ರಿಸ್ಕ್ ಬೇಡ..! ಕೋಲಾರ ಅಥವಾ ವರುಣ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದಾ?

ಕೋಲಾರ ವಿಧಾನಸಭಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಗೊಂದಲ ಹಿನ್ನಲೆಯಲ್ಲಿ ನಿನ್ನೆಯಿಂದ ಸತತ ಸಭೆಗಳನ್ನ ನಡೆಸಿ ಕೋಲಾರ ಹಾಗೂ ವರುಣ ಎರಡು ಕ್ಷೇತ್ರಗಳಿಂದ ಸ್ಪರ್ದಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

Written by - Prashobh Devanahalli | Last Updated : Mar 19, 2023, 03:32 PM IST
  • ಕೋಲಾರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರ
  • ಮುಜುಗರ ಬೇಡ ; ಪಲಾಯನ ರಾಜಕಾರಣ ಹಣೆಪಟ್ಟಿ ತಪ್ಪಿಸೋಣ
  • ರಿಸ್ಕ್ ಬೇಡ! ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಚಿಂತನೆ
ರಿಸ್ಕ್ ಬೇಡ..! ಕೋಲಾರ ಅಥವಾ ವರುಣ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದಾ? title=

ಬೆಂಗಳೂರು : ಕೋಲಾರ ವಿಧಾನಸಭಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಗೊಂದಲ ಹಿನ್ನಲೆಯಲ್ಲಿ ನಿನ್ನೆಯಿಂದ ಸತತ ಸಭೆಗಳನ್ನ ನಡೆಸಿ ಕೋಲಾರ ಹಾಗೂ ವರುಣ ಎರಡು ಕ್ಷೇತ್ರಗಳಿಂದ ಸ್ಪರ್ದಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

ಮುಜುಗರ ಬೇಡ ; ಪಲಾಯನ ರಾಜಕಾರಣ ಹಣೆಪಟ್ಟಿ ತಪ್ಪಿಸೋಣ

ವಿರೋಧ ಪಕ್ಷಗಳು ಸಿದ್ದರಾಮಯ್ಯ ಅವರು ಸೋಲಿನ ಆತಂಕದಿಂದ ಕೋಲಾರದಿಂದ ದೂರ ಉಳಿಯುತ್ತಾರೆ ಎಂದು ರಾಜಕೀಯ ಲಾಭ ಪಡೆಯುತ್ತಿದ್ದಾರೆ.ಸಿದ್ದರಾಮಯ್ಯ ಪಲಾಯನ ರಾಜಕಾರಣ ಮಾಡುತ್ತಾರೆ ಎಂಬ ಹಣೆಪಟ್ಟಿ ಹೊರೆಸಲು ತಯಾರಿ ನಡೆಸುತ್ತೋದ್ದು, ಪ್ರತಿತಂತ್ರವಾಗಿ ಕೋಲಾರ ಹಾಗೂ ವರುಣ ಎರಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಆಪ್ತ ವಲಯ ಸಲಹೆ ನೀಡಿದೆ.

ಇದನ್ನೂ ಓದಿ : ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದಿದ್ರೆ ಕ್ಷೇತ್ರಕ್ಕಾಗಿ ಅಲೆದಾಡುತ್ತಿರಲಿಲ್ಲ-ಮುರುಗೇಶ್‌ ನಿರಾಣಿ ಟೀಕೆ

ರಿಸ್ಕ್ ಬೇಡ! ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಚಿಂತನೆ:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಲ ತಿಂಗಳ ಹಿಂದೆ ಕೋಲಾರ ಸಮಾವೇಶದಲ್ಲಿ ಅಲ್ಲಿಂದಲೇ ಸ್ಪರ್ಧೆ ಮಾಡಲು ಘೋಷಣೆ ಮಾಡಿದ್ದು ಈಗ ಮತ್ತೆ ಹಿಂದೆ ಸರಿಯಬಾರದು. ಹೀಗಾಗಿ ಅಲ್ಲಿಂದ ಸ್ಪರ್ಧೆ ಮಾಡಬೇಕು, ಇದರ ಜೊತೆ ವರುಣ ಕ್ಷೇತ್ರದಲ್ಲಿ ಗೆಲ್ಲುವ ವಾತಾವರಣ ಹೆಚ್ಚಿದೆ. ಈ ಕಾರಣದಿಂದ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ, ಒಂದು ಕ್ಷೇತ್ರದಲ್ಲಾದರೂ ಗೆಲ್ಲಬಹುದು ಎಂಬ ಲೆಕ್ಕಾಚಾರ ಇವರ ಮುಂದಿದೆ.

 

ಕೋಲಾರದಲ್ಲಿ ಈಗಾಗಲೇ ವಾರ್ ರೂಮ್ ಸ್ಥಾಪನೆ ಮಾಡಿರುವ ಸಿದ್ದರಾಮಯ್ಯ, ಇದರ ಜೊತೆಗೆ ಸಂಘಟನೆ ಜವಾಬ್ದಾರಿಯನ್ನ ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಜವಾಬ್ದಾರಿ ವಹಿಸುತ್ತಿದ್ದಾರೆ. ಇದನ್ನು ಮುಂದುವರೆಸಿ, ವರುಣ ಕ್ಷೇತ್ರದಿಂದ ಕೂಡ ಸ್ಪರ್ಧೆ ಮಾಡಿದ್ದಲ್ಲಿ, ಚಾಮುಂಡೇಶ್ವರಿ ಸೋಲಿನ ಅನುಕಂಪ ವರುಣದಲ್ಲಿ ವರ್ಕೌಟ್ ಆಗಲಿದೆ, ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ಪರಿಗಣಿಸಿದ್ದಾರೆ.

ಒಟ್ಟಿನಲ್ಲಿ ಸುನಿಲ್ ಕನಗೋಲ್ ವರದಿಯಲ್ಲಿ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲುವ ವಾತಾವರಣ ಇದ್ದರೂ, ರಾಜಕೀಯ ಅಸ್ತಿತ್ವ ಪ್ರದರ್ಶಿಸಲು ಸಿದ್ದರಾಮಯ್ಯ ವರುಣ ಹಾಗೂ ಕೋಲಾರದಿಂದ ಸ್ಪರ್ಧೆ ಮಾಡಬಹುದು. ಒಂದು ಕ್ಷೇತ್ರದಲ್ಲಿ ಸೋತರೂ ಮತ್ತೊಂದು ಕ್ಷೇತ್ರದಲ್ಲಿ ಗೆಲ್ಲಬಹುದು, ಎಂಬ ಲೆಕ್ಕಾಚಾರ ಇಷ್ಟರ ಮಟ್ಟಿಗೆ ಕೈ ಹಿಡಿಯಲಿದೆ ಎಂದು ಮತದಾನ ಪ್ರಭು ತಿಳಿಸಲಿದ್ದಾರೆ.

ಇದನ್ನೂ ಓದಿ : ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News