ನವದೆಹಲಿ: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಿಗಧಿಯಾಗಿದ್ದಂತೆ ನವೆಂಬರ್ 3ರಂದು ಉಪ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ (Supream Court) ಹಸಿರು ನಿಶಾನೆ ತೋರಿದೆ ಹಾಗೂ ಈ‌ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ (Muniratna) ನಾಯ್ಡು ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಮುನಿರತ್ನ ನಾಯ್ಡುಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.


COMMERCIAL BREAK
SCROLL TO CONTINUE READING

2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಮುನಿರತ್ನ ನಾಯ್ಡು ಅಕ್ರಮವಾಗಿ ಗೆದ್ದಿದ್ದರು. ಮತದಾರರ ಗುರುತಿನ ಪತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು ಎಂಬ ಹಿನ್ನಲೆಯಲ್ಲಿ ಅವರ ಗೆಲುವನ್ನು ಅಸಿಂಧುಗೊಳಿಸಿ ಎರಡನೇ ಅತಿಹೆಚ್ಚು ಮತ ಪಡೆದ ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಪ್ರತಿಸ್ಪರ್ಧಿ ತುಳಸಿ ಮುನಿರಾಜುಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು.


ಮುನಿರತ್ನಗೆ ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುತ್ತಾ? ಎಲ್ಲವೂ ಸಸ್ಪೆನ್ಸ್!


ರಾಜ್ಯ ಹೈಕೋರ್ಟ್ ತುಳಸಿ ಮುನಿರಾಜುಗೌಡ ದೂರನ್ನು ವಜಾಗೊಳಿಸಿತ್ತು. ಬಳಿಕ ತುಳಸಿ ಮುನಿರಾಜುಗೌಡ ರಾಜ್ಯ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಕಳೆದವಾರ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.


ಇದಲ್ಲದೆ ಸ್ವತಃ ಮುನಿರತ್ನ ನಾಯ್ಡು ರಾಜೀನಾಮೆಯಿಂದ ತೆರವಾಗಿದ್ದ ರಾಜರಾಜೇಶ್ವರಿ ಕ್ಷೇತ್ರಕ್ಕೆ ಚುನಾವಣೆ ನಡೆಸುವಂತೆಯೂ ಸೂಚಿಸಿದೆ. ಇದರಿಂದ ಬಿಜೆಪಿ ಟಿಕೆಟ್ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಮುನಿರತ್ನ ನಾಯ್ಡುಗೆ ಈಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ಆನೆಬಲ ಬಂದಂತಾಗಿದೆ.