ಬಿಸಿಬಿಸಿ ರಾಗಿಮುದ್ದೆ-ನಾಟಿ ಕೋಳಿ ಸಾರಿನ ಘಮ ಘಮ..ಮುದ್ದೆ ತಿನ್ನುವ ಸ್ಪರ್ಧೆ..!
ಸಂಡೇ ಅಂದ್ರೆ ಜನರಿಗೆ ಏನ್ ನೆನಪಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದ್ರೆ ನಾನ್ವೆಜ್ ಪ್ರಿಯರಿಗೆ ಮಾಂಸದೂಟವಿದ್ರೆ ಮಾತ್ರ ಅದು ಸಂಡೇ ಅನಿಸೋದು. ಅದ್ರಲ್ಲೂ ಸಿಲಿಕಾನ್ ಸಿಟಿ ಮಂದಿಗೆ ಫಸ್ಟ್ ಫುಡ್ ಗಳ ಮಧ್ಯೆ ಇಲ್ಲೊಂದು ಕಡೆ ಹಳ್ಳಿಯ ಸೊಗಡನ್ನ ನೆನಪಿಸುವಂತಹ ನಾಟಿ ಕೋಳಿಯ ಸಾರಿನೊಂದಿಗೆ ಮುದ್ದೆ ತಿನ್ನೋ ಕಾಂಪಿಟೇಷನ್ ಏರ್ಪಡಿಸಲಾಗಿತ್ತು. ಅಲ್ಲಿದ್ದವ್ರಿಗೆಲ್ಲ ನಾನ್ವೆಜ್ ತಿನ್ನೋದಕ್ಕಿಂತ ಗೆಲ್ಲಲೇ ಬೇಕು ಅಂತ ನಾಮುಂದು ತಾಮುಂದು ಎಂದು ಮುದ್ದೆಗಳನ್ನ ತಿಂದ್ರು.
Banglore : ಹೌದು ಹೀಗೆ ನಾಟಿ ಕೋಳಿಯ ಸಾರಿನೊಂದಿಗೆ ಮುದ್ದೆಗಳನ್ನ ನಾಮುಂದು ತಾಮುಂದು ಎಂದು ತಿನ್ನುತ್ತಿರುವ ಈ ದೃಶ್ಯ ಕಂಡು ಬಂದಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ.. ಮಂಥನ ಹೋಟೆಲ್ ಹಾಗೂ ಸರ್ಜಾಪುರದ ಯುವಕರು ಸೇರಿ ಆಯೋಜನೆ ಮಾಡಿದ್ದ ನಾಟಿ ಕೋಳಿ ಸಾರಿನ ಜೊತೆಗೆ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಕುಣಿಗಲ್, ಮಂಡ್ಯ, ಮಾಲೂರು ಸೇರಿದಂತೆ ಬೆಂಗಳೂರಿಮ ಹಲವೆಡೆಗಳಿಂದ ಸ್ಪರ್ಧಾಳುಗಳು ಭಾಗಿಯಾಗಿದ್ದರು.
ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ನಾಟಿ ಕೋಳಿ ಕೊಡುವುದಾಗಿ ಆಯೋಜಕರು ತಿಳಿಸಿದ್ದರು. 200 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದು, 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ರು. ಸ್ಪರ್ಧೆಗೆ ಕುಳಿತವ್ರಿಗೆ ಆರಂಭದಲ್ಲಿ ತಲಾ ಅರ್ಧ ಕೆಜಿ ತೂಕದ 2 ಮುದ್ದೆಗಳನ್ನ ನೀಡಲಾಗಿತ್ತು. ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಗಿತ್ತು.
