ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೇಸ್ ಅಂದ್ರೆ ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್.. ಇಡ್ಲಿ ತಿನ್ನೋ ನೆಪದಲ್ಲಿ ಹಾಡುಹಗಲೇ ಕೆಫೆಗೆ ಹೋಗಿದ್ದ ಶಂಕಿತ ಉಗ್ರ ಕೆಲವೇ ನಿಮಿಷಗಳಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದ‌. ಇಂದು ಶಂಕಿತರನ್ನ ಕೆಫೆಗೆ ಕರೆತಂದಿದ್ದ ಎನ್ಐಎ ಟೀಂ ಸ್ಥಳ ಮಹಜರು ಮಾಡಿದ್ರು. ಅಲ್ದೇ ಮಸೀದಿಯೊಂದರ ಬಳಿ ಕೂಡ ಕರ್ಕೊಂಡ್ ಹೋಗಿದ್ರು.


COMMERCIAL BREAK
SCROLL TO CONTINUE READING

ಅದು ಇದೇ ಮಾರ್ಚ್ ಒಂದನೇ ತಾರೀಖು. ಬೆಳಗ್ಗೆ 11-12 ಗಂಟೆ ಸುಮಾರಿಗೆ ಐಟಿಸಿಟಿಯ ಐಟಿಪಿಎಲ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಇಡ್ಲಿ ತಿನ್ನೋ ನೆಪದಲ್ಲಿ ಕೆಫೆಗೆ ಬಂದಿದ್ದ ಶಂಕಿತ ಉಗ್ರ ಬ್ಲಾಕ್ ಬ್ಯಾಗ್ ನಲ್ಲಿ ಬಾಂಬ್ ತಂದಿಟ್ಟು ಬ್ಲಾಸ್ಟ್ ಮಾಡಿದ್ದ. ಆ ಬಾಂಬರ್ ನನ್ನ ಅರೆಸ್ಟ್ ಮಾಡಿದ್ದ ಎನ್ಐಎ ಟೀಂ ಇವತ್ತು ಆತನನ್ನ ಕೆಫೆಗೆ ಕರೆತಂದು ಸ್ಥಳ ಮಹಜರು ನಡೆಸಿದ್ರು.


ಇದನ್ನೂ ಓದಿ: ರಾಜ್ಯ ಸರ್ಕಾರ ಬುಡಮೇಲು ಮಾಡಲು ಜೆಡಿಎಸ್-ಬಿಜೆಪಿ ಯತ್ನ
 
ಪ್ರಕರಣ ಸಂಬಂಧ ಐವರನ್ನ ಬಂಧಿಸಿದ್ದ ಎನ್ಐಎ ಅಧಿಕಾರಿಗಳಿಗೆ ಈ ಬಾಂಬರ್ ಮುಸಾವೀರ್ ಹುಸೇನ್ ಶಾಜಿಬ್ ಮುಖ್ಯ ಆರೋಪಿ. ಇವತ್ತು ಬೆಳಗ್ಗೆ 6.30ರ ಸುಮಾರಿಗೆ ಶಂಕಿತ ಉಗ್ರ ಮುಸಾವೀರ್ ನನ್ನ ಕರೆ ತಂದಿದ್ದ ಎನ್ಐಎ ಟೀಂ ಕೆಫೆಯಲ್ಲಿ ಐದೂವರೆ ತಾಸುಗಳ ಕಾಲ ಸ್ಥಳ ಮಹಜರು ಮಾಡಿಸಿದ್ರು.ಈ ವೇಳೆ ಮಾರ್ಚ್ ಒಂದನೇ ತಾರೀಖು ನಡೆದಿದ್ದ ಕ್ರೈಂ ಸೀನ್ ಅನ್ನ ಶಂಕಿತನಿಂದ ರೀ ಕ್ರಿಯೇಟ್ ಮಾಡಿಸಿದ್ರು. ಅವತ್ತು ಧರಿಸಿದ್ದ ಕಲರ್ ಶರ್ಟ್, ಪ್ಯಾಂಟ್, ಕ್ಯಾಪ್ , ಗ್ಲಾಸ್ ತರಹದ ಬಟ್ಟೆಯನ್ನೇ ಧರಿಸಿದ್ದ ಶಂಕಿತ ಉಗ್ರನಿಂದ ಸೀನ್ ಟು ಸೀನ್ ರೀಕ್ರಿಯೆಟ್ ಮಾಡಿಸಿದ್ರು. 


ಬಸ್ ಸ್ಟಾಪ್ ಗೆ ಎಷ್ಟೊತ್ತಿಗೆ ಬಂದ, ಕೆಫೆಯೊಳಗೆ ಎಷ್ಟೊತ್ತಿಗೆ ಹೋದ, ಯಾವ ರೀತಿ ನಡೆದುಕೊಂಡು ಹೋದ, ಬ್ಯಾಗ್ ಹಾಕಿಕೊಂಡು ಎಲ್ಲೆಲ್ಲಿ ಸುತ್ತಾಡಿದ್ದ, ಯಾವ ರೀತಿ ಇಡ್ಲಿ ಆರ್ಡರ್ ಮಾಡಿದ್ದ,ಬಾಂಬ್ ಇಟ್ಟ ಸ್ಥಳದಲ್ಲಿ ಹೇಗೆ ಬ್ಯಾಗ್ ಇಟ್ಟಿದ್ದ,ಅಲ್ಲಿಂದ ಎಷ್ಟೊತ್ತಿಗೆ ಹೋಗಿದ್ದ ಎಂಎಲ್ಲಾ ಸೀನ್ ಅನ್ನ ರೀ ಕ್ರಿಯೇಟ್ ಮಾಡಿಸಿದ ಎನ್ಐಎ ಅಧಿಕಾರಿಗಳು ನಾಲ್ಕೈದು ಬಾರಿ ಮರುಸೃಷ್ಟಿ ಮಾಡಿಸಿ ಪ್ರತಿ ಹೆಜ್ಜೆಯನ್ನೂ ಮಾರ್ಕ್ ಮಾಡಿ ವಿಡಿಯೋ ಶೂಟ್ ಮಾಡಿಕೊಂಡ್ರು.


