ಬೆಂಗಳೂರು : ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 150 ಸ್ಥಾನ ಗೆಲ್ಲಲೇ ಬೇಕು, ಒಂದು ಸ್ಥಾನವೂ ಕಡಿಮೆ ಆಗಬಾರದು ಎಂದು 2023ರ ಚುನಾವಣೆಗೆ ರಾಜ್ಯ ಕೈ ನಾಯಕರಿಗೆ ಟಾರ್ಗೆಟ್ ನೀಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಎಲ್ಲಾ ನಾಯಕರು ಇದಕ್ಕೆ ಒಟ್ಟಿಗೆ ಕೆಲಸ ಮಾಡಬೇಕು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೆಪಿಸಿಸಿ (KPCC) ಕಚೇರಿಯ ರಾಜೀವ್ ಭವನದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ (Rahul Gandhi), ಪಕ್ಷಕ್ಕೆ ಕೆಲಸ  ಮಾಡುತ್ತಿರುವರಿಗೆ ಆದ್ಯತೆ ನೀಡಬೇಕು. ನಾವು ಕಡಿಮೆ ಅಂತರದಿಂದ ಗೆಲ್ಲುವ ಗುರಿ ಇರಬಾರದು. ಈ ಬಗ್ಗೆ ನಮಗೆ ಸ್ಪಷ್ಟತೆ ಇರಲಿ ಎಂದು ಹೇಳಿದ್ದಾರೆ. ನಾವು ೧೫೦ ಸೀಟ್ ಗೆಲ್ಲಲೇ ಬೇಕು, ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ ಇದು ಕಷ್ಟ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು, ನಾವು ನಾಯಕರನ್ನ ಇಷ್ಟ ಕಷ್ಟದ ಆಧಾರ ಮೇಲೆ ಮಣೆ ಹಾಕುವುದಿಲ್ಲ. ಯಾರು ಕೆಲಸ ಮಾಡ್ತಾ ಇದಾರೆ ಅನ್ನೋ ಆಧಾರದ ಮೇಲೆ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Mid-day Meal: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ : ಮುಖ್ಯ ಮಂತ್ರಿ


೨೦ ವರ್ಷದ ಹಿಂದೆ ಏನು ಮಾಡಿದ್ದಾರೆ ಅನ್ನುವುದು ನಡಿಯುವುದಿಲ್ಲ. ಇಂದು ಏನು ಮಾಡ್ತಾ ಇದ್ದಾರೆ ಅನ್ನುವುದು ಮುಖ್ಯ. ಪಕ್ಷಕ್ಕೆ ನಿಷ್ಠೆ ಇದೆಯಾ? ಕೆಲಸ ಮಾಡ್ತಾ ಇದ್ದಾರಾ ಅನ್ನೋದನ್ನ ಆಧರಿಸಿ ಪಕ್ಷ ಅವರ ರಕ್ಷಣೆ ಮಾಡುತ್ತೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. 


ಇದನ್ನೂ ಓದಿ : ನಾನು ಹಿಂದೂ ಅಲ್ಲ- ಯಾರಾದ್ರು ಕೇಸ್‌ ಹಾಕಿದ್ರೆ ನನ್ನ ಪರವಾಗಿ ನ್ಯಾಯಮೂರ್ತಿ ಇದ್ದಾರೆ- ಕುಂ.ವೀರಭದ್ರಪ್ಪ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.