Elephant Arjuna Death: ದಸರಾ ಮೆರವಣಿಗೆಯಲ್ಲಿ 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಆನೆ ಅರ್ಜುನ, ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ದಾಳಿಗೆ ತುತ್ತಾಗಿ ತನ್ನ ಪ್ರಾಣ ಕಳೆದುಕೊಂಡಿದೆ.


COMMERCIAL BREAK
SCROLL TO CONTINUE READING

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಯಸ್ಲೂರು ಭಾಗದಲ್ಲಿ ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಯ ಸಮಯದಲ್ಲಿ, ಅರ್ಜುನನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಇದರಿಂದ ಅರ್ಜುನ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಇದನ್ನೂ ಓದಿ: 35KM ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ- ಖರೀದಿಗೆ ಇದು ಬೆಸ್ಟ್ ಟೈಂ


2019ರವರೆಗೆ ಅಂದರೆ ತನ್ನ 60ನೇ ವಯಸ್ಸಿನವರೆಗೆ ಎಂಟು ಸಂದರ್ಭಗಳಲ್ಲಿ ದಸರಾ ಮೆರವಣಿಗೆಯಲ್ಲಿ 750 ಕೆಜಿ ತೂಕದ ಅಂಬಾರಿಯನ್ನು ಅರ್ಜುನ ಹೊತ್ತಿದ್ದ. ಈಗ ಅರ್ಜುನನಿಗೆ 64 ವರ್ಷ ವಯಸ್ಸಾಗಿತ್ತು.


ಅರ್ಜುನ ಆನೆ ಜನಿಸಿದ್ದು 1960ರಲ್ಲಿ. ಇದು ಏಷ್ಯನ್ ಆನೆಯಾಗಿದ್ದು, 2012 ರಿಂದ 2019 ರವರೆಗೆ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. ಹಿಂದೂ ಮಹಾಕಾವ್ಯ ಮಹಾಭಾರತದ ಪಾಂಡವ ಸಹೋದರರಲ್ಲಿ ಮೂರನೆಯವನಾದ ಅರ್ಜುನನ ಹೆಸರನ್ನು ಈ ಆನೆಗೆ ಇಡಲಾಗಿತ್ತು.


ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಅರಣ್ಯದಿಂದ 1968ರಲ್ಲಿ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು. ಆ ಬಳಿಕ ಪಳಗಿಸಿ, 1990ರ ದಶಕದಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಅದಾದ ನಂತರ, ಅಂದು ಅಂಬಾರಿ ಹೊರುತ್ತಿದ್ದ ದ್ರೋಣಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಅರ್ಜುನನಿಗೆ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಹೊಂದಿರುವ 750 ಕೆಜಿ ತೂಕದ ಅಂಬಾರಿ ಹೊರುವ ಅವಕಾಶ ನೀಡಲಾಯಿತು.


ಇದಾದ ಬಳಿಕ ಕೆಲ ಘಟನೆಗಳಿಂದ ಅರ್ಜುನನ್ನು ಅಂಬಾರಿ ಹೊರುವ ಅವಕಾಶದಿಂದ ದೂರವಿಡಲಾಯಿತು. ಆದರೆ 2012 ರಿಂದ 2019 ರವರೆಗೆ (7 ವರ್ಷಗಳು)ಮತ್ತೆ ಅಂಬಾರಿಯನ್ನು ಹೊರುವ ಸೌಭಾಗ್ಯ ಅರ್ಜುನನ ಪಾಲಾಯಿತು. ಈಗ 60 ವರ್ಷ ಮೇಲ್ಪಟ್ಟ ಆನೆಗಳನ್ನು ನಿವೃತ್ತಿಗೊಳಿಸುವ ಸರ್ಕಾರದ ಆದೇಶದ ಮೇರೆಗೆ ಅರ್ಜುನನ ಹೆಸರನ್ನು ಕೈಬಿಡಲಾಗಿತ್ತು. ಅರ್ಜುನ ಬಳಿಕ ಈಗ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರುತ್ತಿದ್ದಾನೆ.


ಇದನ್ನೂ ಓದಿ: 15ನೇ ವಯಸ್ಸಿಗೆ ಓಡಿ ಹೋದ ಕಿರುತೆರೆಯ ಖ್ಯಾತ ನಟಿ.. ಮದುವೆಗೂ ಮುನ್ನ ಪ್ರೆಗ್ನೆಂಟ್!!


ಅದೇನೆ ಇರಲಿ, ನಾಡ ಅಧಿದೇವತೆ ಚಾಮುಂಡೇಶ್ವರಿಯ ಚಿನ್ನದ ಅಂಬಾರಿಯನ್ನು 8 ಬಾರಿ ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪು ಅಷ್ಟೇ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