ಇದನ್ನೂ ಓದಿ: ಪ್ರತಿ ಶಾಲೆಯಲ್ಲೂ ಮಕ್ಕಳ ಸ್ನೇಹಿ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ


ಅದಾದ ನಂತರ  ಸರಿಯಾಗಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಶಂಕಿತ ಉಗ್ರನನ್ನ ಕೆಫೆಯಿಂದ ಹೂಡಿ ಸರ್ಕಲ್ ಬಳಿಯ ಮಸೀದಿಗೆ ಕರೆದೊಯ್ದಿದ್ದ ಅಧಿಕಾರಿಗಳು ಅಲ್ಲಿ ಕೂಡ ಎರಡು ತಾಸು ಮಹಜರು ಮಾಡಿದ್ರು. ಬಾಂಬ್ ಬ್ಲಾಸ್ಟ್ ಮಾಡಿ ಎಸ್ಕೇಪ್ ಆಗಿದ್ದ ಮುಸಾವೀರ್ ಸೀದಾ ಮಸೀದಿ ಬಳಿ ಹೋಗಿದ್ದವನೇ ಅಲ್ಲಿ ಬಟ್ಟೆ ಬದಲಿಸಿ ಟೀ ಶರ್ಟ್ ಹಾಕಿಕೊಂಡು ಎಸ್ಕೇಪ್ ಆಗಿದ್ದ. ತನಿಖೆ ವೇಳೆ ಈ ವಿಚಾರ ಪತ್ತೆ ಮಾಡಿದ್ದ ಎನ್ಐಎ ಟೀಂ ಆತನನ್ನ ಮಸೀದಿ ಬಳಿ ಸುಮಾರು 50-60 ಮೀಟರ್ ಓಡಾಡಿದ್ದ ಸ್ಥಳದಲ್ಲಿ ಮಹಜರು ನಡೆಸಿದ್ರು. ಅಲ್ಲಿಯೂ ಸೀನ್ ರೀ ಕ್ರಿಯೇಟ್ ಮಾಡಿಸಿದ್ದ ಎನ್ಐಎ ಟೀಂ ಶಂಕಿತನ ಹೆಜ್ಜೆ ಹೆಜ್ಜೆಯನ್ನ ಮಾರ್ಕ್ ಮಾಡಿ ವಿಡಿಯೋಗ್ರಾಫಿ ಮಾಡಿಕೊಂಡ್ರು. ಮಧ್ಯಾಹ್ನ ಎರಡು ಗಂಟೆವರೆಗೂ ಮಸೀದಿ ಬಳಿ ಸ್ಥಳ ಮಹಜರು ನಡೆಸಿದ ಎನ್ಐಎ ನಂತರ ಆತನನ್ನ ಮತ್ತೆ ರಾಮೇಶ್ವರಂ ಕೆಫೆಗೆ ಕರೆದೊಯ್ದಿದ್ರು..


ಈ ಕೇಸ್ ನಲ್ಲಿ ಪ್ರಮುಖ ಸ್ಥಳಗಳು ಅಂದ್ರೆ ಕೆಫೆ ಮತ್ತು ಮಸೀದಿ. ಈ ಎರಡೂ ಸ್ಥಳಗಳಲ್ಲಿ ಪಿನ್ ಟು ಪಿನ್ ಸ್ಥಳ ಮಹಜರು ಮಾಡಿಸಿ ವಿಡಿಯೋಗ್ರಾಫಿ ಮಾಡಿಕೊಂಡಿರೋ ಎನ್ಐಎ ಟೀಂ ಅದನ್ನ ಡಾಕ್ಯುಮೆಂಟ್ ಮಾಡಿ ಕೋರ್ಟ್ ಗೆ ಸಬ್ಮಿಟ್ ಮಾಡಲಿದೆ‌. ಈಗಾಗಲೇ ಕೇಸ್ ತನಿಖೆಗೆ ಕೈಗೆತ್ತುಕೊಂಡು ಐದು ತಿಂಗಳಾಯ್ತು. ಕೆಲ ದಿನಗಳಲ್ಲಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲಿರೋ ಎನ್ಐಎ ಇವತ್ತಿನ ಸ್ಥಳ ಮಹಜರನ್ನ ಪ್ರಮುಖ ಸಾಕ್ಷ್ಯ ಅಂತಾ ಉಲ್ಲೇಖ ಮಾಡಲಿದೆ. ಇದು ಶಂಕಿತನಿಗೆ ಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.