ರಾಜ್ಯದಲ್ಲಿ ರಂಗೇರಿದ ಅಸೆಂಬ್ಲಿ ಎಲೆಕ್ಷನ್ ಕ್ಯಾಂಪೇನ್`ಗೆ ಅಡ್ಡಿಯಾಗ್ತಾನಾ ವರುಣ!
Rain Effect: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಚುನಾವಣಾ ರಂದು ಹೆಚ್ಚಾಗುತ್ತಿದ್ದು ಪ್ರಚಾರದ ಭರಾಟೆಯೂ ಜೋರಾಗಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಬೆಳಿಗ್ಗೆ, ಸಂಜೆ ಎಂದು ನೋಡದೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವರುಣನ ಅಬ್ಬರವೂ ಜೋರಾಗಿದ್ದು ಚುನಾವಣಾ ಪ್ರಚಾರದ ಭರಾಟೆಗೆ ವರುಣರಾಜ ಅಡ್ಡಿಪಡಿಸುವ ಲಕ್ಷಣಗಳು ಹೆಚ್ಚಾಗಿದೆ.
Karnataka Rain Effect: ರಾಜ್ಯದಲ್ಲಿ ಎಲ್ಲಿ ನೋಡಿದ್ರು ಚುನಾವಣೆ ಕಾವು ರಂಗೇರುತ್ತಿದೆ. ಇತ್ತ ಅಭ್ಯರ್ಥಿಗಳು ತಾ.. ಮುಂದು, ನಾ.. ಮುಂದು ಅಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಮಳೆಯಿಂದಾಗಿ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಒಂದರ್ಥದಲ್ಲಿ ಇನ್ನೊಂದು ವಾರವಷ್ಟೆ ಬಾಕಿ ಇರುವ ಚುನಾವಣಾ ಕಾವಿಗೆ ವರುಣ ತಣ್ಣಿರು ಎರಚುತ್ತಿದ್ದಾನೆ ಎಂತಲೇ ಹೇಳಲಾಗುತ್ತಿದೆ.
ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಚುನಾವಣಾ ರಂದು ಹೆಚ್ಚಾಗುತ್ತಿದ್ದು ಪ್ರಚಾರದ ಭರಾಟೆಯೂ ಜೋರಾಗಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಬೆಳಿಗ್ಗೆ, ಸಂಜೆ ಎಂದು ನೋಡದೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವರುಣನ ಅಬ್ಬರವೂ ಜೋರಾಗಿದ್ದು ಚುನಾವಣಾ ಪ್ರಚಾರದ ಭರಾಟೆಗೆ ವರುಣರಾಜ ಅಡ್ಡಿಪಡಿಸುವ ಲಕ್ಷಣಗಳು ಹೆಚ್ಚಾಗಿದೆ.
ವಾಸ್ತವವಾಗಿ, ತಮಿಳುನಾಡಿನಲ್ಲಿ ಟ್ರಫ್ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಐದು ದಿನಗಳ ಕಾಲ ಮನೆಯ ಆರ್ಭಟ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಾಳಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಅಲರ್ಟ್ ನೀಡಿರುವ ಐಎಮ್‌ಡಿ ಕೆಲವು ಭಾಗಗಳಲ್ಲಿ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ.
