ರಫೇಲ್ ವಿವಾದ: ಕೇಶ ಮುಂಡನೆ ಮಾಡಿಸಿಕೊಂಡು ನಿರ್ಮಲಾ ಸೀತಾರಾಮನ್ ಮನೆ ಎದುರು ಪ್ರತಿಭಟನೆ
ರಫೇಲ್ ಯುದ್ದ ವಿಮಾನ ಖರೀಧಿ ಹಗರಣದ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ನಿರ್ಮಲಾ ಸೀತಾರಾಮನ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ನವದೆಹಲಿ: ರಫೇಲ್ ಯುದ್ದ ವಿಮಾನ ಖರೀಧಿ ಹಗರಣದ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ನಿರ್ಮಲಾ ಸೀತಾರಾಮನ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕದ ಯೂತ್ ಕಾಂಗ್ರೆಸ್ ಮೂಲಕ ನಡೆದ ಪ್ರತಿಭಟನೆಯಲ್ಲಿ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದವನ್ನು ಬಹಿರಂಗ ಪಡಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್ ಭಾಗವಹಿಸಿ ಮಾತಾನಾಡುತ್ತಾ "ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ'.ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಅವರು ಹೆಚ್ ಎಎಲ್ ಬದಲಿಗೆ ರಿಲಾಯನ್ಸ್ ಸಂಸ್ಥೆಗೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ಈಗ ಕೂಡಲೇ ಪ್ರಧಾನಿ ಮತ್ತು ರಕ್ಷಣಾ ಸಚಿವರು ಒಪ್ಪಂದದ ಬಗ್ಗೆ ಮಾಹಿತಿ ಬಹಿರಂಗಗೊಳಿಸಬೇಕು ಇಲ್ಲದಿದ್ದರೆ ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ ಉಗ್ರ ಪ್ರತಿಭಟನೆಯ ಎನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.