ಬೆಂಗಳೂರು: ಬಿಬಿಎಂಪಿ ಶಾಲೆಗಳು ಅಂದ್ರೆ ಜನಕ್ಕೆ ಮಾತ್ರವಲ್ಲ, ಪಾಲಿಕೆಗೂ ಅಸಡ್ಡೆಯೇ. ಯಾಕಂದ್ರೆ ತಕ್ಕಮಟ್ಟಿನ ಮೂಲಭೂತ ಸೌಕರ್ಯ ಇದ್ರೂ, ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ ಅನ್ನೋ ಅರೋಪ ಮೊದಲಿನಿಂದಲೂ ಕೇಳಿ ಬರ್ತಿದೆ, ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಪಾಠ ಮಾಡೋ ಶಿಕ್ಷಕರಿಗೆ ವಿದ್ಯಾರ್ಹತೆಯೇ ಇಲ್ವಂತೆ, ಹಾಗಂತ ನಾವು ಹೇಳ್ತಿಲ್ಲ, ಖುದ್ದು ಬಿಬಿಎಂಪಿ ಅಧಿಕಾರಿಗಳು ನಡೆಸಿರೋ ತನಿಖೆ ವರದಿಯಲ್ಲಿ ಸತ್ಯ ಹೊರ ಬಿದ್ದಿದೆ,


COMMERCIAL BREAK
SCROLL TO CONTINUE READING

ವಿದ್ಯಾರ್ಹತೆ  ಇಲ್ಲದಿದ್ರೂ ಕೂಡ ಬಿಬಿಎಂಪಿ, ಶಿಕ್ಷಕರ ನೇಮಕ ಮಾಡಿಕೊಂಡಿದೆ. ಹೊರಗುತ್ತಿಗೆ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿರೋ ಶಂಕೆ ವ್ಯಕ್ತವಾಗಿದೆ, ಲಂಚಕಾಗಿ ಶಿಕ್ಷಣ ವ್ಯವಸ್ಥೆಯನ್ನೇ ಮಾರಿಕೊಂಡ ಬಿಬಿಎಂಪಿ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡ್ತಿದ್ದಾರೆ. ಪ್ರತಿ ಅನರ್ಹ ಶಿಕ್ಷಕರ ನೇಮಕಾತಿಗಾಗಿ ಲಕ್ಷಾಂತರ ಹಣ ಲಂಚ ಪಡೆದು ಪಾಲಿಕೆಯ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಕುರಿತು ಸಮಗ್ರ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ


ಪಾಲಿಕೆಯ ಶಾಲಾ ಕಾಲೇಜಿನಲ್ಲಿ ಪಾಠ ಮಾಡೋ ಸುಮಾರು 181 ಶಿಕ್ಷಕರಿಗೆ ಅಹರ್ತೆಯೇ ಇಲ್ವಂತೆ, ಶಿಕ್ಷಣದ ಹೆಸರಲ್ಲಿ ನಕಲಿ ಶಿಕ್ಷಕರನ್ನ ನೇಮಿಸಿಕೊಂಡಿರೋ ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳ ಶಿಕ್ಷಣದ ಬಗ್ಗೆ ಕಿಂಚಿತ್ತೂ ಯೋಚಿಸಿಲ್ಲ. ಇದೇ ಕಾರಣದಿಂದ ಫಲಿತಾಂಶದ ಮಟ್ಟ ಕಡಿಮೆ ಆಗಿದೆ ಎನ್ನಲಾಗ್ತಿದೆ...


ತನಿಖೆಯಲ್ಲಿ ಬಯಲಾದ ನಕಲಿ ಶಿಕ್ಷಕರ ನೇಮಕಾತಿ ವಿಚಾರ


ಶಿಶುವಿಹಾರ ಶಿಕ್ಷಕರು - 48
ಪ್ರಾಥಮಿಕ ಶಾಲೆ ಶಿಕ್ಷಕರು - 70
ಪೌಢ ಶಾಲೆ ಶಿಕ್ಷಕರು - 04
ಗಣಕಯಂತ್ರ ಶಿಕ್ಷಕರು - 29
ಪದವಿ ಕಾಲೇಜು ಶಿಕ್ಷಕರು - 17
ಪದವಿ ಪೂರ್ವ ಕಾಲೇಜು ಶಿಕ್ಷಕರು - 13


\ಅರ್ಹತೆ ಇಲ್ಲದಿದ್ರೂ ನೇಮಕಾತಿ ಆಗಿರೋ ಇಷ್ಟು ಜನರ ಮಾಹಿತಿ ಪಾಲಿಕೆಯ ಶಿಕ್ಷಣ ವಿಭಾಗದ ಮುಖ್ಯಸ್ಥರಿಗೆ ತಿಳಿದಿದೆ. ಆದ್ರೂ ಕೂಡ ಕ್ರಮವನ್ನು ತೆಗೆದುಕೊಳ್ಳದೇ ನಿರ್ಲಕ್ಷ ವಹಿಸಿರೋದ್ರಿಂದ ಅವರ ವಿರುದ್ದ ಕ್ರಮ ಜರುಗಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂಬುದು ಜನರ ಕೋರಿಕೆಯಾಗಿದೆ.


ಇದನ್ನೂ ಓದಿ: ಯಾರಿಗಾದರೂ ʼಒಳ್ಳೆ ಫಿಗರ್ ಗುರುʼ ಎಂದು ರೇಗಿಸುವ ಮುನ್ನ ಹುಷಾರ್‌ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.