ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪದ ಬೆನ್ನಲ್ಲೇ ಡಿಕೆಶಿ ಬೆಳಗಾವಿಗೆ ತೆರಳಿದ್ದು ಅವರಿಗೆ ಪ್ರತಿಭಟನೆ ಬಿಸಿ ತಗುಲಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಕಲ್ಲೆಸೆತ, ಹೂವಿನ ಹಾರ ಎಲ್ಲವೂ ಕಾಮನ್ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ರಮೇಶ್ ಜಾರಕಿಹೊಳಿ(Ramesh Jarkiholi) ಅವರ ರಾಜಕೀಯ ಬೆಳವಣಿಗೆಯ ಏಳ್ಗೆಯನ್ನು ಸಹಿಸದೆ ಡಿಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರನ್ನು ಸಿಡಿ ಪ್ರಕರಣದಲ್ಲಿ ಸಿಲುಕಿಸಿ ರಾಜಕೀಯ ದ್ವೇಷ ಮೆರಿದಿದ್ದಾರೆ ಎಂದು ಆಗ್ರಹಿಸಿ ಜಾರಕಿಹೊಳಿ ಬೆಂಬಲಿಗರಿಂದ ಭಾನುವಾರ ಗೋಕಾಕ್, ಬೆಳಗಾವಿ ಸೇರಿದಂತೆ ಹಲವಡೆ ಬೃಹತ್ ಪ್ರತಿಭಟನೆ ನಡೆಯಿತು.


Lawyer KN Jagadish: 'ನಾಳೆ ಸಿ.ಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರು'‌


ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರು, ಕೆಲವೆಡೆ ಮೊಟ್ಟೆ ಎಸೆಯುತ್ತಾರೆ, ಇನ್ನು ಕೆಲವೆಡೆ ಹೂವು, ಸೇಬಿನ ಹಾರ ಹಾಕುತ್ತಿರುತ್ತಾರೆ. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಕಲ್ಲೆಸೆತ, ಹೂವಿನ ಹಾರ ಎಲ್ಲವೂ ಕಾಮನ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರ ಕುರಿತಾಗಿ ಹೇಳಿದ್ದಾರೆ.


KPCC Leader: ರಮೇಶ್ ಜಾರಕಿಹೊಳಿ ಬಳಿ ಸಿಎಂ ಯಡಿಯೂರಪ್ಪ ಸೀಡಿ'


ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಬರುವಾಗ ಏನಾಯಿತು? ಹೇಗಾಯಿತು ನನಗೆ ಗೊತ್ತಿಲ್ಲ. ನಾನು ಎಲ್ಲವನ್ನೂ ಕ್ರೀಡಾಮನೋಭಾವದಿಂದ ತೆಗೆದುಕೊಳ್ಳುತ್ತೇನೆ. ಕೆಲವೆಡೆ ಮೊಟ್ಟೆ ಎಸೆಯುತ್ತಿದ್ದರು. ಇನ್ನು ಕೆಲವೆಡೆ ಹೂವಿನ ಹಾರ, ಸೇಬಿನ ಹಾರ ಹಾಕುತ್ತಿರುತ್ತಾರೆ. ರಾಜಕಾರಣ(Political)ದಲ್ಲಿ ಇವೆಲ್ಲವೂ ಸಾಮಾನ್ಯ' ಎಂದರು.


K Sudhakar: 1 ರಿಂದ 9ನೇ ತರಗತಿ ಪರೀಕ್ಷೆ ರದ್ದು; ' ಶೀಘ್ರದಲ್ಲಿ ರಾಜ್ಯ ಸರ್ಕಾರದಿಂದ ನಿರ್ಧಾರ'!


'ಎಲ್ಲ ಘಟನೆಗಳನ್ನು ಬೆಳಗಾವಿ ಜನರು ನೋಡುತ್ತಿದ್ದಾರೆ. ನಾವು ಚುನಾವಣೆ ಮಾಡಲು ಬೆಳಗಾವಿಗೆ ಬಂದಿದ್ದೇವೆ. ಶಾಂತ ರೀತಿಯಿಂದ ಚುನಾವಣೆ ಮಾಡಿ ಹೋಗುತ್ತೇವೆ. ಬಿಜೆಪಿ(BJP)ಯವರು ಇಂಥ ಮುತ್ತು-ರತ್ನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲಿ, ಬಹಳ ಸಂತೋಷ. ರಮೇಶ ಬೆಂಬಲಿಗರು ಏನು ಬೇಕಾದರೂ ಮಾಡಲಿ. ಅವರು ಮಾಡಿದಷ್ಟು ನಮಗೆ ಅನುಕೂಲ' ಎಂದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿತ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ಧರಾಮಯ್ಯ ಆಗ್ರಹ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.