Karnataka Flag Contyroversy 'ಕರ್ನಾಟಕ ಧ್ವಜ'ದ ಮೇಲೆ ರಾಹುಲ್ ಗಾಂಧಿ ಅವರ ಫೋಟೋ ಇರುವುದು ಇದೀಗ ಹೊಸ ವಿವಾದವನ್ನು ಹುಟ್ಟುಹಾಕಿದೆ. ಕರ್ನಾಟಕದಲ್ಲಿ 'ಭಾರತ್ ಜೋಡೋ ಯಾತ್ರೆ'ಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿಯವರನ್ನು ಹಲವಾರು ಕನ್ನಡ ಪರ ಸಂಘಟನೆಗಳು ಗುರಿಯಾಗಿಸಿವೆ. 'ಕರ್ನಾಟಕ ಧ್ವಜ'ದಲ್ಲಿ ರಾಹುಲ್ ಗಾಂಧಿ ಚಿತ್ರವನ್ನು ಬಳಸದಂತೆ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿವೆ. ಅನೌಪಚಾರಿಕವಾಗಿ ನಾಡ ಬಾವುಟ ಎಂದು ಹೇಳಲಾಗುವ ಧ್ವಜದಲ್ಲಿ ಒಂದು ಕೆಂಪು ಮತ್ತು ಹಳದಿ ಬಣ್ಣದ ಪಟ್ಟಿಗಳಿವೆ. ಇದು ಕನ್ನಡ ಮತ್ತು ಕರ್ನಾಟಕ ಎರಡನ್ನೂ ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಭಾನುವಾರ ಮೈಸೂರಿನಲ್ಲಿ ನಡೆದ ಪಕ್ಷದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ‘ಕರ್ನಾಟಕ ಧ್ವಜ’ಗಳನ್ನು ಹಾರಿಸಲಾಗಿದೆ. ಈ ಬಾವುಟಗಳ ಮೇಲೆ ರಾಹುಲ್ ಗಾಂಧಿಯವರ ಚಿತ್ರಗಳನ್ನು ಮುದ್ರಿಸಲಾಗಿತ್ತು. ಧ್ವಜದ ಮೇಲೆ ರಾಹುಲ್ ಗಾಂಧಿ ಚಿತ್ರವನ್ನು ಮುದ್ರಿಸಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಕರ್ನಾಟಕ ನವನಿರ್ಮಾಣ ಸೇನೆಯಂತಹ ಕನ್ನಡ ಪರ ಸಂಘಟನೆಗಳು ಕರ್ನಾಟಕ ಧ್ವಜವನ್ನು ಇಂತಹ ರಾಜಕೀಯ ಕಾರಣಕ್ಕಾಗಿ ಬಳಸಬಾರದು ಎಂದು ಒತ್ತಾಯಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಕ್ಷಮೆಯಾಚಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.


ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ರುವ ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ, "ಕನ್ನಡ ಧ್ವಜದ ಮೇಲಿನ ಫೋಟೋವನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕರ್ನಾಟಕದ ಧ್ವಜವನ್ನು ಬದಲಾಯಿಸಿದ್ದರು, ಆ ಸಮಯದಲ್ಲಿ ಎಲ್ಲಾ ಕನ್ನಡಿಗರು ಪ್ರತಿಭಟಿಸಿದ್ದರು, ನಂತರ ತಮ್ಮ ನಿರ್ಣಯವನ್ನು ಬದಲಾಯಿಸಿದ್ದರು. ಇದೀಗ, ರಾಹುಲ್ ಧ್ವಜದ ಮೇಲೆ ಗಾಂಧಿಯವರ ಚಿತ್ರ ಬಳಸಿರುವುದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ.


ಇದನ್ನೂ ಓದಿ-Sonia Gandhi : ಭಾರತ್‌ ಜೋಡೋ ಯಾತ್ರೆಗೆ ಕೈ ಅಧಿನಾಯಕಿ ಬಲ : ಇಂದು ರಾಜ್ಯಕ್ಕೆ ಸೋನಿಯಾ ಭೇಟಿ

ಈ ಸಂಪೂರ್ಣ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿಕ್ರಿಯೆ ಕೂಡ ಬಂದಿದ್ದು, ಮಾಧ್ಯಮಗಳ ವರದಿ ಆಧರಿಸಿ, "ನಾವು ಕ್ಷಮೆಯಾಚಿಸುವುದಿಲ್ಲ. ಇದು ನಮ್ಮ ಮೂಲ ಕರ್ತವ್ಯ, ಕನ್ನಡ ಧ್ವಜ ಯಾರ ಸ್ವತ್ತಲ್ಲ, ರಾಷ್ಟ್ರಧ್ವಜದ ಮೇಲೆ ನಾವು ನಮ್ಮ ನಾಯಕರ ಚಿತ್ರ ಹಾಕುತ್ತೇವೆ, ಹೀಗಾಗಿ ಕನ್ನಡ ಧ್ವಜದ ಮೇಲೂ ಕೂಡ ನಾವು ನಮ್ಮ ನಾಯಕರ ಚಿತ್ರ ಹಾಕುತ್ತೇವೆ. ಅದಕ್ಕಾಗಿ ನಾವು ಕ್ಷಮೆ ಕೇಳಲು ಬಯಸುವುದಿಲ್ಲ" ಎಂದಿದ್ದಾರೆ.


ಇದನ್ನೂ ಓದಿ-Watch: ಸುರಿಯುವ ಸೋನೆಯಲ್ಲಿಯೂ ಭಾಷಣ ನಿಲ್ಲಿಸದ ರಾಹುಲ್..!
 
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೈಸೂರು ನಗರವನ್ನು ತಲುಪಿದೆ. ಕರ್ನಾಟಕದಲ್ಲಿ ಪಕ್ಷದ "ಭಾರತ್ ಜೋಡೋ ಯಾತ್ರೆ"ಯ ಮೂರನೇ ದಿನವಾದ ಸೋಮವಾರ ಇಲ್ಲಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಹುಲ್ ದೇವಸ್ಥಾನಕ್ಕೆ ಹೋದಾಗ ಅವರ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಅವರೊಂದಿಗಿದ್ದರು. ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನದ ಕುಲದೇವತೆ ಮತ್ತು ಹಲವು ಶತಮಾನಗಳಿಂದ ಮೈಸೂರಿನ ಅಧಿದೇವತೆಯಾಗಿದ್ದಾಳೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.