ಬೆಂಗಳೂರು : ನಿನ್ನೆ(ಫೆ.4) ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಟೀಂ ಮುಖ್ಯಸ್ಥೆ ರಮ್ಯಾ ಟೀಕಿಸಿದ್ದು, ಇದಕ್ಕೆ ನಟ ಜಗ್ಗೇಶ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ನಡೆದ ಸಮಾವೇಶದಲ್ಲಿ "ರೈತರಿಗೆ ತಮ್ಮ ಮೊದಲ(top) ಆಧ್ಯತೆ" ಎಂದು ಹೇಳಿದ್ದಕ್ಕೆ ರಮ್ಯ ಅವರು, ''ನೀವು ನಶೆಯಲ್ಲಿದ್ದರೆ(POT) ಹೀಗೆ ಆಗೋದು, pot ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ "ಎಂದು ಟ್ವೀಟರ್​​​ನಲ್ಲಿ  ಟೀಕಿಸಿದ್ದರು.



ಅದಕ್ಕೆ ತಮ್ಮ ಟ್ವೀಟರ್ ಖಾತೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, "ದೊಡ್ಡವರ ಬಗ್ಗೆ ಮಾತಾಡುವ ಮಂದಿಗೆ ವಯಸ್ಸು, ಅನುಭವ ಬೇಕು. ವಿಶ್ವದ ಬಲಿಷ್ಠ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪ ಈಕೆ" ಎಂದಿದ್ದಾರೆ



ಮುಂದುವರೆದು ಟ್ವೀಟಿಸಿರುವ ಅವರು, ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸಿಕೊಂಡವರು ಯಾರನ್ನು ಬೇಕಾದರೂ ಟೀಕಿಸುತ್ತಾರೆ ಎಂದು ಅತಿ ಖಾರವಾಗಿ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. 



ರಮ್ಯ ಟ್ವೀಟ್ ಗೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಕೂಡ ಟ್ವಿಟರ್ನಲ್ಲಿ ಗರಂ ಟೀಕಿಸಿದ್ದು, "ರಮ್ಯಾ ಅವರ ಹೆಸರಿನಲ್ಲಿಯೇ ರಂ ಇದೆ. ಹಾಗಾಗಿ ಅವರು ನಷೆಯಲ್ಲಿದ್ದುಕೊಂಡು ಇಂತಹ ಟ್ವೀಟ್ಗಳನ್ನೂ ಮಾಡುತ್ತಾರೆ" ಎಂದಿದ್ದಾರೆ.