DK Shivakumar: ಖಾತೆ ಹಂಚಿಕೆ ವಿಚಾರಕ್ಕೆ, ಅದೆಲ್ಲ ಸಿಎಂ ಹಾಗೂ ಹೈ ಕಮಾಂಡ್ ಗೆ ಬಿಟ್ಟ ವಿಚಾರ - ಡಿಕೆ ಶಿವಕುಮಾರ್
DK shivakumar: ಸಚಿವ ಸಂಪುಟ ರಚನೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಪೂರ್ಣ ಸಚಿವ ಸಂಪುಟ ಆಗೇ ಆಗುತ್ತದೆ. 24ನೇ ತಾರೀಕು ಹೊಸ ಸದಸ್ಯರು ಆಗಬೇಕು. 26 ರಂದು ಹಳೆ ಸರ್ಕಾರದ ಅವಧಿ ಮುಗಿಯಲಿದೆ.
ಬೆಂಗಳೂರು: ಸಚಿವ ಸಂಪುಟ ರಚನೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಪೂರ್ಣ ಸಚಿವ ಸಂಪುಟ ಆಗೇ ಆಗುತ್ತದೆ. 24ನೇ ತಾರೀಕು ಹೊಸ ಸದಸ್ಯರು ಆಗಬೇಕು. 26 ರಂದು ಹಳೆ ಸರ್ಕಾರದ ಅವಧಿ ಮುಗಿಯಲಿದೆ.
ಅಷ್ಟರ ಒಳಗೆ ಸಂಪುಟ ರಚನೆ ಆಗಬೇಕಿದೆ. ಎರಡು ಮೂರು ದಿನದಲ್ಲಿ ಸಚಿವರ ಪ್ರಮಾಣ ವಚನ ಆಗಲಿದೆ. 24 ರಂದು ನಾನು ರಾಜ್ಯಪಾಲರ ಸಮಯಾವಕಾಶ ಕೇಳಿದ್ದೆ. 25 ಕ್ಕೆ ರಾಜ್ಯ ಪಾಲರು ಇರೋದಿಲ್ಲ ಅಂತ ಹೇಳಿದ್ದಾರೆ. 24 ರ ಒಳಗೆ ಹೊಸ ಸದಸ್ಯರು ಸಂಪುಟ ಸೇರಿಕೊಳ್ತಾರೆ ಎಂದರು.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ನೀರಿಗೆ ಮುಳುಗಿದ ಕಾರು: ಕಾರಿನಲ್ಲಿದ್ದ ಪುಟ್ಟ ಕಂದಮ್ಮನಿಗಾಗಿ ಶೋಧ
ಖಾತೆ ಹಂಚಿಕೆ ವಿಚಾರಕ್ಕೆ, ಅದೆಲ್ಲ ಸಿಎಂ ಹಾಗೂ ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಅದೆಲ್ಲವನ್ನೂ ಅವರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಮೊದಲ ಸಚಿವ ಸಂಪುಟದ ಪಟ್ಟಿಯಲ್ಲಿ ಹಿರಿಯ ನಾಯಕರ ಹೆಸರಿಲ್ಲದ ವಿಚಾರಕ್ಕೆ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಗರಂ ಆದ ಡಿಕೆಶಿ, ನಿಮ್ಮ ತರ್ಲೆ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳನ್ನು ತನಿಖೆಗೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಈಗ ಇದರ ಬಗ್ಗೆ ಮಾತಾಡುವುದಕ್ಕೆ ಹೊಗಲ್ಲ. ಯಾವ ವಿಚಾರದ ಬಗ್ಗೆ ಕೂಡ ನಾನು ಮಾತಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಪುನಃಸ್ಥಾಪನೆಗೆ ಮುಂದಾದ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ
ಇನ್ನುಳಿದಂತೆ ಸಿದ್ದರಾಮಯ್ಯ ವಾಚ್ ಸ್ವಾರಸ್ಯ ಬಗ್ಗೆ ಡಿಕೆಶಿ,ರಾಜ್ಯದ ಮುಖ್ಯಮಂತ್ರಿ ಆಗಿ ಎರಡನೇ ಬಾರಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರಿಗೆ ಪತ್ನಿ ಹೊಸ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದೇ ವಾಚನ್ನು ಇಂದು ಧರಿಸಿ ಬಂದಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂ ಬಿ ಪಾಟೀಲ್ ಗೆ ತೋರಿಸಿ ಸಂತಸ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಮೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ನಿನ್ನೆಯಷ್ಟೇ ನೂತನ ಮುಖ್ಯಮಂತ್ರಿ ಆಗಿ ಅಧಿಕಾರವಹಿಸಿಕೊಂಡಿರುವ ಸಿದ್ದರಾಮಯ್ಯಗೆ ಅವರ ಪತ್ನಿ ಹೊಸ ವಾಚನ ಉಡುಗೊರೆಯಾಗಿ ನೀಡಿದ್ದಾರೆ. ಇಂದು ಅವರು ಅದನ್ನು ಧರಿಸಿ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ರಾಡೋ ವಾಚನ್ನು ಹೊತ್ತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಹೆಮ್ಮೆಯಿಂದ ಧರಿಸಿ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ ಎಂದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