Karnataka Rain Effect: ಏಷ್ಯಾದ ನಂಬರ್ ಒನ್ ಕೊಬ್ಬರಿ ಮಾರುಕಟ್ಟೆ ಹಾಗೂ ಕೋಟ್ಯಾಂತರ ವಹಿವಾಟು ನಡೆಸುವ ಕಲ್ಪತರು ನಾಡು ಸೋಮವಾರ ಸಂಜೆ ಸುರಿದ ಕೆಲವೇ ಗಂಟೆಗಳ ಮಳೆಯ ಅಬ್ಬರಕ್ಕೆ ಅಕ್ಷರಕ್ಷಃ ಪತರುಗುಟ್ಟಿದೆ. ಮಳೆಯ ರಗಳೆ ತಂದೊಡ್ಡಿದ್ದ ಅವಾಂತರ ಒಂದಲ್ಲ ಎರಡಲ್ಲ.. ಹೇಗಿತ್ತು ಮುಂಗಾರು ಮಳೆಯ ಆರ್ಭಟ ಅಂತಿರಾ.. ಇಲ್ಲಿದೆ ಮಾಹಿತಿ... 


COMMERCIAL BREAK
SCROLL TO CONTINUE READING

ಕಲ್ಪತರು ನಾಡಿನಲ್ಲಿ ಮಳೆಯ ಅಬ್ಬರದಿಂದಾಗಿ ರೈಲ್ವೆ ಭೂಕುಸಿತ ಕಂಡು ಬಂದಿದ್ದು ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿತ್ತು. ನೂತನ  ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದರೆ, ಮಳೆಯಲ್ಲಿ ಕೊಚ್ಚಿ ಹೋಗಿರೋ.. ವಾಹನಗಳು, ಮನೆಯ ಒಳಗೆ  ನುಗ್ಗಿರೋ ನೀರು ಜನರನ್ನು ಪರದಾಡುವಂತೆ ಮಾಡಿತು. ಜನ ನೀರು ಹೊರ ಹಾಕಲು ಹರಸಾಹಸ ಪಟ್ಟರು. ಮಳೆರಾಯ ರೌದ್ರಾವತಾರಕ್ಕೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕೇಂದ್ರದಲ್ಲಿ.  ಸಂಜೆ ವೇಳೆ ಜನರ ಜೀವನವೇ ಅಸ್ತವ್ಯಸ್ತವನ್ನಾಗಿಸಿ ಬಿಟ್ಟಿದೆ.


ಇದನ್ನೂ ಓದಿ- ಬೈಪಾರ್‌ಜೋಯ್ ಚಂಡಮಾರುತ ಎಫೆಕ್ಟ್: ಜೂ. 13 ರಿಂದ ಜೂ. 15ರ ನಡುವೆ ಸುಮಾರು 95 ರೈಲುಗಳು ರದ್ದು


ಇನ್ನೂ ಮಳೆರಾಯ ಎಲ್ಲೆಲ್ಲಾ ಸಂಕಷ್ಟ ತಂದೊಡಿದ್ದಾನೆ ಅನ್ನೋದರ ಚಿತ್ರಣವನ್ನು ನೋಡೋದಾದರೆ.. 
ರೇಲ್ವೆ ಹಳಿ ಬಳಿ ಭೂ ಕುಸಿತ:-

ತಿಪಟೂರಿನ ಗಾಂಧಿ ನಗರದ ಬಳಿಯ ಅಂಡರ್ ಪಾಸ್ ಬಳಿ ಲಘು ಭೂಕುಸಿತವೇ ಆಗಿದೆ. ಇದಕ್ಕೆ ಕಾರಣ ಅಂಡರ್ ಪಾಸ್ ನಲ್ಲಿ ತುಂಬಿದ 10 ಅಡಿಗೂ ಹೆಚ್ಚಿನ ಆಳಕ್ಕೆ ಮಳೆ ನೀರು ತುಂಬಿರೋದು. ಜೆಸಿಬಿಯಿಂದ ಕಾರ್ಯಾಚರಣೆಗೆ ರೇಲ್ವೆ ಇಲಾಖೆ ಮುಂದಾಗಿತ್ತು. ಪರಿಣಾಮ ನಿಜಾಮುದ್ದಿನ್ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲು ಸಂಚಾರವನ್ನೇ ತಾತ್ಕಾಲಿಕ ಸ್ಥಗಿತಗೊಳಿಸಿದೆ. 


