿ ಕುವರ ಇಂಟ್ರೂಡಕ್ಷನ್ ಟೀಸರ್ ಹಿಂದಿನ ಪರಿಶ್ರಮ ಅನಾವರಣ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ವಿಜಯ್ ಕಿರಗಂದೂರು ಪುನೀತ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವಿಜಯ್ ಅವರು ಸಿನಿಮಾ ನಿರ್ಮಾಣ ಆರಂಭಿಸಿದ್ದು ಪುನೀತ್ ನಟನೆಯ ನಿನ್ನಿಂದಲೇ ಚಿತ್ರದಿಂದ ಎಂಬುದು ವಿಶೇಷ. ಇದಾದ ಬಳಿಕ, ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳಿಗೆ ವಿಜಯ್ ನಿರ್ಮಾಪಕರಾದರು. ಪ್ರಶಾಂತ್ ನೀಲ್ ಮತ್ತು ವಿಜಯ್ ನಡುವೆ ಕೂಡ ಒಳ್ಳೆಯ ಸ್ನೇಹವಿದೆ. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳಲ್ಲಿ ವಿಜಯ್ ಹಾಗೂ ಪ್ರಶಾಂತ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇದೀಗ ಅಚ್ಚರಿಯ ವಿಷಯವೆಂದರೆ ಕೆಜಿಎಫ್‌ಗೂ ಮೊದಲೇ ನಿರ್ದೇಶಕ ಪ್ರಶಾಂತ್ ನೀಲ್ ಪುನೀತ್ ಜತೆ ಕೆಲಸ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲೇ ಇಲ್ಲ.
ಯಶ್‌ಗಾಗಿ ಪ್ರಶಾಂತ್ ನೀಲ್ ಕೆಜಿಎಫ್ ಮಾಡುವುದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಮಾಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಪುನೀತ್ ರಾಜ್‌ಕುಮಾರ್ ಅವರ ಜೊತೆ ಕೌಟುಂಬಿಕ ಕಥಾಹಂದರವಿರುವ ಸಿನಿಮಾ ಮಾಡಲು ಪ್ರಸ್ತಾವ ಇಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.
ಹೌದು, "ಪುನೀತ್ ಜತೆ ನೀವು ಸಿನಿಮಾ ಮಾಡಬೇಕಿತ್ತು ಎನ್ನುವ ವಿಚಾರ ನಿಜವೇ" ಎಂದು ಅನುಶ್ರೀ ಪ್ರಶಾಂತ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, "ಮೊದಲ ನಿರ್ದೇಶನದ ಸಿನಿಮಾ ಉಗ್ರಂ ಅಷ್ಟಾಗಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಉಗ್ರಂ ಆದ್ಮೇಲೆ ನಾನು ಪುನೀತ್ ಜತೆಗೆ ಒಂದು ಕಥೆ ಚರ್ಚೆ ಮಾಡಿದ್ದೆ. ಆ ಸಿನಿಮಾಗೆ ‘ಆಹ್ವಾನ’ ಎನ್ನುವ ಶೀರ್ಷಿಕೆ ಕೂಡ ಇಟ್ಟಿದೆ." ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ನಟಿ ಕಾಜಲ್ ಅಗರ್‌ವಾಲ್ ಮಗುವಿನ ಹೆಸರು ಬಹಿರಂಗ!
"ಇದೊಂದು ಕೌಟುಂಬಿಕ ಕಥಾ ವಸ್ತುವನ್ನು ಒಳಗೊಂಡಿತ್ತು. ಉಗ್ರಂ ಸಿನಿಮಾ ಹಿಟ್ ಜನರಿಗೆ ತಲುಪದೆ ಇರಲು ಫ್ಯಾಮಿಲಿ ಎಲಿಮೆಂಟ್ ಇರಲಿಲ್ಲ ಅನ್ನೋದು ನನ್ನ ನಂಬಿಕೆ. ಈ ಕಾರಣಕ್ಕೆ ನಾನು ಫ್ಯಾಮಿಲಿ ಎಲಿಮೆಂಟ್ ಇರುವ ಕಥೆ ಆಯ್ಕೆ ಮಾಡಿಕೊಂಡಿದ್ದೆ. ಸಿನಿಮಾ ಮಾಡಲು ಪುನೀತ್ ಅವರ ಜೊತೆ ಮಾತುಕತೆ ನಡೆಸಿದ್ದೆವು. ಅವರಿಗೂ ಕಥೆ ಮತ್ತು ಸಿನಿಮಾ ಟೈಟಲ್ ಇಷ್ಟವಾಗಿತ್ತು. ಆ ಸಂದರ್ಭದಲ್ಲಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು" ಎಂದಿದ್ದಾರೆ.
"ಆ ಬಳಿಕ 4 ತಿಂಗಳು ಪುನೀತ್ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರು. ಆ ನಡುವೆ ಕೆಜಿಎಫ್ ಶುರುವಾಯಿತು. ಆದ ಕಾರಣ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.