ಇದನ್ನೂ ಓದಿ- ಮನೆಯಿಂದ ಮತದಾನ ಮಾಡಿದ ಶತಾಯುಷಿ: ಫೋನ್ ಕಾಲ್ ಮೂಲಕ ಅಭಿನಂದನೆ ಸಲ್ಲಿಸಿದ ಮುಖ್ಯ ಚುನಾವಣಾ ಆಯುಕ್ತರು
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಬಹಿರಂಗ ಪ್ರಚಾರಕ್ಕೆ ಇನ್ನು ಆರು ದಿನಗಳಷ್ಟೇ ಬಾಕಿ ಇರುವುದರಿಂದ ಮಳೆಯಿಂದಾಗಿ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ಸದ್ಯ ರಾಜಕೀಯ ಹುರಿಯಾಳುಗಳಲ್ಲಿ ಮನೆಮಾಡಿದೆ. ವಾಸ್ತವವಾಗಿ, ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ವಾಸ್ತವವಾಗಿ, ಮಧ್ಯಾಹ್ನದ ವೇಳೆ ಪ್ರಚಾರಕ್ಕೆ ಒಂದೆಡೆ ಬಿಸಿಲು ಅಡ್ಡಿಯಾಗಿದ್ರೆ, ಮತ್ತೊಂದೆಡೆ ಮತದಾರರು ಕೆಲಸ ಕಾರ್ಯಗಳಿಗೆ ಹೋಗಿರ್ತರೆ. ಹಾಗಾಗಿ, ಅಭ್ಯರ್ಥಿಗಳು ಪ್ರಚಾರಕ್ಕೆ ಅಂತ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಒಂದು ಸುತ್ತಿನ ಪ್ರಚಾರ ಮಾಡಿ, ಮತ್ತೆ ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೆ ಪ್ರಚಾರಕ್ಕೆ ಸೀಮಿತಗೋಳಿಸಿದ್ದರು. ಆದರೀಗ ರಾತ್ರಿಯಿಡೀ ಸುರಿಯುವ ಮಳೆ ಬೆಳಗಿನ ಜಾವ 6, 7 ಗಂಟೆಯಾದರೂ ಜಿಟಿ ಜಿಟಿ ಎಂದು ಸುರಿಯುತ್ತಲೇ ಇದೆ. ಸಂಜೆ ಆಗ್ತಿದ್ದಂಗೆ ಮತ್ತೆ ಮಳೆಯ ಸಿಂಚನ ಆರಂಭವಾಗಲಿದೆ. ಇದರಿಂದಾಗಿ ಚುನಾವಣಾ ಪ್ರಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಕೆಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದಲ್ಲದೆ, ಕೆಲವು ಸ್ಟಾರ್ ಪ್ರಚಾರಕರನ್ನು ಕರೆಸಿ ತಮ್ಮ ಪರ ಭರ್ಜರಿ ಪ್ರಚಾರಕ್ಕೆ ವೇದಿಕೆ ಸಿದ್ದ ಮಾಡಿರೋ ರಾಷ್ಟ್ರೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೂ ಕೂಡ ವರುಣ ಕಂಟಕನಾಗಿದ್ದಾನೆ.
ದಕ್ಷಿಣ ಒಳನಾಡು ಪ್ರದೇಶದ 15 ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ 8 ಜಿಲ್ಲೆಗಳು ಸೇರಿದಂತೆ ರಾಜ್ಯದ ಒಟ್ಟು 23 ಜಿಲ್ಲೆಗಳ ವ್ಯಾಪ್ತಿಗೆ ಬರುವ ಕ್ಷೇತ್ರಗಳ ಮೇಲೆ ಮಳೆರಾಯ ತನ್ನ ಕೆಂಗಣ್ಣು ನೆಟ್ಟಿದ್ದಾನೆ. ಒಟ್ಟಾರೆಯಾಗಿ ಬಿಸಿಲಿನ ಬೇಗೆಯಿಂದಾಗಿ ಬೇಸತ್ತು, ಮುಂಜಾನೆ ಮತ್ತು ಸಂಜೆ ವೇಳೆ ಪ್ರಚಾರ ಮಾಡುತ್ತಿದ್ದ ಅಭ್ಯರ್ಥಿಗಳಿಗೆ ಈಗ ಮಳೆರಾಯನ ಕಾಟ ಶುರುವಾಗಿದ್ದು, ಪ್ರಚಾರ ಹೇಗೆ ಮಾಡಬೇಕು ಅನ್ನೋದೆ ದೊಡ್ಡ ತಲೆಬಿಸಿ ಆಗಿದೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.