ಇದನ್ನೂ ಓದಿ-'ತಾಲೂಕಿಗೊಂದು ಟ್ರೀ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ': ಅಧಿಕಾರಿಗಳಿಗೆ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ
ಸ್ಪರ್ಧೆಗೆ 30 ನಿಮಿಷದವರೆಗೂ ಟೈಂ ನಿಗಧಿಪಡಿಸಿದ್ದು, ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ವಿಜೇತರು ಎಂದು ಘೋಷಿಸಿದ್ದರು. ಕೆಲವರು ಮೂರೇ ಮುದ್ದೆಗೆ ಸಾಕಯ್ತು ಅಂದ್ರೆ ಇನ್ನೂ ಕೆಲವರು ಆರೇಳು ಮುದ್ದೆ ತಿಂದು ಸುಮ್ನನಾದ್ರು. ಆದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಹರೀಶ್ ಅನ್ನೋರು ಮಾತ್ರ ಬರೋಬ್ಬರಿ 13 ಮುದ್ದೆ ಬಾರಿಸಿ ಮೊದಲನೇ ಬಹುಮಾನವಾಗಿದ್ದ ಕುರಿಯನ್ನ ಪಡೆದ್ರು..
ಇನ್ನೂ ಎರಡನೇ ಬಹುಮಾನವನ್ನ ಶ್ರೀನಿವಾಸ್ ಎಂಬುವವರು ಹಾಗೂ ಮೂರನೇ ಬಹುಮಾನವನ್ನ ಆನಂದ್ ಎಂಬುವವರು ಪಡೆದುಕೊಂಡರು. ಇನ್ನೂ ಸ್ಪರ್ಧೆ ನೋಡಲೆಂದು ಸರ್ಜಾಪುರದ ಸುತ್ತಮುತ್ತಲ ಕಡೆಗಳಿಂದ ಸಾಕಷ್ಟು ಜನ ಸೇರಿದ್ದರು. ನಾಟಿ ಕೋಳಿ ಜೊತೆಗೆ ಮುದ್ದೆಗಳನ್ನ ಬ್ಯಾಟಿಂಗ್ ಮಾಡುತ್ತಿದ್ದ ಸ್ಫರ್ಧಾಳುಗಳಿಗೆ ಕೇಕೆ ಹಾಕಿ ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಭಾಗಿಯಾದವ್ರು ಮಾತ್ರ ನಾವು ಗೆಲ್ತೀವೋ ಬಿಡ್ತೀವೋ ಒಟ್ಟಿನಲ್ಲಿ ಕೊಟ್ಟ ಇನ್ನೂರು ರೂಪಾಯಿ ಎಂಟ್ರಿ ಫೀಜ್ ಮೋಸ ಆಗಬಾರ್ದು ಅಂತ ಸರಿಯಾಗಿ ಬ್ಯಾಟಿಂಗ್ ಮಾಡಿದ್ರು..
ಒಟ್ಟಿನಲ್ಲಿ ಇತ್ತೀಚೆಗೆ ನಮ್ಮ ದೇಶೀಯ ಅಹಾರ ಪದ್ಧತಿ ಮರೆಯಾಗುತ್ತಿದ್ದು, ಫಾಸ್ಟ್ ಫುಡ್ ನತ್ತ ಜನರು ಮೊರೆ ಹೋಗ್ತಿದ್ದಾರೆ. ಹೀಗಾಗಿ ನಮ್ಮ ಹಳ್ಳಿ ಸೊಗಡಿನ ಆರೋಗ್ಯಕರವಾದ ರಾಗಿ ಮುದ್ದೆಯ ರುಚಿಯನ್ನ ಸಿಲಿಕಾನ್ ಸಿಟಿ ಮಂದಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜನೆ ಮಾಡಿದ್ದ ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನೋ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಭಾಗಿಯಾಗಿ ಭರ್ಜರಿ ಬ್ಯಾಟಿಂಗ್ ಮಾಡಿ ನಾಟಿ ಸ್ಟೈಲ್ ರುಚಿ ಸವಿದಿದ್ದಾರೆ..
ಇದನ್ನೂ ಓದಿ-ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಹೋರಾಟ : ಬಸವರಾಜ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.