ಬೆಳಗಾವಿ : ಕುಂದಾನಗರಿ ಬೆಳಗಾವಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ನಾಳೆ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು   ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿಯಾ ಸುರ್ಜೇವಾಲಾ, ಯುವ ಕ್ರಾಂತಿ ರ್‍ಯಾಲಿ ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ‌. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸರ್ಕಾರ ಯುವ ಸಮುದಾಯದ ಭವಿಷ್ಯವನ್ನ ಕತ್ತಲಲ್ಲಿ ದೂಡಿದೆ. ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ಯುವಕರ ಭವಿಷ್ಯದ ಮೇಲೆ ಗ್ರಹಣ ಹಿಡಿಯುವಂತಾಗಿದೆ. ಯುವ ಕ್ರಾಂತಿ ರ್‍ಯಾಲಿಯಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೊಸ ಅಜೆಂಡಾ ಸೆಟ್ ಮಾಡಲಿದೆ. ಇನ್ನೆರಡು ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಯುವಕರಿಗೆ ಎನೂ ಕೊಡಲಿದೆ ಅನ್ನೋದರ ಬಗ್ಗೆ ಹೇಳುತ್ತೇವೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇನಿ ಅಂದ್ರೂ. ಈ ವರೆಗೂ ಯುವಕರಿಗೆ ಉದ್ಯೋಗ ಕೊಡಲು ಮೋದಿ ಸರ್ಕಾರಕ್ಕೆ ಆಗಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೋದಿಯವರ ರೀತಿ ಸುಳ್ಳು ಹೇಳುವುದನ್ನ ಕಲೆತಿದ್ದಾರೆ. ಪೋಕ್ಸ್ ವೆಗನ್ ಕಂಪನಿ, ವೋಲಾ ಕಾರ್ಖಾನೆಗಳು ತೆಲಂಗಾಣಕ್ಕೆ ಶಿಪ್ಟ್ ಆಗಿವೆ. ರಾಜ್ಯಕ್ಕೆ ದೊಡ್ಡ ದೊಡ್ಡ ಕಾರ್ಖಾನೆಗಳನ್ನ ತರುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಇದನ್ನೂ ಓದಿ : ರಿಸ್ಕ್ ಬೇಡ..! ಕೋಲಾರ ಅಥವಾ ವರುಣ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದಾ?


ಇನ್ನು ಮುಂದುವರೆದು ಮಾತನಾಡಿದ ಅವರು, ಯುವಕರ ಹೊಸ ಭವಿಷ್ಯ ರೂಪಿಸಲು ಯುವ ಕ್ರಾಂತಿ ಸಮಾವೇಶ ನಡೆಯುತ್ತಿದೆ. ನಾಳೆ ಬೆಳಗಾವಿಯಲ್ಲಿ ಯುವ ಕ್ರಾಂತಿ ಸಮಾವೇಶ ಹಿನ್ನೆಲೆ, ಇಂದು ರಾಹುಲ್ ಗಾಂಧಿ ಮನೆಗೆ ಪೊಲೀಸರನ್ನ ಕಳ್ಸಿದ್ದಾರೆ. ಇದೊಂದು ಒಂದು ಷಡ್ಯಂತ್ರ, ಕರ್ನಾಟಕ ಯುವ ಜನರ ಬಗ್ಗೆ ಮಾತಾಡದಂತೆ, ಅದಾನಿ ಬಗ್ಗೆ ಹೇಳದಂತೆ ತಡೆಯುವ ಕೆಲಸ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಸತ್ಯದ ಪಾರ್ಟಿಯ ಪ್ರತಿಬಿಂಬ ಇದ್ದಹಾಗೇ. ಯುವ ಕ್ರಾಂತಿ ರ್ಯಾಲಿಯನ್ನ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.


ಇದನ್ನೂ ಓದಿ : ಅಡಿಕೆ ಸಹಾಯ ಧನ ವಿಸ್ತರಣೆಗೆ ಕ್ರಮ : ಸಿಎಂ ಬೊಮ್ಮಾಯಿ ಹೇಳಿಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.