ಈಜುಕೊಳದಂತಾದ ಕೆ‌ಎಸ್‌ಆರ್‌ಟಿ‌ಸಿ ಬಸ್ ನಿಲ್ದಾಣ:-
ನಗರದ ಹೃದಯ ಭಾಗದ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಕೆಲವೇ ತಿಂಗಳ ಹಿಂದೆ ಉದ್ಘಾಟನೆ ಗೊಂಡಿತ್ತು. ನವೀಕರಣ ಬಳಿಕ ಎಲ್ಲರ ಗಮನ ಸೆಳೆದಿತ್ತು. ಅಲ್ಲೂ ಕೂಡ ಮಳೆರಾಯ ತುಂಬಿ ಹರಿದ ಪರಿಣಾಮ ಯುಜಿಡಿ ನೀರು, ಚರಂಡಿ ನೀರು ಮಿಶ್ರಣವಾಗಿ ಈಜುಕೊಳದಂತಾಗಿತ್ತು. ಇಷ್ಟೇ ಅಲ್ಲ ಗುಬ್ಬು ವಾಸನೆಯಿಂದ ಸಾರ್ವಜನಿಕರು, ಪ್ರಯಾಣಿಕರು ಯಮಯಾತನೆ ಅನುಭವಿಸುವಂತಾಗಿತ್ತು. ಬಸ್ ನಿಲ್ದಾಣ ದ್ವೀಪದಂತಾಗಿತ್ತು.


ಇದನ್ನೂ ಓದಿ- Rain Alert: ಮಿತಿ ದಾಟಿದ ಸೈಕ್ಲೋನ್ ತೀವ್ರತೆ! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ-ಹೈ ಅಲರ್ಟ್ ಘೋಷಣೆ


ಮನೆಗಳಿಗೆ ನುಗ್ಗಿದ ನೀರು:- 
ಮುಂಗಾರು ಮಳೆಯ ಅವಾಂತರ ಇಷ್ಟಕ್ಕೇ ಮುಗಿದಿಲ್ಲ. ತಿಪಟೂರಿನ ಗಾಂಧಿನಗರದ ಬಹುತೇಕ ಮನೆಗಳಿಗೆ ಮಳೆ ನೀರಿನ ಆಗಮನವಾಗಿತ್ತು. ಮಳೆ ಬಂದ ಸಂತಸ ಒಂದುಕಡೆ ಆದರೆ ಮಳೆಯ ನೀರೆಲ್ಲಾ ಮನೆಗಳಿಗೆ ನುಗ್ಗಿ ದವಸ, ಧಾನ್ಯಗಳು ನೀರಿನಲ್ಲಿ ತೇಲಿ ಹೋಗಿದ್ದವು. ಮನೆಗೆ ಬಂದ ಮಳೆ ನೀರಿನ ಅತಿಥಿಯನ್ನು ಮನೆಯಿಂದ ಹೊರ ಹಾಕಲು ಕುಟುಂಬ ಸದಸ್ಯರು ಬೆವರು ಹರಿಸಬೇಕಾಯಿತು. 


ಈಗಷ್ಟೇ ಮುಂಗಾರ ಮಳೆ ಆರಂಭವಾಗಿದೆ ಮುಂದಿನ ದಿನಗಲ್ಲಿ ತುಮಕೂರು ಜಿಲ್ಲೆಯಾದ್ಯಂತ ಇನ್ನೆಷ್ಟು ಅವಾಂತರ ಸೃಷ್ಠಿಸುತ್ತೋ.. ಗೊತ್ತಿಲ್ಲ ಯಾವುದಕ್ಕೂ ಜನ ಎಚ್ಚರವಾಗಿರಬೇಕಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